ETV Bharat / city

ಲಿಂಗಾಯತ ಮತ ಬ್ಯಾಂಕ್ ಸೆಳೆಯುವ ಹೆಸರಲ್ಲಿ ಮತ್ತೆ ಸಿಎಂ ಸ್ಥಾನಕ್ಕೆ ಟವೆಲ್ ಹಾಕಿದರಾ MBP? - cm race in congress

ಲಿಂಗಾಯತ ಮತಗಳನ್ನ ಸೆಳೆಯಬೇಕೆಂಬ ಕನಸು ನನಸಾಗಿಸಿಕೊಳ್ಳಲು ನಡೆಸಿದ ಪ್ರಯತ್ನಗಳೆಲ್ಲ ವಿಫಲಗೊಂಡಿದ್ದು, ಇದೀಗ ಬಿಜೆಪಿ ವಿರುದ್ಧ ಗೂಬೆ ಕೂರಿಸಿಯಾದರೂ ಲಿಂಗಾಯತ ಮತದಾರರನ್ನ ಸೆಳೆಯುವ ಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ.

Lingayat vote bank
ಲಿಂಗಾಯತ ಮತ ಬ್ಯಾಂಕ್ ಸೆಳೆಯುವ ಹೆಸರಲ್ಲಿ ಮತ್ತೆ ಸಿಎಂ ಸ್ಥಾನಕ್ಕೆ ಟವೆಲ್ ಹಾಕಿದ್ರಾ ಎಂಬಿಪಿ?
author img

By

Published : Jul 27, 2021, 11:44 AM IST

ಬೆಂಗಳೂರು: ಲಿಂಗಾಯತ ಮತದಾರರನ್ನು ಸೆಳೆಯಲು ಕಳೆದ 30 ವರ್ಷಗಳಿಂದ ಹರಸಾಹಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಬಿಜೆಪಿ ಪಕ್ಷ ಬಿ.ಎಸ್.ಯಡಿಯೂರಪ್ಪಗೆ ಅವಮಾನ ಮಾಡಿದೆ ಎಂಬ ಕಾರಣವಿಟ್ಟು ನಡೆಸುವ ಹೋರಾಟ ಫಲ ಕೊಡುತ್ತಾ ಅನ್ನುವ ಚರ್ಚೆ ಆರಂಭವಾಗಿದೆ.

ಲಿಂಗಾಯತ ಮತಗಳನ್ನ ಸೆಳೆಯಬೇಕೆಂಬ ಕನಸು ನನಸಾಗಿಸಿಕೊಳ್ಳಲು ನಡೆಸಿದ ಪ್ರಯತ್ನಗಳೆಲ್ಲ ವಿಫಲಗೊಂಡಿದ್ದು, ಇದೀಗ ಬಿಜೆಪಿ ವಿರುದ್ಧ ಗೂಬೆ ಕೂರಿಸಿಯಾದರೂ ಲಿಂಗಾಯತ ಮತದಾರರನ್ನ ಸೆಳೆಯುವ ಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭ ಪ್ರತ್ಯೇಕ ಲಿಂಗಾಯತ ಧರ್ಮದ ಹೆಸರೆತ್ತಿ ಇರುವ ಮತದಾರರನ್ನೂ ಕಳೆದುಕೊಂಡು ಕೈಸುಟ್ಟುಕೊಂಡಿರುವ ಕಾಂಗ್ರೆಸ್ ಇದೀಗ, ಲಿಂಗಾಯತ ಮತ ಬ್ಯಾಂಕ್​ಗೆ ಕೈಹಾಕುವ ಮುನ್ನ ನೂರು ಸಾರಿ ಯೋಚಿಸುವ ಅನಿವಾರ್ಯತೆ ಇದೆ.

ಅತ್ಯಂತ ಸೂಕ್ಷ್ಮವಾಗಿ ಮತದಾರರ ಮನವೊಲಿಸುವ ಅಗತ್ಯವೂ ಇದೆ. ಮೂರು ದಶಕಗಳಿಂದ ಕನಸು ಕಾಣುತ್ತಿದ್ದ ಕಾಂಗ್ರೆಸ್ ಅದನ್ನು ನನಸಾಗಿಸಿಕೊಳ್ಳಲು ಸಿಕ್ಕ ಅವಕಾಶವನ್ನು ಶತಾಯಗತಾಯ ಸದ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದೆ.

