ETV Bharat / city

ಅಕಾಲಿಕ ಮಳೆಗೆ ಕಂಗೆಟ್ಟ ರೈತಾಪಿ ವರ್ಗ; ಈವರೆಗೆ ಬೆಳೆ ಹಾನಿಗೆ ಸಿಕ್ಕ ಪರಿಹಾರವೆಷ್ಟು? - Bangalore

ಅಕಾಲಿಕ ಮಳೆಯಿಂದ (Heavy rain) ಕರುನಾಡು ಮತ್ತೆ ನಲುಗಿ ಹೋಗಿದೆ‌. ಬೆಳೆ, ಮನೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಕಳೆದ ಬಾರಿಯೂ ರಾಜ್ಯ ಅತಿವೃಷ್ಟಿಯಿಂದ ತತ್ತರಿಸಿ ಹೋಗಿತ್ತು. ಹಿಂದೆ ಮಳೆಯಿಂದ ಬೆಳೆ ಹಾನಿ (Crop Loss ಪರಿಹಾರ ಸಂತ್ರಸ್ತರ ಕೈ ಸೇರಿಲ್ಲ ಎಂಬ ಆರೋಪದ ನಡುವೆಯೇ ಈವರೆಗೆ ಸರ್ಕಾರ ಪಾವತಿಸಿದ ಪರಿಹಾರ ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Crop washed away in Flood; Compensation status in Karnataka
ಅಕಾಲಿಕ ಮಳೆಗೆ ಕಂಗೆಟ್ಟ ರೈತಾಪಿ ವರ್ಗ; ಈವರೆಗೆ ಬೆಳೆ ಹಾನಿಗೆ ಸಿಕ್ಕ ಪರಿಹಾರವೆಷ್ಟು?
author img

By

Published : Nov 21, 2021, 4:09 AM IST

ಬೆಂಗಳೂರು: ವರುಣನ ಆರ್ಭಟಕ್ಕೆ (Heavy rain) ಕರುನಾಡು ಕಳೆದ ಮೂರು ವರ್ಷದಿಂದಲೂ ತತ್ತರಿಸಿ ಹೋಗಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ರೈತರು ಕಂಗೆಟ್ಟು ಹೋಗಿದ್ದಾರೆ.‌ ಇನ್ನೇನು ಈ ಬಾರಿ ಕಳೆದ ಬಾರಿಯ ವರಣಾರ್ಭಟ ಇಲ್ಲ ಎಂದುಕೊಳ್ಳುವಷ್ಟರಲ್ಲೇ ಅಕಾಲಿಕ ಮಳೆ ಸುರಿದು ಮತ್ತೆ ಅತಿವೃಷ್ಟಿ ಸೃಷ್ಟಿಸಿದೆ.

ಬೆಳೆದು ನಿಂತ ಕೃಷಿ ಭೂಮಿಗೆ ನೀರು ನುಗ್ಗಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿನ‌ ಬೆಳೆ ಹಾನಿಗೀಡಾಗಿದೆ (Crop Loss). ಇದರಿಂದ ರೈತರು ತತ್ತರಿಸಿ ಹೋಗಿದ್ದು, ಅನ್ನದಾತರ ಬೆಳೆ ಹಾನಿ‌ ಪರಿಹಾರಕ್ಕಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ.

ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ ಮರುಣ ಅಬ್ಬರಿಸುತ್ತಲೇ ಇದ್ದಾನೆ. ಬೆಳೆ ಹಾನಿಯಿಂದ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಸರ್ಕಾರ ಮಳೆ ಹಾನಿ ಪರಿಹಾರ ಪಾವತಿಸಿಲ್ಲ ಎಂಬ ಆರೋಪ ಅನೇಕ ಜಿಲ್ಲೆಯ ಕೇಳಿ ಬರುತ್ತಿದೆ. ಇತ್ತ ಸರ್ಕಾರ ಬಹುತೇಕ ರೈತರಿಗೆ ಮಳೆ ಹಾನಿ ಪರಿಹಾರ ಪಾವತಿಯಾಗಿದೆ ಎಂದು ಹೇಳುತ್ತಲೇ ಬರುತ್ತಿದೆ.

ರೈತರಿಗೆ ಪಾವತಿಯಾದ ಪರಿಹಾರದ ಸ್ಥಿತಿಗತಿ ಏನು?:
2019ರಲ್ಲಿ 15,25,233 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಸುಮಾರು 6,71,314 ಫಲಾನುಭವಿಗಳಿಗೆ ಬೆಳೆ ಹಾನಿ ಪಾವತಿಸಲಾಗಿದೆ. 1,232.20 ಕೋಟಿ ರೂ. ಪರಿಹಾರವನ್ನು ಪಾವತಿಸಲಾಗಿದೆ ಎಂದು ಕಂದಾಯ ಇಲಾಖೆ ಅಂಕಿಅಂಶ ನೀಡಿದೆ.

