ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಬೆಂಗಳೂರು ನಗರದಲ್ಲಿಂದು 1,746 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮೊನ್ನೆ ನಗರದಲ್ಲಿ 2,023 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ನಿನ್ನೆ 1,115 ಪಾಸಿಟಿವ್ ಪ್ರಕರಣಗಳು ದಾಖಲಾಗಿತ್ತು.
ನಿನ್ನೆಗಿಂತ ಇಂದಿನ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ ಕೂಡ ಪಾಸಿಟಿವಿಟಿ ದರ ಗಣನೀಯವಾಗಿ ಕಡಿಮೆಯಾಗುತ್ತಿದೆ.
![Bangalore Corona case](https://etvbharatimages.akamaized.net/etvbharat/prod-images/12105034_744_12105034_1623477814821.png)
ರಾಜ್ಯದಲ್ಲಿ ಲಾಕ್‌ಡೌನ್ ಮಾಡಿದ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ. ಒಂದೇ ತಿಂಗಳಲ್ಲಿ ಶೇ. 60ರಷ್ಟು ಸೋಂಕು ಇಳಿಕೆಯಾಗಿದೆ. ಇನ್ನು ಮೇ ತಿಂಗಳ ಮೊದಲ 9 ದಿನಗಳಲ್ಲಿ 5 ಲಕ್ಷ ಕೇಸ್‌ಗಳು ದಾಖಲಾಗಿದ್ದವು. ಆದರೆ, ಜೂನ್ ತಿಂಗಳ ಮೊದಲ 9 ದಿನಗಳಲ್ಲಿ 2 ಲಕ್ಷ ಕೇಸ್‌ಗಳು ದಾಖಲಾಗಿವೆ. ಅಂದರೆ ಶೇ. 60ರಷ್ಟು ಸೋಂಕು ಕಡಿಮೆಯಾಗಿದೆ.
ಇನ್ನು, ಏಪ್ರಿಲ್ 27ರಂದು ಜನತಾ ಕರ್ಪ್ಯೂ ಜಾರಿಗೊಳಿಸಲಾಗಿತ್ತು. ಆಗ 3 ಲಕ್ಷ ಕೇಸ್ ದಾಖಲಾಗಿದ್ದವು. ಪ್ರತಿದಿನ 30 ಸಾವಿರ ಪಾಸಿಟಿವ್ ಕೇಸ್‌ಗಳು ಬರುತ್ತಿದ್ದವು. ಲಾಕ್‌ಡೌನ್ ಪರಿಣಾಮದಿಂದಾಗಿ ಕೊರೊನಾ ಪಾಸಿಟಿವ್ ಕೇಸ್‌ಗಳು ಗಣನೀಯ ಇಳಿಕೆಯಾಗಿವೆ.
ನಿನ್ನೆ ರಾಜ್ಯದಲ್ಲಿ 8,249 ಕೋವಿಡ್ ಕೇಸ್ ಪತ್ತೆಯಾಗಿದ್ದು, 159 ಮಂದಿ ಸಾವನ್ನಪ್ಪಿದ್ದರು. ಸದ್ಯ ರಾಜ್ಯದಲ್ಲಿ 4.86% ಪಾಸಿಟಿವಿಟಿ ದರವಿದ್ದು, ಪಾಸಿಟಿವಿಟಿ ದರವನ್ನು 5%ಕ್ಕಿಂತಲೂ ಕಡಿಮೆ ಮಾಡಬೇಕೆಂಬ ಸರ್ಕಾರದ ಉದ್ದೇಶ ಯಶಸ್ವಿಯಾಗಿದೆ.
ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ಆದ ಐಷರಾಮಿ ಆಡಿ ಕಾರ್ ಮಾಲೀಕ... ಗಳಿಸಿದ್ದು ಎಷ್ಟು ಗೊತ್ತಾ! ವಿಡಿಯೋ ನೋಡಿ