ETV Bharat / city

ಸಭಾಪತಿಯನ್ನು ಪ್ರಶ್ನಿಸಿ, ಎಚ್ಚರಿಕೆ ನೀಡಿದ ನಂತರ ಕ್ಷಮೆ ಕೋರಿದ ಬಿಜೆಪಿ ಸದಸ್ಯ ನವೀನ್ - ಬಜೆಟ್ ಕುರಿತು ಬಿಜೆಪಿ ಸದಸ್ಯ ನವೀನ್ ಎಚ್ಚರಿಕೆ

ಪರಿಷತ್ ಕಲಾಪದಲ್ಲಿ ಮಾತನಾಡುವ ಸದಸ್ಯರಿಗೆ ಸಮಯ ನಿಗದಿಪಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಭಾಪತಿಯನ್ನು ಪ್ರಶ್ನೆ ಮಾಡುವ ಧಾಟಿಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯರೊಬ್ಬರಿಗೆ ಸಭಾಪತಿ ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದರು.

council-chairman-warns-bjp-member-naveen
ಸಭಾಪತಿಯನ್ನೇ ಪ್ರಶ್ನಿಸಿ, ಎಚ್ಚರಿಕೆ ನಂತರ ಕ್ಷಮೆ ಕೋರಿದ ಬಿಜೆಪಿ ಸದಸ್ಯ ನವೀನ್
author img

By

Published : Mar 17, 2022, 2:54 PM IST

ಬೆಂಗಳೂರು: ಬಿಜೆಪಿ ಸರ್ಕಾರವನ್ನು ಸಮರ್ಥಿಸಿಕೊಂಡು ಪ್ರತಿಪಕ್ಷಗಳ ಆರೋಪಕ್ಕೆ‌ ತೀಕ್ಷ್ಣ ತಿರುಗೇಟು ನೀಡುವ ಭರದಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಸದಸ್ಯ ನವೀನ್ ಸಭಾಪತಿಗಳನ್ನೇ ಪ್ರಶ್ನೆ ಮಾಡುವ ಧಾಟಿಯಲ್ಲಿ ಮಾತನಾಡಿ ಸಭಾಪತಿಗಳಿಂದ‌ ಎಚ್ಚರಿಕೆ ಪಡೆದು ಕ್ಷಮೆ ಕೋರಿದ‌ ಪ್ರಸಂಗ ನಡೆಯಿತು.

ವಿಧಾನ ಪರಿಷತ್​​ನ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ಸದಸ್ಯ ನವೀನ್, ಬೊಮ್ಮಾಯಿ ಬಜೆಟ್ ಸಮರ್ಥಿಸಿಕೊಂಡು ಸುದೀರ್ಘ ಭಾಷಣ ಮಾಡಿದರು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದಸ್ಯರಿಗೆ ನಿಗದಿಪಡಿಸಿದ್ದ 22 ನಿಮಿಷ ಸಮಯ ಆಗುತ್ತಿದೆ ಎಂದಿದ್ದಕ್ಕೆ ನವೀನ್ ಅಸಮಾಧಾನ ವ್ಯಕ್ತಪಡಿಸಿದರು. ನಾವು ಮೂರು ದಿನ ತಯಾರಿ ಮಾಡಿಕೊಂಡು ಬಂದಿದ್ದೇವೆ. ಕಾಲೆಳೆಯುವವರಿಗೆ ಗಂಟೆಗಟ್ಟಲೆ ಕೊಟ್ಟು ಈಗ ಬಜೆಟ್ ಪಾಯಿಂಟ್ ಮೇಲೆ ಮಾತನಾಡುತ್ತಿದ್ದರೆ ಅವಕಾಶ ಕೊಡಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

ಇದಕ್ಕೆ ಅಸಮಾಧಾನಗೊಂಡ ಸಭಾಪತಿ, ಒಂದು ವ್ಯವಸ್ಥೆಗೆ ಒಪ್ಪಿಕೊಳ್ಳಲ್ಲ‌ ಎಂದರೆ ಹೇಗೆ?. ಎಷ್ಟು ಸಮಯವಾದರೂ ಮಾತನಾಡಿಕೊಳ್ಳಿ ಎನ್ನುತ್ತಾ ಆಡಳಿತ ಪಕ್ಷದ ವಿಪ್ ಕಡೆ ತಿರುಗಿ ನೀವು ನಿಮ್ಮ ಸದಸ್ಯರಿಗೆ ಹೇಳಬೇಕಲ್ಲವಾ? ಹೇಗೆ ಬೇಕೋ ಹಾಗೆ ಮಾತನಾಡುತ್ತಾರಲ್ಲಾ? ಎಂದರು.

