ETV Bharat / city

ಪ್ರಾಮಾಣಿಕವಾಗಿ ಕೆಲಸ ಮಾಡಿ, ನಾನು ನಿಮ್ಮ ಜೊತೆ ಇರುತ್ತೇನೆ: ಅಧಿಕಾರಿಗಳಿಗೆ ಸಿಎಂ ಬಿಎಸ್​ವೈ ಅಭಯ

ವಿಧಾನಸೌಧದಲ್ಲಿ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ, ಆಡಳಿತ ವಿಚಾರಗಳ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

author img

By

Published : Aug 2, 2019, 1:07 PM IST

ಬಿಎಸ್​ವೈ ಸಭೆ

ಬೆಂಗಳೂರು: ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿ.ಎಸ್​.ಯಡಿಯೂರಪ್ಪ, ಆಡಳಿತ ವಿಚಾರಗಳ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಜತೆ ಸಿಎಂ ಯಡಿಯೂರಪ್ಪ ವಿಧಾನಸೌಧದಲ್ಲಿ ಸಭೆ ನಡೆಸಿದರು. ಈ ವೇಳೆ, ಸರ್ಕಾರಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರಬೇಕು. ಸರಿಯಾಗಿ ಕಡತ ವಿಲೇವಾರಿ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.

ಬಿಎಸ್​ವೈ ಸಭೆ

ಬಡವರು, ದಲಿತರು ಹಾಗೂ ಶೋಷಿತರ ಉದ್ಧಾರಕ್ಕಾಗಿ ಕಾನೂನಿದೆ. ಹಾಗಾಗಿ ಅಧಿಕಾರಿಗಳು ಸರ್ಕಾರಿ ಕಚೇರಿಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೂ ಇರಬೇಕು. ಎರಡ್ಮೂರು ದಿನಗಳಲ್ಲಿ ಕಡತಗಳ ವಿಲೇವಾರಿ ಆಗಬೇಕು. ಬಡವರು ಕಚೇರಿಗಳಿಗೆ ಅಲೆದಾಡುವುದು ನಿಲ್ಲಬೇಕು. ಇದೇ ನಮ್ಮ ಸರ್ಕಾರದ ಆಶಯ ಎಂದು ವಿವರಿಸಿದರು.

ಸಾಮಾನ್ಯ ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸಿಗಬೇಕು. ಆಡಳಿತ ಯಂತ್ರ ಜಿಲ್ಲಾ ಮಟ್ಟದಲ್ಲಿ ಚುರುಕಾಗಿದ್ದರೆ ಜನರ ಅಲೆದಾಟ ತಪ್ಪುತ್ತದೆ. ಮುಖ್ಯ ಕಾರ್ಯದರ್ಶಿಗಳು ಕೂಡಾ ಜಿಲ್ಲಾ ಪ್ರವಾಸ ಮಾಡಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಿಗೆ ಎರಡು ಬಾರಿ ಜಿಲ್ಲೆಯ ಪ್ರವಾಸ ಮಾಡಬೇಕು. ಪ್ರತಿ ತಿಂಗಳು ನಾನು ಈ ಬಗ್ಗೆ ವರದಿ ಪಡೆಯುತ್ತೇನೆ ಎಂದರು.

ರಾಜ್ಯದಲ್ಲಿನ ಬರ ಪರಿಸ್ಥಿತಿ ಹತೋಟಿಗೆ ಬರುವವರೆಗೂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಶಾಸಕರ ಒತ್ತಡ, ದೂರುಗಳಿಗೆ ನೀವು ಸೊಪ್ಪು ಹಾಕುವ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿ. ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಅಭಯ ನೀಡಿದರು.

ಡಿಸಿಗಳು ವಿದ್ಯಾರ್ಥಿನಿಲಯಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಊಟ, ವಸತಿ ಬಗ್ಗೆ ಪರೀಕ್ಷೆ ಮಾಡಬೇಕು. ಗಂಗಾ ಕಲ್ಯಾಣ ಯೋಜನೆಗೆ ಆದ್ಯತೆ ಮೇಲೆ ವಿದ್ಯುತ್ ಸಂಪರ್ಕ‌ ಕೊಡಬೇಕಿದೆ. ವಿದ್ಯುತ್ ಕೊಡದೇ ಇದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಿದರು.

