ETV Bharat / city

ರಾಜ್ಯ ಬಜೆಟ್ ಸಿದ್ಧತೆ: ಫೆ. 7ರಿಂದ ಸಿಎಂ ಬೊಮ್ಮಾಯಿ ಸರಣಿ ಸಭೆ

ಫೆಬ್ರವರಿ 7ರಿಂದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಪೂರ್ವಭಾವಿ ಸಭೆ ಆರಂಭಿಸಲಿದ್ದಾರೆ.

cm meeting on state budget
ಸಿಎಂ ಬೊಮ್ಮಾಯಿ ಬಜೆಟ್ ಸಭೆ
author img

By

Published : Feb 2, 2022, 12:49 PM IST

ಬೆಂಗಳೂರು: ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಮುಂಗಡ ಬಜೆಟ್ ಮಂಡನೆಯಾಗಲಿದೆ. ಫೆಬ್ರವರಿ ಎರಡನೇ ವಾರದಿಂದ ಇಡೀ ವಾರ ಎಲ್ಲ ಇಲಾಖೆಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಣಿ ಸಭೆ ನಡೆಸಲಿದ್ದಾರೆ.

ಫೆಬ್ರವರಿ 7ರಿಂದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿಭವನದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಬಜೆಟ್ ಪೂರ್ವಭಾವಿ ಸಭೆ ಆರಂಭಿಸಲಿದ್ದಾರೆ. ವಿವಿಧ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗೆ ಇಲಾಖೆಗಳ ಜೊತೆ ಸಭೆ ನಿಗದಿಯಾಗಿದೆ.

State Budget Meeting Schedule
ರಾಜ್ಯ ಬಜೆಟ್ ಪೂರ್ವಭಾವಿ ಸಭೆಯ ವೇಳಾಪಟ್ಟಿ

ಉಳಿದಂತೆ ಫೆಬ್ರವರಿ 21ರಂದು ರೈತ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಲಿದ್ದಾರೆ. ಫೆಬ್ರವರಿ 22 ಹಾಗೂ 25ರಂದು ತೆರಿಗೆ ಸಂಗ್ರಹ ಇಲಾಖೆಗಳ ಜೊತೆ ಸಭೆ ನಡೆಸಲಿದ್ದಾರೆ. ಆ ನಂತರ ಬಜೆಟ್ ಅಂತಿಮ ರೂಪುರೇಷೆ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದ್ದಾರೆ.

State Budget Meeting Schedule
ರಾಜ್ಯ ಬಜೆಟ್ ಪೂರ್ವಭಾವಿ ಸಭೆಯ ವೇಳಾಪಟ್ಟಿ

ಆರ್ಥಿಕ ಇಲಾಖೆಯ ಬಜೆಟ್ ಪೂರ್ವಭಾವಿ ಸಭೆಗಳ ಹಿನ್ನಲೆಯಲ್ಲಿ ಸಂಬಂಧಪಟ್ಟ ಸಚಿವರು ಸಿಎಂ ಸಭೆ ಕರೆದ ವೇಳೆ ಹಾಜರು ಇರುವಂತೆ ಸೂಚನೆ ನೀಡಲಾಗಿದೆ. ಸಿಎಂ ಕಚೇರಿಯಿಂದ ಎಲ್ಲ ಸಚಿವರಿಗೆ ಸೂಚನೆ ಹೊರಡಿಸಲಾಗಿದೆ. ಫೆಬ್ರವರಿ 7 ರಿಂದ 14 ರವರಗೆ ನಿರಂತರ ಬಜೆಟ್ ಪೂರ್ವಭಾವಿ ಸಭೆ ಇದ್ದು, ಸಭೆ ವೇಳೆ ಕಡ್ಡಾಯವಾಗಿ ಸಚಿವರು ಹಾಜರಿರಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ನಾಳೆ ದೆಹಲಿಗೆ ಸಿಎಂ ಪ್ರವಾಸ.. ಸಂಪುಟ ಪುನಾರಚನೆ ಬಗ್ಗೆ ಚರ್ಚೆ?

ಬಜೆಟ್ ಸಿದ್ದತೆ ಕುರಿತು ಮಾಹಿತಿ ನೀಡಿರುವ ಸಿಎಂ, ಕೇಂದ್ರ ಸರ್ಕಾರದ ಬಜೆಟ್ ಆಧಾರದ ಮೇಲೆಯೇ‌ ನಮ್ಮ ಬಜೆಟ್ ರೆಡಿಯಾಗಲಿದೆ. ರಾಜ್ಯಕ್ಕೆ ಯಾವ ಯಾವ ಹೊಸ ಯೋಜನೆಗಳು ಜಾರಿಯಾಗಿವೆ? ಅದಕ್ಕೆ ಹಣ ಎಷ್ಟು ನಿಗದಿಯಾಗಿದೆ, ಒಟ್ಟಾರೆ ರಾಜ್ಯದ ಅಭಿವೃದ್ಧಿಗೆ ಸಿಕ್ಕಿರುವ ಅನುದಾನ ಹಾಗೂ ಯೋಜನೆಗೆ ಮೀಸಲಿಟ್ಟ ಹಣದ ಮೇಲೆ ನಮ್ಮ ಬಜೆಟ್ ರೆಡಿಯಾಗುತ್ತದೆ ಎಂದು ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರಾಜ್ಯ ಸರ್ಕಾರದ ಬಜೆಟ್ ನಿಂದ ಏನು‌ ನಿರೀಕ್ಷೆ ಮಾಡಬಹುದು ಎನ್ನುವ ಕುರಿತು ಗುಟ್ಟು ಬಿಟ್ಟುಕೊಡದ ಸಿಎಂ ಬೊಮ್ಮಾಯಿ, ಕೇವಲ ಕಾದು ನೋಡಿ ಎಂದಷ್ಟೇ ಉತ್ತರಿಸಿ ಕುತೂಹಲ ಮೂಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.