ETV Bharat / city

ಸೈಬರ್ ದೋಖಾ: 30 ಲಕ್ಷ ಸಾಲ ಸಿಗುತ್ತೆ ಅಂತಾ ನಂಬಿ 4 ಲಕ್ಷ ಕಳೆದುಕೊಂಡ ವ್ಯಕ್ತಿ!

ಹನುಮಂತನಗರದ ನಿವಾಸಿ ಮಂಜು ಎಂಬುವವರಿಗೆ ಅಪರಿಚಿತರು ಕರೆ ಮಾಡಿ ತಾವು ಬಜಾಜ್​ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ತಮಗೆ 30 ಲಕ್ಷ ರೂಪಾಯಿ ಸಾಲ ನೀಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಶುಲ್ಕವಾಗಿ ನಾಲ್ಕು ಲಕ್ಷ ರೂಪಾಯಿ ನೀಡಬೇಕೆಂದು ಹೇಳಿದ್ದಾರೆ.

cyber crime police
ಸೈಬರ್ ಕ್ರೈಂ ಪೊಲೀಸರು
author img

By

Published : Aug 4, 2020, 3:13 PM IST

ಬೆಂಗಳೂರು: ಬಜಾಜ್ ಫೈನಾನ್ಸ್​ ಕಂಪನಿಯಿಂದ ಸಾಲ ಕೊಡಿಸುವುದಾಗಿ ನಂಬಿಸಿ ಅಪರಿಚಿತರು ನಾಲ್ಕು ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಹನುಮಂತನಗರದ ನಿವಾಸಿ ಮಂಜು ಎಂಬುವವರಿಗೆ ಅಪರಿಚಿತರು ಕರೆ ಮಾಡಿ ತಾವು ಬಜಾಜ್​ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ತಮಗೆ 30 ಲಕ್ಷ ರೂಪಾಯಿ ಸಾಲ ನೀಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಶುಲ್ಕವಾಗಿ ನಾಲ್ಕು ಲಕ್ಷ ರೂಪಾಯಿ ನೀಡಬೇಕೆಂದು ಹೇಳಿದ್ದಾರೆ.

ಇದನ್ನು ನಂಬಿದ ಮಂಜು ಕೆಲವು ದಾಖಲಾತಿಗಳನ್ನು ನೀಡಿ, 4 ಲಕ್ಷ ರೂಪಾಯಿಗಳನ್ನು ಸೈಬರ್ ವಂಚಕರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಹಣ ಜಮೆಯಾಗುತ್ತಿದ್ದಂತೆ ಆರೋಪಿಗಳು ಫೋನ್ ಸ್ವಿಚ್​ ಆಫ್​ ಮಾಡಿಕೊಂಡಿದ್ದು, ಮಂಜು ದಕ್ಷಿಣ ವಿಭಾಗದ ಸೈಬರ್ ಕ್ರೈಮ್​ ಪೊಲೀಸರಿಗೆ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.