ಮೂರು ದಶಕ ಹಿಂದೇನಾಗಿತ್ತು?

1968 ರಿಂದ 1971ರವರೆಗೆ ರಾಜ್ಯದ ಸಿಎಂ ಆಗಿ ಕಾರ್ಯನಿರ್ವಹಿಸಿದ್ದ ವೀರೇಂದ್ರ ಪಾಟೀಲರು, 18 ವರ್ಷಗಳ ಬಳಿಕ ಅಂದರೆ 1989 - 90ರ ಅವಧಿಯಲ್ಲಿ ಒಂದು ವರ್ಷ ಸಿಎಂ ಆಗಿ ಕಾಂಗ್ರೆಸ್ ಸರ್ಕಾರ ಮುನ್ನಡೆಸಿದ್ದರು. ಈ ಸಂದರ್ಭ ಅವರಿಗೆ 66 ವರ್ಷ ವಯಸ್ಸು. ಆದರೆ, ಪಾರ್ಶ್ವವಾಯು ಪೀಡಿತರಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಗಲೂ ಸಿಎಂ ಆಗಿಯೇ ಮುಂದುವರಿಸಿದ್ದ ಅವರನ್ನು ಮಾತನಾಡಿಸಲು ಬಂದಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ, ಕರ್ನಾಟಕ ಬೇರೆ ಮುಖ್ಯಮಂತ್ರಿಯನ್ನು ಕಾಣಲಿದೆ ಎಂದು ಹೇಳಿಕೆ ಕೊಟ್ಟರು.

ಈ ಮೂಲಕ ವೀರೇಂದ್ರ ಪಾಟೀಲರನ್ನು ಬಲವಂತವಾಗಿ ಕೆಳಗಿಳಿಸಿ, ಏಳು ದಿನ ರಾಷ್ಟ್ರಪತಿ ಆಳ್ವಿಕೆ ಹೇರಿ ನಂತರ ಎಸ್. ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಯಿತು. ಅದಾಗಿ ಏಳು ವರ್ಷದ ನಂತರ ವೀರೇಂದ್ರ ಪಾಟೀಲ್ ನಿಧನರಾದರು.

ಆದರೆ, ಲಿಂಗಾಯತ ಸಮುದಾಯ ಅವರಿಗೆ ಕಾಂಗ್ರೆಸ್​ನಿಂದ ಅಪಮಾನವಾಗಿದೆ ಎಂದೇ ಭಾವಿಸಿ ಇಂದಿಗೂ ಕೈ ಪಕ್ಷದಿಂದ ದೂರವೇ ಉಳಿದಿದೆ. 40 ವರ್ಷಕ್ಕೂ ಅಧಿಕ ಸಮಯದಿಂದ ಬಿಜೆಪಿ ಪಕ್ಷ ಬಲವರ್ಧನೆಯಲ್ಲಿ ನಿರತರಾಗಿರುವ ಬಿ.ಎಸ್.ಯಡಿಯೂರಪ್ಪ ಬೆನ್ನಿಗೆ ನಿಂತಿರುವ ಸಮುದಾಯದವರು ಇದೀಗ ಬಿಜೆಪಿಯಲ್ಲೂ ಲಿಂಗಾಯತ ನಾಯಕನಿಗೆ ಅವಮಾನವಾಗಿದೆ ಎಂದು ಬೇರೆ ಪಕ್ಷದತ್ತ ವಾಲುತ್ತಾರಾ ಅನ್ನುವ ಚರ್ಚೆ ಆರಂಭವಾಗಿದೆ.