ಇದನ್ನೂ ಓದಿ: ವಿಧಾನಸಭೆ: ಹೈಕೋರ್ಟ್‌ ಆದೇಶ ಧಿಕ್ಕರಿಸಿ ಪ್ರತಿಭಟಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ನಂತರ ಮಾತು ಮುಂದುವರೆಸಿದ ಸದಸ್ಯ ನವೀನ್, ಪ್ರತಿಪಕ್ಷಗಳ ವಿರುದ್ಧ ಮುಗಿಬಿದ್ದರು. ಪ್ರತಿಪಕ್ಷ ನಾಯಕರು ಮೋದಿ ಸರ್ಕಾರದವರು 11 ಲಕ್ಷ ಕೋಟಿ ರೂ ಕಾರ್ಪೊರೇಟ್ ಸಾಲ ಮನ್ನಾ ಮಾಡಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. ಆದರೆ ಸಾಲಮನ್ನಾ ಮಾಡಿರುವ ‌ದಾಖಲೆ ಕೊಟ್ಟು ಮಾತನಾಡಬೇಕು. ಅವರಿಗೆಲ್ಲಾ ಸಾಲ ಕೊಟ್ಟಿದ್ದು ಮನಮೋಹನ್ ಸಿಂಗ್ ಸರ್ಕಾರ, ಮೋದಿ ಸರ್ಕಾರ ಸಾಲ ವಾಪಸ್ ಪಡೆಯಲು ಕ್ರಮ ಕೈಗೊಂಡಿದೆ. ಆಸ್ತಿ ಜಪ್ತಿ ಮಾಡಿಕೊಳ್ಳುತ್ತಿದೆ ಎಂದು ಸಮರ್ಥಿಸಿಕೊಂಡರು.

ಒಬ್ಬ ದಲಿತ ಸಚಿವರನ್ನು ಸಂಪುಟದಿಂದ ಕೈಬಿಟ್ಟರು ಎನ್ನುವ ಆರೋಪವನ್ನು ತಿಮ್ಮಾಪೂರ್ ಮಾಡಿದ್ದಾರೆ. ಆದರೆ ನಮ್ಮ ಮೋದಿ ಸರ್ಕಾರ 44 ಜನ ಒಬಿಸಿ ದಲಿತರನ್ನು ಸಚಿವರನ್ನಾಗಿ ಮಾಡಿದರೆ ಅವರನ್ನು ಸದನಕ್ಕೆ ಪರಿಚಯ ಮಾಡಿಕೊಡಲು ಇವರು ಬಿಡಲಿಲ್ಲ ಎಂದರು. ರಾಷ್ಟ್ರಪತಿ ಕೋವಿಂದ್ ಹಾಗೂ ನಮ್ಮ ರಾಜ್ಯಪಾಲರು ದಲಿತರೇ ಆಗಿದ್ದಾರೆ ಎನ್ನುವ ಮೂಲಕ ದಲಿತ ಸಚಿವರನ್ನು ಅಧಿಕಾರದಿಂದ‌ ತೆಗೆಯುವ ಕೆಲಸ ಮಾಡಿದರು ಎನ್ನುವ ಆರೋಪಕ್ಕೆ ತಿರುಗೇಟು ನೀಡಿದರು. ನವೀನ್ ತಿರುಗೇಟನ್ನು ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.

ಇದನ್ನೂ ಓದಿ: ಸಭಾಪತಿ ವಿರುದ್ಧ ಎಫ್ಐಆರ್ ದಾಖಲು ಪ್ರಕರಣ: ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ

ಎಲ್ಲದಕ್ಕೂ ಆರ್​ಎಸ್ಎಸ್ ವಿಷಯ ಎಳೆದು ತರುತ್ತಾರೆ ಎಂದು ಪ್ರಸ್ತಾಪಿಸಿದ ನವೀನ್, 23 ಅಮಾಯಕರ ಹತ್ಯೆ ನಡೆದ ಬಗ್ಗೆ ಕರ್ನಾಟಕ ಫೈಲ್ಸ್ ಚಿತ್ರ ಮಾಡುತ್ತೇವೆ ಎಂದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ‌ಸಭಾಪತಿ ಪೀಠವನ್ನ ಪ್ರಶ್ನೆ ಮಾಡುವ ರೀತಿ ಮಾತನಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

ಗಂಭೀರ ಪರಿಣಾಮದ ಎಚ್ಚರಿಕೆ: ಈ ವೇಳೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಸಭಾಪತಿಗಳನ್ನು ಪ್ರಶ್ನೆ ಮಾಡುವಂತಿಲ್ಲ, ಗಂಭೀರ ಪರಿಣಾಮ ಎದುರಿಸಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸದಸ್ಯ ನವೀನ್ ನೆರವಿಗೆ ಧಾವಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ನವೀನ್ ಹೊಸಬರು, ಬೇರೆಯವರಿಗೆ ಕೊಟ್ಟಂತಹ ಸಮಯ ಕೇಳಿದ್ದಾರೆ ಅಷ್ಟೇ. ಅನ್ಯತಾ ಭಾವಿಸಬಾರದು ಎಂದರು.

ಇದಕ್ಕೆ ಸಿಡಿಮಿಡಿಗೊಂಡ ಸಭಾಪತಿ ಹೊರಟ್ಟಿ, ನಾನು ಸದನಕ್ಕೆ ಬಂದು 42 ವರ್ಷ ಆಯಿತು. ನಾನೇನು ದನ ಕಾಯೋನಲ್ಲ, ಎಲ್ಲವೂ ಗೊತ್ತಾಗಲಿದೆ. ಸುಮ್ಮನೆ ಕುಳಿತುಕೊಳ್ಳಿ ಎಂದರು. ನಂತರ ಕಾಂಗ್ರೆಸ್ ಸದಸ್ಯರ ಒತ್ತಾಯದ ಮೇರೆಗೆ ಸಭಾಪತಿಗಳ ಕ್ಷಮೆ ಕೋರಿದ ಬಿಜೆಪಿ ಸದಸ್ಯ ನವೀನ್ ಬಜೆಟ್ ಮೇಲಿನ ಭಾಷಣ ಮುಗಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.