ETV Bharat / city

ವಿಧಾನ ಪರಿಷತ್ ಕದನ: ಗ್ರಾಮ ಪಂಚಾಯತ್ ಸದಸ್ಯರೇ ನಿರ್ಣಾಯಕರು..!

author img

By

Published : Nov 19, 2021, 4:17 AM IST

ಸ್ಥಳೀಯ ಸಂಸ್ಥೆಗಳಿಂದ 25 ಸ್ಧಾನಗಳಿಗೆ ನಡೆಯುತ್ತಿರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಈ ಬಾರಿ ಬಿಬಿಎಂಪಿ,‌ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸದಸ್ಯರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿ ಸದಸ್ಯರೇ ಚುನಾವಣೆಯಲ್ಲಿ ನಿರ್ಣಾಯಕರಾಗಿದ್ದಾರೆ.

Council election : Determinants of Gram Panchayat members..!
ವಿಧಾನ ಪರಿಷತ್ ಕದನ: ಗ್ರಾಮ ಪಂಚಾಯತ್ ಸದಸ್ಯರೇ ನಿರ್ಣಾಯಕರು..!

ಬೆಂಗಳೂರು: 20 ಸ್ಥಳೀಯ ಸಂಸ್ಥೆಗಳ 25 ಸ್ಥಾನಗಳಿಗೆ ನಡೆಯುತ್ತಿರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಅದರಲ್ಲಿಯೂ ಗ್ರಾಮ ಪಂಚಾಯತ್ ಸದಸ್ಯರೇ ನಿರ್ಣಾಯಕರಾಗಿದ್ದಾರೆ. ಹಾಗಾಗಿ ಎಲ್ಲಾ ಪಕ್ಷಗಳ ಚಿತ್ತ ಇದೀಗ ಗ್ರಾಮ ಪಂಚಾಯತ್ ಸದಸ್ಯರತ್ತ ನೆಟ್ಟಿದೆ.

ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ 47,368 ಪುರುಷ, 51,474 ಮಹಿಳೆಯರು ಹಾಗೂ ಮೂವರು ಇತರ ಮತದಾರರು ಸೇರಿ ಒಟ್ಟು 98,846 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಇದಕ್ಕಾಗಿ 6,073 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಬಿಬಿಎಂಪಿ, ಜಿ.ಪಂ.,ತಾ.ಪಂ ಸದಸ್ಯರಿಗಿಲ್ಲ ಮತದಾನ

ಈ ಚುನಾವಣೆಗೆ ಜನರು ಮತದಾರರಲ್ಲ, ಜನರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳು ಮಾತ್ರ ಮತದಾನದ ಹಕ್ಕು ಹೊಂದಿರಲಿದ್ದಾರೆ. ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆ, ಬಿಬಿಎಂಪಿ, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಿಗೆ ಮತದಾನದ ಹಕ್ಕು ಇರಲಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಬಿಎಂಪಿ,‌ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸದಸ್ಯರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಇವುಗಳ ಅವಧಿ ಮುಗಿದಿರುವ ಕಾರಣ ಈ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಚುನಾವಣಾ ಆಯೋಗ ಕೈಬಿಟ್ಟಿದೆ.

ಸದ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮಾತ್ರ ಮತದಾರರಾಗಿದ್ದು, ಗ್ರಾಮ ಪಂಚಾಯತ್ ಸದಸ್ಯರ ಸಂಖ್ಯೆ ಅತಿ ಹೆಚ್ಚಾಗಿದೆ. ಇವರೇ ಈ ಚುನಾವಣೆಯ ನಿರ್ಣಾಯಕರೂ ಆಗಲಿದ್ದಾರೆ. ಹಾಗಾಗಿ ಎಲ್ಲಾ ಪಕ್ಷಗಳು ಈಗ ಗ್ರಾಮ ಪಂಚಾಯತ್ ನತ್ತ ತಮ್ಮ ನಡಿಗೆ ಆರಂಭಿಸಿವೆ.

ಆಡಳಿತಸರೂಢ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಂಚಾಯತ್‌ಗೆ ನೀಡಿರುವ ಅನುದಾನ, ಕೊಟ್ಟಿರುವ ಯೋಜನೆಗಳನ್ನು ಮನವರಿಕೆ ಮಾಡಿ ಸದಸ್ಯರ ಸೆಳೆಯುವ ಪ್ರಯತ್ನ ನಡೆಸುತ್ತಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಸದಸ್ಯರ ಮುಂದಿಟ್ಟು ಮತ ಸೆಳೆಯಲು ಮುಂದಾಗಿದೆ. ಇದರ ನಡುವೆ ಜೆಡಿಎಸ್ ಪ್ರಾದೇಶಿಕ ಅಸ್ಮಿತೆಯ ಅಸ್ತ್ರ ಪ್ರಯೋಗಿಸುವ ಲೆಕ್ಕಾಚಾರ ಹಾಕಿದೆ.

ಮತದಾರರನ್ನು ಸೆಳೆಯಲು ಬಿಜೆಪಿ ಜನಸ್ವರಾಜ್ ಯಾತ್ರೆ
ಮೂರೂ ಪಕ್ಷಗಳು ಅಭ್ಯರ್ಥಿಗಳ ಘೋಷಣೆ ಬಾಕಿ ಇರಿಸಿಕೊಂಡಿದ್ದರೂ ಸ್ಥಳೀಯವಾಗಿ ಪ್ರಚಾರ ಕಾರ್ಯವನ್ನು ಆರಂಭಿಸಿವೆ. ಇದರಲ್ಲಿ ಬಿಜೆಪಿ ಸ್ವಲ್ಪ ಮುಂಚೂಣಿಯಲ್ಲಿದ್ದು, ಚುನಾವಣೆ ನಡೆಯುವ ಎಲ್ಲಾ ಜಿಲ್ಲೆಗಳಲ್ಲಿಯೂ ನಿನ್ನೆಯಿಂದ ನಾಲ್ಕು ದಿನಗಳ ಕಾಲ ಜನಸ್ವರಾಜ್ ಯಾತ್ರೆ ಆರಂಭಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಆರಂಭಿಸಿದೆ.

ಒಟ್ಟಿನಲ್ಲಿ 20 ಸ್ಥಳೀಯ ಸಂಸ್ಥೆಗಳ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಗ್ರಾಮ ಪಂಚಾಯತ್ ಸದಸ್ಯರೇ ನಿರ್ಣಾಯಕರಾಗಿದ್ದು ಎಲ್ಲಾ ಪಕ್ಷಗಳು ಈಗ ಪಂಚಾಯತ್ ಸದಸ್ಯರೆಡೆಗೆ ತೆರಳುತ್ತಿದ್ದಾರೆ. ಎಲ್ಲಾ ಪಕ್ಷಗಳು ತಮ್ಮ ಬೆಂಬಲಿಗರ ಸದಸ್ಯರೇ ಹೆಚ್ಚಿದ್ದಾರೆ ಎಂದು ಹೇಳಕೊಳ್ಳುತ್ತಿದ್ದರೂ ಫಲಿತಾಂಶ ಯಾವ ಪಕ್ಷದ ಸದಸ್ಯರು ಹೆಚ್ಚಿದ್ದಾರೆ ಎನ್ನುವುದಕ್ಕೆ ಉತ್ತರ ನೀಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.