ಇದರ ಲಾಭ ಪಡೆಯಲು ಕಾಂಗ್ರೆಸ್ ಯತ್ನಿಸುತ್ತಿದೆ. ನಿನ್ನೆ ತಮ್ಮ ಎರಡು ವರ್ಷದ ಕಾಲಾವಧಿ ಮುಕ್ತಾಯವಾದ ಸಂದರ್ಭ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಣ್ಣೀರಿಡುತ್ತಾ ತಮ್ಮ ರಾಜೀನಾಮೆ ಘೋಷಿಸಿದ ಬಿ.ಎಸ್.ಯಡಿಯೂರಪ್ಪಗೆ ಬಿಜೆಪಿಯಿಂದಲೂ ಅವಮಾನವಾಗಿದೆ ಎಂಬುದನ್ನು ತೋರಿಸಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ಸೂಕ್ತ ಸಿದ್ಧತೆ ಆರಂಭಿಸಿದೆ.

ಬಿಎಸ್​ವೈ ರಾಜೀನಾಮೆ ಬೆನ್ನಲ್ಲೇ ಕೈ ಪಡೆ ಅಲರ್ಟ್​

ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ಅಲರ್ಟ್ ಆದ ಕೈಪಡೆ, ಲಿಂಗಾಯತ ಮತ ಬ್ಯಾಂಕ್ ಸೆಳೆಯಲು ಮುಂದಾಗಿದೆ. ಇದಕ್ಕೆ ಪೂರಕ ಬೆಳವಣಿಗೆ ಎನ್ನುವಂತೆ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೈಕಮಾಂಡ್ ನಾಯಕರನ್ನು ಸಂಪರ್ಕಿಸಿದ್ದು, ತಮ್ಮನ್ನು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಘೋಷಿಸುವಂತೆ ಮನವಿ ಮಾಡಿದ್ದಾರೆ.

ಬಿಜೆಪಿಯಲ್ಲಿ ಲಿಂಗಾಯತ ಮಹಾ ನಾಯಕನನ್ನು ಕೆಳಗಿಳಿಸಲಾಗಿದೆ. ಒಕ್ಕಲಿಗ ಇಲ್ಲವೇ ಬ್ರಾಹ್ಮಣ ಸಮುದಾಯದವರಿಗೆ ಸಿಎಂ ಪಟ್ಟ ಕಟ್ಟುವ ಸಿದ್ಧತೆ ನಡೆದಿದೆ. ಈ ಸಂದರ್ಭ ಕಾಂಗ್ರೆಸ್ ಪಕ್ಷ ಲಿಂಗಾಯಿತ ನಾಯಕನಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿದರೆ ಮತದಾರರು ಸಹಜವಾಗಿ ನಮ್ಮತ್ತ ಬರುತ್ತಾರೆ. ಆರ್ಥಿಕ ಬಲ ತುಂಬಿ ಪಕ್ಷ ಮುನ್ನಡೆಸುವ ಶಕ್ತಿ ನನಗಿದೆ. ದಯವಿಟ್ಟು ಪಕ್ಷದ ಅಧ್ಯಕ್ಷ ಸ್ಥಾನ ನನಗೆ ನೀಡಿ.

ಇದು ಸೂಕ್ತ ಸಮಯ. ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವ ಯತ್ನ ಪ್ರಾಮಾಣಿಕವಾಗಿ ಮಾಡಲಿದ್ದೇನೆ. ಶೇ.16ಕ್ಕಿಂತ ಹೆಚ್ಚಿರುವ ಲಿಂಗಾಯತ ಮತದಾರರು ಕಾಂಗ್ರೆಸ್​ನತ್ತ ಮುಖ ಮಾಡಿದರೆ ನಮಗೆ ಗೆಲುವು ನಿಶ್ಚಿತ, 130 ಸ್ಥಾನ ಗಳಿಸುವುದು ಕಷ್ಟಸಾಧ್ಯವಾಗದು. ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಉಳಿದೆಲ್ಲಾ ಸಮುದಾಯದವರಿಗೆ ಅವಕಾಶ ನೀಡಿದರೆ ಎಲ್ಲವೂ ಸರಿ ಹೋಗಲಿದೆ. ಈಗಿರುವ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯಿತ ಸಮುದಾಯದ ಬೆಂಬಲ ಸಿಕ್ಕರೆ ಅಧಿಕಾರಕ್ಕೆ ಬರುವುದು ಸುಲಭವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್​​ನಲ್ಲಿ ಸಿಎಂ ಸ್ಥಾನಕ್ಕಾಗಿ ತೀವ್ರ ಪೈಪೋಟಿ

