ETV Bharat / city

ಇಂದು ಸಿಎಂರಿಂದ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ.. ಮೂಡಬಿದಿರೆಯಿಂದಲೇ ಪಿಎಂ ವಿಡಿಯೋ ಕಾನ್ಫ್‌ರೆನ್ಸ್​ನಲ್ಲಿ ಬೊಮ್ಮಾಯಿ ಭಾಗಿ

author img

By

Published : Apr 27, 2022, 6:50 AM IST

ಸಿಎಂ ಬೊಮ್ಮಾಯಿ ಅವರಿಂದ ಜಿಲ್ಲಾ ಪ್ರವಾಸ ಮುಂದುವರೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ನಡೆಸಲಿರುವ ವಿಡಿಯೋ ಕಾನ್ಫ್‌ರೆನ್ಸ್​ನಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಲಿದ್ದಾರೆ.

Continued District Tour from CM Bommai  CM Bommai Visit to Dakshina Kannada district Today  CM Bommai news  ಸಿಎಂ ಬೊಮ್ಮಾಯಿಯಿಂದ ಮುಂದುವರಿದ ಜಿಲ್ಲಾ ಪ್ರವಾಸ  ಇಂದು ದಕ್ಷಿಣಕನ್ನಡ ಜಿಲ್ಲೆಗೆ ಸಿಎಂ ಬೊಮ್ಮಾಯಿ ಭೇಟಿ  ಸಿಎಂ ಬೊಮ್ಮಾಯಿ ಸುದ್ದಿ  PM Modi video conference  ಪಿಎಂ ಮೋದಿ ವೀಡಿಯೋ ಕಾನ್ಫ್‌ರೆನ್ಸ್
ಮೂಡಬಿದಿರೆಯಿಂದಲೇ ಪಿಎಂ ವೀಡಿಯೋ ಕಾನ್ಫ್‌ರೆನ್ಸ್​ನಲ್ಲಿ ಬೊಮ್ಮಾಯಿ ಭಾಗಿ

ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ನಿರಂತರವಾಗಿ ಜಿಲ್ಲಾ ಪ್ರವಾಸದಲ್ಲಿ ತೊಡಗಿದ್ದು, ವಿಜಯಪುರ ಪ್ರವಾಸದ ಬಳಿಕ ಇಂದು ದಕ್ಷಿಣ ಕನ್ನಡ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಗೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ, ಅಲ್ಲಿ ಅನ್ನದಾಸೋಹ ಕಟ್ಟಡದ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಜೈನ್ ಬಸದಿಗೆ ಭೇಟಿ ಕೊಡಲಿದ್ದು, ಮಧ್ಯಾಹ್ನ 1ಗಂಟೆಗೆ ಮೂಡಿಬಿದರೆ ಪ್ರೆಸ್ ಕ್ಲಬ್​ನಲ್ಲಿ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಓದಿ: ವಿಡಿಯೋ: ತಿವಿಯಲು ಮುಂದಾದ ಎತ್ತು; ಸಿಎಂ ಬೊಮ್ಮಾಯಿ ಜಸ್ಟ್‌ ಮಿಸ್!

ಮಧ್ಯಾಹ್ನ 3 ಗಂಟೆಗೆ ಮೂಡಬಿದಿರೆ ತಾಲೂಕು ಆಡಳಿತಸೌಧ ಉದ್ಘಾಟನೆ ಹಾಗೂ ಮುಲ್ಕಿ ವಿಧಾನಸಭೆ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ 5.30ಕ್ಕೆ ಮೂಡುಬಿದಿರೆಯಿಂದ ಹೊರಟು ರಾತ್ರಿ 7.45ಕ್ಕೆ ಬೆಂಗಳೂರಿಗೆ ವಾಪಸ್​ ಆಗಲಿದ್ದಾರೆ.

ಮೂಡಬಿದಿರೆಯಿಂದಲೇ ಪಿಎಂ ವೀಡಿಯೋ ಕಾನ್ಫ್‌ರೆನ್ಸ್​ನಲ್ಲಿ ಭಾಗಿ : ಮೂಡುಬಿದಿರೆಯಿಂದಲೇ ಪ್ರಧಾನಿ ನರೇಂದ್ರ ಮೋದಿ ನಡೆಸಲಿರುವ ವಿಡಿಯೋ ಕಾನ್ಫ್‌ರೆನ್ಸ್​ನಲ್ಲಿ ಭಾಗಿಯಾಗಲಿರುವ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದ ಕೊವೀಡ್ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ನಾಲ್ಕನೇ ಅಲೆ ನಿಯಂತ್ರಣ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಪಿಎಂ ಜೊತೆ ಸಿಎಂ ಬೊಮ್ಮಾಯಿ ಸಮಾಲೋಚನೆ ನಡೆಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.