Intro:GggBody:KN_BNG_01_DCCEOMEETING_OFFICERS_VIDEO_720195

ಡಿಸಿ, ಸಿಇಒಗಳ ಜತೆ ಸಿಎಂ ಸಭೆ: ಅಧಿಕಾರಿಗಳಿಗೆ ಬಿಎಸ್ ವೈ ಖಡಕ್ ಎಚ್ಚರಿಕೆ

ಬೆಂಗಳೂರು: ವಿಧಾನಸೌಧದಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ, ಎಚ್ಚರಿಕೆಗಳನ್ನು ನೀಡಿದರು.

ಸಿಎಂ ಯಡಿಯೂರಪ್ಪ ಅಧಿಕಾರವಹಿಸಿಕೊಂಡ ನಂತರ ಮೊದಲ ಬಾರಿಗೆ ರಾಜ್ಯದ ಎಲ್ಲಾ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬನ್ನಿ. 10 ಗಂಟೆ ಅಂದ್ರೆ 10 ಗಂಟೆಗೆ ಹಾಜರ್ ಆಗಬೇಕು. ಅಧಿಕಾರಿಗಳು ಸರಿಯಾಗಿ ಕಡಿತ ವಿಲೇವಾರಿ ಮಾಡಬೇಕು ಎಂದು ಖಡಕ್ ಸಂದೇಶ ರವಾನಿಸಿದರು.

ಕಾನೂನು ಇರುವುದು ಬಡವರು, ದಲಿತರು ಹಾಗೂ ಶೋಷಿತರಿಗೆ ನೆಪ ಹೇಳಲು ಇರುವುದಕ್ಕಲ್ಲ. ಸರ್ಕಾರಿ ಕಚೇರಿಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಇರಬೇಕು. ಕಡತಗಳು ಎರಡ ಮೂರು ದಿವಸದಲ್ಲಿ ವಿಲೇವಾರಿ ಆಗಬೇಕು. ಕಚೇರಿಗಳಿಗೆ ಬಡವರು ಅಲೆದಾಡುವುದನ್ನು ನಿಲ್ಲಿಸಬೇಕು ಎಂಬುವುದು ನಮ್ಮ ಸರ್ಕಾರದ ಆಶಯ ಎಂದು ವಿವರಿಸಿದರು.

ಅಧಿಕಾರಿಗಳಿಗೆ ಸಿಎಂ ಛಾಟಿ:

- ಕಾನೂನಿನ ಕುಂಟು ನೆಪ ಹೇಳಿ ಜನರಿಗೆ ಅಲೆದಾಟು ಮಾಡೋದು ನಾನು ಸಹಿಸುವುದಿಲ್ಲ

-ಸಾಮಾನ್ಯ ಜನರ ಸಮಸ್ಯೆ ಸ್ಥಳದಲ್ಲಿ ಪರಿಹಾರ ಮಾಡಬೇಕು

-ಆಡಳಿತ ಯಂತ್ರ ಜಿಲ್ಲಾ ಮಟ್ಟದಲ್ಲಿ ಚುರುಕಾಗಿ ಇರಬೇಕು. ಜಿಲ್ಲಾ ಮಟ್ಟದಲ್ಲಿ ಚುರುಕಾಗಿದ್ದರೆ ಜನ ಅಲೆದಾಟ ತಪ್ಪುತ್ತದೆ.