2020ರಲ್ಲಿ ಸುರಿದ ಭಾರೀ ಮಳೆಗೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ರಾಜ್ಯಾದ್ಯಂತ ಸುಮಾರು 19,68,247 ಹೆಕ್ಟೇರ್ ಜಮೀನಿನಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಒಟ್ಟು 12,00,346 ಫಲಾನುಭವಿಗಳನ್ನು ಗುರುತಿಸಲಾಗಿತ್ತು. 941.70 ಕೋಟಿ ರೂ.‌ ಬೆಳೆ ಹಾನಿ ಪರಿಹಾರವನ್ನು ರೈತರಿಗೆ ಪಾವತಿಸಲಾಗಿದೆ.

Crop washed away in Flood; Compensation status in Karnataka
ರೈತರಿಗೆ ಈವರೆಗೆ ಬೆಳೆ ಹಾನಿಗೆ ಸಿಕ್ಕ ಪರಿಹಾರವೆಷ್ಟು?
2021ರಲ್ಲಿ ನೀಡಿದ್ದ ಪರಿಹಾರ ಏಷ್ಟು?2021ರಲ್ಲಿ ಕಳೆದ ಬಾರಿಯಷ್ಟು ಅಲ್ಲವಾದರೂ ಕೆಲ ಭಾಗಗಳಲ್ಲಿ ಮಳೆ ತನ್ನ ರೌದ್ರಾವತಾರ ತೋರಿತ್ತು. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಳೆ ಅಬ್ಬರಿಸಿತ್ತು.‌ ಇದರಿದಾಂಗಿ ಬೆಳೆ ನಷ್ಟ ಅನುಭವಿಸಿದ್ದ 1,51,429 ಫಲಾನುಭವಿಗಳಿಗೆ ಈವರೆಗೆ ಪರಿಹಾರವನ್ನು ಪಾವತಿಸಲಾಗಿದೆ. ಒಟ್ಟು 130 ಕೋಟಿ ರೂ. ಪರಿಹಾರವನ್ನು ಪಾವತಿ ಮಾಡಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಬೆಳಗಾವಿಯಲ್ಲಿ 76,309 ಫಲಾನುಭವಿಗಳಿಗೆ 68.98 ಕೋಟಿ ರೂ. ಪರಿಹಾರ ನೀಡಲಾಗಿದೆ. ಬಾಗಲಕೋಟೆಯಲ್ಲಿ 20,320 ಫಲಾನುಭವಿಗಳಿಗೆ 21.89 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. ಹಾವೇರಿಯಲ್ಲಿ 6,945 ಫಲಾನುಭವಿಗಳಿಗೆ 3.18 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. ಉ.ಕನ್ನಡದಲ್ಲಿ 2,565 ಫಲಾನುಭವಿಗಳಿಗೆ 89 ಲಕ್ಷ ರೂ. ಪರಿಹಾರ ಪಾವತಿ ಮಾಡಲಾಗಿದೆ. ಗದಗ್‌ನಲ್ಲಿ 2,843 ಫಲಾನುಭವಿಗಳಿಗೆ 3.71 ಕೋಟಿ ರೂ. ಪರಿಹಾರ ನೀಡಲಾಗಿದೆ. ರಾಯಚೂರಿನಲ್ಲಿ 1,909 ರೈತರಿಗೆ 2.27 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ.

ಯಾದಗಿರಿಯಲ್ಲಿ 1,127 ಫಲಾನುಭವಿಗಳಿಗೆ 1.25 ಕೋಟಿ ರೂ., ಶಿವಮೊಗ್ಗದಲ್ಲಿ 7,028 ಫಲಾನುಭವಿಗಳಿಗೆ 3.22 ಕೋಟಿ ರೂ.‌, ದಾವಣಗೆರೆಯಲ್ಲಿ 2,926 ಫಲಾನುಭವಿಗಳಿಗೆ 88 ಲಕ್ಷ ರೂ., ಧಾರವಾಡದಲ್ಲಿ 4,489 ಫಲಾನುಭವಿಗಳಿಗೆ 3.18 ಕೋಟಿ ರೂ. ಪರಿಹಾರ ನೀಡಲಾಗಿದೆ.

ದ‌‌.ಕನ್ನಡದಲ್ಲಿ 204 ಫಲಾನುಭವಿಗಳಿಗೆ 13 ಲಕ್ಷ ರೂ., ಬಳ್ಳಾರಿಯಲ್ಲಿ 279 ಫಲಾನುಭವಿಗಳಿಗೆ 11 ಲಕ್ಷ ರೂ., ವಿಜಯಪುರದಲ್ಲಿ 816 ಫಲಾನುಭವಿಗಳಿಗೆ 92 ಲಕ್ಷ ರೂ., ಚಿಕ್ಕಮಗಳೂರಲ್ಲಿ 587 ಫಲಾನುಭವಿಗಳಿಗೆ 49 ಲಕ್ಷ ರೂ., ಕಲಬುರ್ಗಿಯಲ್ಲಿ 23,048 ಫಲಾನುಭವಿಗಳಿಗೆ 18.82 ಕೋಟಿ ರೂ.‌ ಪರಿಹಾರ ಪಾವತಿ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಅಂಕಿಅಂಶ‌ ನೀಡಿದೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ನಿಲ್ಲದ ಮಳೆ: ನೆಲಕಚ್ಚಿದ 700 ಎಕರೆ ಬೆಳೆ, ಕಂಗಾಲಾದ ಅನ್ನದಾತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.