ಕಾಂಗ್ರೆಸ್ ಪಕ್ಷದಲ್ಲಿ ಒಳಗೊಳಗೇ ಸಿಎಂ ಸ್ಥಾನಕ್ಕಾಗಿ ನಾಯಕರ ಪೈಪೋಟಿ ಮುಂದುವರಿದಿದೆ. ಈ ಸಂದರ್ಭ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾದ ಎಂ.ಬಿ.ಪಾಟೀಲ್ ಬಲವಾಗಿಯೇ ತಮ್ಮ ಪ್ರತಿಪಾದನೆ ಮುಂದಿಟ್ಟಿದ್ದಾರೆ. ಈ ಹಿಂದೆ ಕೂಡ ಲಿಂಗಾಯತ ವೋಟ್ ಬ್ಯಾಂಕ್​ಗೆ ಕಾಂಗ್ರೆಸ್ ಕಣ್ಣು ಹಾಕಿತ್ತು. ಈ ಅಲೋಚನೆ ಕಾಂಗ್ರೆಸ್ ಪಾಳಯದಲ್ಲಿ ಬಹಳ ವರ್ಷಗಳಿಂದ ನಡೆಯುತ್ತಲೇ ಇದೆ.

ಬಿಜೆಪಿಯಲ್ಲಿ ಯಡಿಯೂರಪ್ಪಗೆ ಅವಮಾನ ಆಗಿದೆ. ಅವರನ್ನ ನಡೆಸುಕೊಂಡ ರೀತಿ ಸರಿಯಿಲ್ಲ ಎಂಬುವುದು ನಮ್ಮ ಮುಂದಿನ ಅಸ್ತ್ರವಾಗಲಿದೆ. ಬಿಎಸ್​ವೈ ನಡೆಸಿಕೊಂಡ ರೀತಿಗೆ ಸಹಜವಾಗಿ ಈಗ ಲಿಂಗಾಯತ ಸಮುದಾಯಕ್ಕೆ ಬೇಸರವಾಗಿದೆ. ಇದರ ಲಾಭ ನಾವು ಪಡೆದುಕೊಳ್ಳಬಹುದು. ಯಡಿಯೂರಪ್ಪ ಮುಂದಿನ ನಡೆ ಬಿಜೆಪಿಗೆ ಅನುಕೂಲಕರವಾಗಿ ಇರುವುದಿಲ್ಲ. ಇದರಿಂದ ಸೂಕ್ತ ರೀತಿಯಲ್ಲಿ ಯೋಚಿಸುವ ಸಂದರ್ಭ ತಮ್ಮ ಮೇಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡಿಕೊಡುವ ಯತ್ನವನ್ನು ಎಂ.ಬಿ.ಪಾಟೀಲ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರ ಪ್ರತಿಕ್ರಿಯೆ ಬಗ್ಗೆ ಮಾಹಿತಿ ಇಲ್ಲ. ಆದರೆ, ಇತ್ತೀಚೆಗಷ್ಟೇ ತಮ್ಮ ಅಧ್ಯಕ್ಷ ಅವಧಿಯ ಒಂದು ವರ್ಷ ಪೂರೈಸಿರುವ ಹಾಗೂ ಅಧ್ಯಕ್ಷರಾದ ಮೇಲೆ ಪಕ್ಷ ಬಲಪಡಿಸಲು ಲಕ್ಷಾಂತರ ರೂ. ವ್ಯಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ನಿರಾಣಿ - ಬಿಎಸ್​ವೈ ಭೇಟಿ: ರಾಜಕೀಯ ವಲಯದಲ್ಲಿ ಭಾರಿ ಚರ್ಚೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.