ಬೆಂಗಳೂರು: ಜೀರೋ ಟ್ರಾಫಿಕ್ ಸೌಲಭ್ಯ ತಿರಸ್ಕರಿಸಿ ಸಿಗ್ನಲ್ ಫ್ರೀ ವ್ಯವಸ್ಥೆ ಉಳಿಸಿಕೊಂಡು ಸಂಚಾರ ಮಾಡುವ ಪರಿಪಾಠ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಟ್ರಾಫಿಕ್ ಬಿಸಿ ತಟ್ಟಿತು. ಸಂಚಾರ ದಟ್ಟಣೆಯಲ್ಲಿ ಸಿಲುಕಿ ಜನಸಾಮಾನ್ಯರಂತೆಯೇ ಟ್ರಾಫಿಕ್ ತಲೆನೋವು ಅನುಭವಿಸಬೇಕಾಯಿತು.
ಆರ್.ಟಿ.ನಗರದಿಂದ ವಿಧಾನಸೌಧಕ್ಕೆ ಹೊರಟ ಮುಖ್ಯಮಂತ್ರಿ ಬೊಮ್ಮಾಯಿ ಅವರ ಬೆಂಗಾವಲಿಗೆ ಎಂದಿನಂತೆ ಜೀರೋ ಟ್ರಾಫಿಕ್ ಬದಲು ಸಿಗ್ನಲ್ ಫ್ರೀ ಮಾಡಿಕೊಡಲಾಯಿತು. ಪ್ಯಾಲೆಸ್ ರಸ್ತೆಯ ಮೂಲಕ ಬಂದ ಸಿಎಂ ಬೆಂಗಾವಲು ವಾಹನ ಗಾಲ್ಫ್ ಕ್ಲಬ್ ರಸ್ತೆಯಲ್ಲಿನ ಟ್ರಾಫಿಕ್ನಲ್ಲಿ ಸಿಲುಕಿತು. ಜೀರೋ ಟ್ರಾಫಿಕ್ ಇಲ್ಲದ ಕಾರಣ ಸಂಚಾರ ದಟ್ಟಣೆಯಲ್ಲೇ ಸಿಎಂ ಸಂಚರಿಸಬೇಕಾಯಿತು.
ಟ್ರಾಫಿಕ್ ಪೊಲೀಸರ ಪರದಾಟ: ಸಿಎಂ ಬೆಂಗಾವಲಿಗೆ ಸಿಗ್ನಲ್ ಫ್ರೀ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರೂ ಸಂಚಾರ ದಟ್ಟಣೆ ಹೆಚ್ಚಾಗಿದ್ದ ಕಾರಣ ರಸ್ತೆ ಕ್ಲಿಯರ್ ಆಗದೆ ವಾಹನ ದಟ್ಟಣೆ ಎದುರಾಯಿತು. ಸಿಎಂ ಬೆಂಗಾವಲು ಬಂದರೂ ರಸ್ತೆ ಫ್ರೀಯಾಗದ ಕಾರಣ ಟ್ರಾಫಿಕ್ ಪೊಲೀಸರು ಪೇಚಿಗೆ ಸಿಲುಕಿದರು. ರಸ್ತೆಯ ಸುತ್ತಮುತ್ತಲ ರಸ್ತೆಗಳನ್ನು ಸಿಗ್ನಲ್ ಫ್ರೀ ಮಾಡಿ ರಸ್ತೆಯಲ್ಲೇ ಸಿಎಂ ಕಾರು ನಿಲ್ಲುವಂತಾಗುವ ಪರಿಸ್ಥಿತಿ ತಪ್ಪಿಸಿ ನಿಟ್ಟುಸಿರು ಬಿಟ್ಟರು.
ಇದನ್ನೂ ಓದಿ: ಸಿಎಂ ನಿವಾಸಕ್ಕೆ ಸ್ಕೃತಿ ಇರಾನಿ ಭೇಟಿ: ಡ್ಯಾಶ್ ಬೋರ್ಡ್ ಕುರಿತು ಚರ್ಚೆ