ETV Bharat / city

ಮಹದೇವಪುರದಲ್ಲಿ ವಿಜಯ ದಶಮಿ ಸಂಭ್ರಮ: 50ಕ್ಕೂ ಹೆಚ್ಚು ಗ್ರಾಮ ದೇವತೆಗಳ ಮೆರವಣಿಗೆ - Dasara festival celebration

ಮಹದೇವಪುರದ ಕಾಡುಗುಡಿ ಸುತ್ತಮುತ್ತಲಿನ ವಿವಿಧ ಗ್ರಾಮಗಳ 50ಕ್ಕೂ ಹೆಚ್ಚು ಗ್ರಾಮ ದೇವತೆಗಳನ್ನು ಮೆರವಣಿಗೆ ಮಾಡಲಾಯಿತು. ಮಹದೇವಪುರದ ಶಾಸಕ ಅರವಿಂದ ಲಿಂಬಾವಳಿ ಗ್ರಾಮದೇವತೆಗಳ ಉತ್ಸವದಲ್ಲಿ ಭಾಗಿಯಾಗಿದ್ದರು.

Dasara festival celebration in Mahadevapur
ಗ್ರಾಮ ದೇವತೆಗಳ ಮೆರವಣಿಗೆ
author img

By

Published : Oct 15, 2021, 8:28 PM IST

ಮಹದೇವಪುರ(ಬೆಂಗಳೂರು): ವಿಜಯ ದಶಮಿ ಪ್ರಯುಕ್ತ ಕಾಡುಗುಡಿ ಸುತ್ತಮುತ್ತಲಿನ ವಿವಿಧ ಗ್ರಾಮಗಳ 50ಕ್ಕೂ ಹೆಚ್ಚು ಗ್ರಾಮ ದೇವತೆಗಳ ಪಲ್ಲಕ್ಕಿಯನ್ನು ಮೆರವಣಿಗೆ ಮಾಡಲಾಯಿತು. ಬಳಿಕ ವೈಟ್‌ಫೀಲ್ಡ್ ಸಮೀಪದ ಅಂಬೇಡ್ಕರ್ ನಗರದ ದಸರಾ ಮೈದಾನದಲ್ಲಿ ಎಲ್ಲಾ ಗ್ರಾಮದ ಜನರು ಸೇರಿ ನಾಡಹಬ್ಬವನ್ನು ಆಚರಿಸಿದರು.

ಮಹದೇವಪುರದಲ್ಲಿ ವಿಜಯ ದಶಮಿ ಸಂಭ್ರಮ..

ಪ್ರತಿ ವರ್ಷದಂತೆ ಈ ವರ್ಷವು ನವರಾತ್ರಿ ಉತ್ಸವದ ನಿಮಿತ್ತ 9 ದಿನಗಳ ವಿಶೇಷ ಪೂಜೆಯ ನಂತರ ಕಾಡುಗುಡಿ ಸುತ್ತಮುತ್ತಲಿನ ಚನ್ನಸಂದ್ರ, ಎಕೆಜಿ ಕಾಲೋನಿ, ನಾಗೋಂಡನಹಳ್ಳಿ, ಇಮ್ಮಡಿಹಳ್ಳಿ, ನಲ್ಲೂರಹಳ್ಳಿ, ರಾಮಗೊಂಡನಹಳ್ಳಿ, ಪಟ್ಟಂದೂರು ಅಗ್ರಹಾರ, ದಿನ್ನೂರು, ಬೆಳ್ಳತ್ತೂರಿನ ಆಂಜನೇಯ ಸ್ವಾಮಿ, ಬಸವೇಶ್ವರ ಸ್ವಾಮಿ, ಶನಿ ಮಹಾತ್ಮ, ಮುನೇಶ್ವರ, ಮಾರಮ್ಮ, ಸಪಲ್ಲಮ್ಮ, ಯಲ್ಲಮ್ಮ, ಗಂಗಮ್ಮ ದೊಡ್ಡಮ್ಮ ಸೇರಿದಂತೆ ವಿವಿಧ ಗ್ರಾಮದೇವತೆಗಳನ್ನು ಮೆರವಣಿಗೆ ಮಾಡಿ‌ ಪೂಜೆ ಸಲ್ಲಿಸಿದರು.

ಮಹದೇವಪುರದ ಶಾಸಕ ಅರವಿಂದ ಲಿಂಬಾವಳಿ ಗ್ರಾಮದೇವತೆಗಳ ಉತ್ಸವದಲ್ಲಿ ಭಾಗಿಯಾಗಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ನೆರೆದಿದ್ದ ಎಲ್ಲರಿಗೂ ಬನ್ನಿ ಮರದ ಎಲೆಗಳನ್ನು ನೀಡಿದರು. ಗ್ರಾಮ ದೇವತೆಗಳ ಉತ್ಸವದಲ್ಲಿ ಡೊಳ್ಳು ಕುಣಿತ, ಕಂಸಾಳೆ ನೃತ್ಯ, ತಮಟೆ ವಾದ್ಯ ಮತ್ತು ತಮಟೆ ವಾದ್ಯಕ್ಕೆ ಮಂಗಳ ಮುಖಿಯರ ಡ್ಯಾನ್ಸ್ ನೆರೆದಿದ್ದ ಸಾವಿರಾರು ಮಂದಿ ಸಾರ್ವಜನಿಕರನ್ನು ಆಕರ್ಷಿಸಿತು.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಲಿಂಬಾವಳಿ, ಕ್ಷೇತ್ರ ಅಧ್ಯಕ್ಷ ಮನೋಹರ ರೆಡ್ಡಿ, ಮಾರಪ್ಪ, ರಾಜರೆಡ್ಡಿ, ಕಬ್ಬಡಿ ಪಿಳ್ಳಪ್ಪ, ಪ್ರಶಾಂತ್ ರೆಡ್ಡಿ ಮತ್ತಿತರರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.