- ಸಿಎಸ್ ಕೂಡಾ ಜಿಲ್ಲಾ ಪ್ರವಾಸ ಮಾಡಬೇಕು. ತಿಂಗಳಿಗೆ ಒಮ್ಮೆ ಒಂದು ಜಿಲ್ಲೆಗೆ ಪ್ರವಾಸ ಮಾಡಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಿಗೆ ಎರಡು ಬಾರಿ ಜಿಲ್ಲಾ ಪ್ರವಾಸ ಮಾಡಬೇಕು. ಪ್ರತಿ ತಿಂಗಳು ನಾನು ಈ ಬಗ್ಗೆ ವರದಿ ಪಡೆಯುತ್ತೇನೆ.

-ಬರ ಪರಿಸ್ಥಿತಿ ಹತೋಟಿಗೆ ಬರುವವರೆಗೂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು.

- ನಾವು ನೀವುಗಳು ಜನರ ಪ್ರತಿನಿದಿಗಳು. ಜನರ ಸಮಸ್ಯೆಗೆ ನಾವು ಸ್ಪಂದಿಸದಿದ್ದರೆ ಬದುಕಿದ್ದು ಸತ್ತ ಹಾಗೆ.

- ನಿಮ್ಮ ಕರ್ತವ್ಯವನ್ನ ಪ್ರಾಮಾಣಿಕವಾಗಿ ಕೆಲಸ ಮಾಡಿ..
ನಾನು ನಿಮ್ಮ‌ಜೊತೆ ಇರುತ್ತೇನೆ

-ಶಾಸಕರ ಒತ್ತಡ, ದೂರುಗಳಿಗೆ ನೀವು ಸೊಪ್ಪು ಹಾಕುವ ಅಗತ್ಯವಿಲ್ಲ. ನಿಮ್ಮ ಜೊತೆ ನಾನು ಇರುತ್ತೇನೆ.

-ಡಿಸಿಗಳು ವಿದ್ಯಾರ್ಥಿ ನಿಲಯ ಕ್ಕೆ ಹೋಗಿ ಪರಿಸ್ಥಿತಿ ನೋಡಿ. ಸರಿಯಾದ ಊಟ, ವಸತಿ ಇದೆಯಾ ಪರೀಕ್ಷೆ ಮಾಡಿ. ಡಿಸಿಗಳು ವಿದ್ಯಾರ್ಥಿ ನಿಲಯ ಕ್ಕೆ ಹೋಗಿ ಪರಿಶೀಲನೆ ಕಡ್ಡಾಯವಾಗಿ ಮಾಡಬೇಕು.

-ಗಂಗಾ ಕಲ್ಯಾಣ ಯೋಜನೆಗೆ ಆದ್ಯತೆ ಮೇಲೆ ವಿದ್ಯುತ್ ಸಂಪರ್ಕ‌ ಕೊಡಿ. ವಿದ್ಯುತ್ ಕೊಡದೇ ಇದ್ದರೆ ಅಧಿಕಾರಿಗಳ ಮೇಲೆ ಬೇರೆ ರೀತಿಯ ಕ್ರಮ ಕೈಗೊಳ್ಳಬೇಕು

-ಜನರ ಹಣದಲ್ಲಿ ಸರ್ಕಾರ ನಡೆಸುತ್ತಿದೆ. ಅವರಿಗೆ ಮೋಸ ಮಾಡಬಾರದು.

- ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ. ಒಂದು ವೇಳೆ ನಿಮ್ಮ ಆ ನಿಲಯಗಳಲ್ಲಿ ನಿಮ್ಮ ಮಕ್ಕಳು ಇದಿದ್ದರೆ ಏನ್ ಮಾಡುತ್ತಿದ್ದಿರಿ. ಶುಸ್ಚಿತ್ವಕ್ಕೆ ಒತ್ತು ಕೊಡಿ. ಅಲ್ಲಿ ಹೋಗಿ ಊಟ ಮಾಡಿ. ಅಲ್ಲಿನ ಊಟ ಎಷ್ಟು ಪೌಷ್ಟಿಕತೆ ಇದೆ ಅನ್ನೋದು ಗೊತ್ತಾಗಲಿದೆ.Conclusion:Hhh
ETV Bharat Logo

Copyright © 2024 Ushodaya Enterprises Pvt. Ltd., All Rights Reserved.