ETV Bharat / city

ಬೆಂಗಳೂರಲ್ಲಿ ಕಂಟ್ರೋಲ್​ಗೆ ಸಿಗದ ಕೊರೊನಾ: ಇಂದು 930 ಜನರಿಗೆ ಸೋಂಕು - ಬೆಂಗಳೂರು ಕೊರೊನಾ ಕೊರೊನಾ ಸೋಂಕಿತರು

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇಂದು 930 ಜನರಲ್ಲಿ ಸೋಂಕು ಪತ್ತೆಯಾಗಿದೆ.

Corona positive for 930 people in Bangalore today
ಬೆಂಗಳೂರಿನಲ್ಲಿ ಇಂದು 930 ಜನರಿಗೆ ಕೊರೊನಾ ಪಾಸಿಟಿವ್
author img

By

Published : Mar 18, 2021, 1:00 PM IST

ಬೆಂಗಳೂರು: ಕಳೆದ ಒಂದು ವಾರದಿಂದ ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇಂದು 930 ಜನರಲ್ಲಿ ಸೋಂಕು ದೃಢಪಟ್ಟಿದೆ.

ಹಲವು ತಿಂಗಳ ಬಳಿಕ ಮಂಗಳವಾರ 700, ಬುಧವಾರ 786 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ಇಂದು ಬರೋಬ್ಬರಿ 930 ಕೋವಿಡ್ ಕೇಸ್​ಗಳು ಪತ್ತೆಯಾಗಿವೆ. ಬೆಳಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ದಾಖಲಾಗುವ ಕೊರೊನಾ ಪ್ರಕರಣವನ್ನು ಮರುದಿನ ಕೊಡುವ ಹಿನ್ನಲೆ, ಇಂದು ಬರುವ ರಿಪೋರ್ಟ್​ನಲ್ಲಿ 930 ಜನರಲ್ಲಿ ಕೋವಿಡ್ ಪ್ರಕರಣ ದೃಢಪಟ್ಟಿದೆ. ಅಲ್ಲದೆ, ಇಂದು ಬೆಳಗ್ಗೆ 6 ಗಂಟೆಯಿಂದ 12-30ರ ವೇಳೆಗೆ 338 ಜನರಲ್ಲಿ ಕೋವಿಡ್ ದೃಢಪಟ್ಟಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿದ್ದಾರೆ.

ಕ್ಷಣ ಕ್ಷಣಕ್ಕೂ ಕೋವಿಡ್​ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚೆಚ್ಚು ಹರಡುತ್ತಿರುವ ಕಾರಣ ಕೊರೊನಾ ಕಂಟ್ರೋಲ್ ತಪ್ಪುತ್ತಿದ್ದು, ಸಂಪರ್ಕ ಪತ್ತೆಹಚ್ಚುವಿಕೆ, ಟೆಸ್ಟಿಂಗ್ ಹೆಚ್ಚುಮಾಡಲು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಆಯುಕ್ತರು ಸಭೆಗಳನ್ನು ನಡೆಸುತ್ತಿದ್ದಾರೆ.

ಓದಿ: ಮಲ್ಲೇಶ್ವರಂ ಆರ್ಯ ಈಡಿಗ ಹಾಸ್ಟೆಲ್​ನ​ 15 ವಿದ್ಯಾರ್ಥಿನಿಯರಿಗೆ ಕೋವಿಡ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.