ETV Bharat / city

ರಾಜ್ಯದ ಪ್ರಸಿದ್ಧ ದೇವಾಲಯದಲ್ಲಿ ಭ್ರಷ್ಟಾಚಾರ: ದೇವಸ್ಥಾನ-ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆರೋಪ‌ - ರಾಜ್ಯದ ಪುರಾಣ ಪ್ರಸಿದ್ದ ದೇವಾಲಯ

ಮುಜರಾಯಿ ಇಲಾಖೆಯಲ್ಲಿ 31,200 ದೇವಸ್ಥಾನಗಳಿದ್ದು, ಅದರಲ್ಲಿ ಎ ಗ್ರೇಡ್ ದೇವಸ್ಥಾನವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

kollur-mookambika-temple
ರಾಜ್ಯದ ಪ್ರಸಿದ್ದ ದೇವಾಲಯದಲ್ಲಿ ಭ್ರಷ್ಟಾಚಾರ
author img

By

Published : Mar 9, 2021, 7:18 PM IST

ಬೆಂಗಳೂರು: ರಾಜ್ಯದ ಪುರಾಣ ಪ್ರಸಿದ್ಧ ದೇವಾಲಯವೊಂದರಲ್ಲೇ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆರೋಪಿಸಿದೆ.

ರಾಜ್ಯದ ಪ್ರಸಿದ್ಧ ದೇವಾಲಯದಲ್ಲಿ ಭ್ರಷ್ಟಾಚಾರ ಆರೋಪ

ಓದಿ: ಜಮೀನು ವಿವಾದ: ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ ರಾಕಿ ಬಾಯ್​​​

ಮುಜರಾಯಿ ಇಲಾಖೆಯಲ್ಲಿ ಬೃಹತ್ ಭ್ರಷ್ಟಾಚಾರವಾಗಿದ್ದು, ಇಲಾಖೆಯ ಸುಪರ್ದಿಯಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಹಗರಣದ ಹುತ್ತಗಳು ಎದ್ದಿವೆ. ದೇವಸ್ಥಾನದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮಾಧ್ಯಮಗೋಷ್ಟಿಯಲ್ಲಿ ಗಂಭೀರ ಆರೋಪ ಮಾಡಿದೆ.

ಮುಜರಾಯಿ ಇಲಾಖೆಯಲ್ಲಿ 31,200 ದೇವಸ್ಥಾನಗಳಿದ್ದು, ಅದರಲ್ಲಿ ಎ ಗ್ರೇಡ್ ದೇವಸ್ಥಾನವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕೋಟ್ಯಂತರ ಹಣ ಮೋಸ ಆಗಿದೆ. ದೇವಸ್ಥಾನದ ಚಿನ್ನ, ಬೆಳ್ಳಿ, ಹಣದ ದುರುಪಯೋಗ ಆಗಿದೆ. ಬಂಗಾರದ ರೂಪದಲ್ಲಿ ಬಂದಿರುವ ದೇಣಿಗೆಯ ನೋಂದಣಿ ಮಾಡಿಲ್ಲ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಮನ್ವಯಕ ಮೋಹನ್ ಗೌಡ ಆರೋಪಿಸಿದ್ದಾರೆ.

ದೇವಾಲಯದ ಹಣದಿಂದ ಉಡುಪಿ ಜಿಲ್ಲಾಧಿಕಾರಿಯ ಫೋನ್ ಬಿಲ್ ಪಾವತಿಸಲಾಗಿದೆ. 2018-19 ರ ದೇಣಿಗೆ ಸ್ವೀಕರಿಸಿದ ಪಟ್ಟಿ ಸರ್ಕಾರಕ್ಕೆ ಸಲ್ಲಿಸಿಲ್ಲ ಎನ್ನಲಾಗ್ತಿದೆ. 2016 ರಲ್ಲಿ ದೇವಸ್ಥಾನದಲ್ಲಿ ದೊಡ್ಡ ಹಗರಣ ನಡೆದಿತ್ತು. ದೇವಸ್ಥಾನದ 4.2 ಕೆ‌ಜಿ ಚಿನ್ನವನ್ನು ಅಧಿಕಾರಿಗಳು, ಇಒ ಕಳ್ಳತನ ಮಾಡಿದ್ದರು. 2005 ರಿಂದ 2018ರ ವರೆಗೆ ದೇವಾಲಯದ ಆಡಿಟ್ ಅನ್ನು ಆರ್​​ಟಿಐ ಮೂಲಕ‌ ಪಡೆದಿರುವ ಈ ಸಂಘಟನೆಯವರು, ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಿ ಭ್ರಷ್ಟಾಚಾರ ಮಾಡಿದವರನ್ನ ಕಾನೂನಿನ ಅಡಿಯಲ್ಲಿ ಶಿಕ್ಷಿಸಿಬೇಕು.‌ ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ಸಂಘ ನೀಡಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.