ETV Bharat / city

ಹಾಲು, ನೀರು, ವಿದ್ಯುತ್ ದರ ಏರಿಕೆ.. ಸಿಎಂ ಹೇಳಿದ್ದೇನು?

ಹಾಲು, ನೀರು, ವಿದ್ಯುತ್ ದರ ಏರಿಕೆ ಕುರಿತು ಇನ್ನೂ ಯಾವುದೇ ತೀರ್ಮಾನಗಳು ಆಗಿಲ್ಲ. ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಸಮಸ್ಯೆಗಳು ಮತ್ತು ನ್ಯಾಯಾಲಯದಲ್ಲಿ ವ್ಯಾಜ್ಯಗಳ ಕುರಿತು ವಿಡಿಯೋ ಸಂವಾದದ ಮೂಲಕ ಇಂದು ಸಭೆ ನಡೆಸಲಾಗುತ್ತದೆ. ಒತ್ತಡಕ್ಕೆ ಮಣಿದು ವೀಕೆಂಡ್ ಕರ್ಫ್ಯೂ ಹಿಂತೆಗೆದುಕೊಂಡಿಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Jan 22, 2022, 11:27 AM IST

Updated : Jan 22, 2022, 1:09 PM IST

ಬೆಂಗಳೂರು: ಯಾರ ಒತ್ತಡಕ್ಕೋ ಮಣಿದು ನಾವು ವೀಕೆಂಡ್ ಕರ್ಫ್ಯೂ ವಾಪಸ್ ಪಡೆದಿಲ್ಲ. ಜನರ ಜೀವ ಉಳಿಯಬೇಕು, ಜೀವನವೂ ನಡೆಯಬೇಕು ಎನ್ನುವುದನ್ನು ಗಮನದಲ್ಲಿರಿಸಿಕೊಂಡು ತಜ್ಞರ ಅಭಿಪ್ರಾಯ ಪಡೆದು, ವೈಜ್ಞಾನಿಕ ಆಯಾಮದಲ್ಲಿ ಚರ್ಚಿಸಿ ನಿರ್ಧಾರ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಆರ್.ಟಿ ನಗರದ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಮೂರನೇ ಅಲೆಯಲ್ಲಿ ಸಂಖ್ಯೆ ಹೆಚ್ಚಿದ್ದರೂ ತೀವ್ರತೆ ಕಡಿಮೆ ಇದೆ. ಬೇಕಾದ ಔಷಧ ಲಭ್ಯ ಇದೆ. ಗುಣ ಮುಖದ ಪ್ರಮಾಣವು ಬಹಳ ಹೆಚ್ಚಾಗಿದೆ. ಹೀಗಾಗಿ ನಮ್ಮ ತಜ್ಞರು, ಆರೋಗ್ಯ ಇಲಾಖೆಯವರು ಯಾವ ರೀತಿ ಕೊರೊನಾ ನಿರ್ವಹಣೆ ಮಾಡಬಹುದು ಎನ್ನುವ ಧೈರ್ಯ ಕೊಟ್ಟಿದ್ದರಿಂದ ಹಾಗೂ ಸಾಮಾನ್ಯ ಜನರಿಗೆ, ಕೂಲಿಕಾರರಿಗೆ, ಬಡವರಿಗೆ, ಕೆಲಸ ಮಾಡುವವರಿಗೆ ಎಲ್ಲರಿಗೂ ವೀಕೆಂಡ್ ಕರ್ಫ್ಯೂನಿಂದ ತೊಂದರೆಯಾಗುತ್ತಿತ್ತು.

ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ನಿರ್ವಹಣೆ ಮತ್ತಷ್ಟು ಸದೃಢಗೊಳಿಸಿ ಜೀವ ಉಳಿಯಬೇಕು, ಜೀವನವೂ ನಡೆಯಬೇಕು ಎನ್ನುವ ಕಾರಣಕ್ಕೆ ನಾವು ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯುವ ತೀರ್ಮಾನ ಕೈಗೊಂಡಿದ್ದೇವೆ. ಇದರಲ್ಲಿ ಯಾರ ಲಾಭಿಗೆ, ಒತ್ತಡಕ್ಕೆ ಮಣಿದಿರುವ ಪ್ರಶ್ನೆ ಇಲ್ಲ ಎಂದರು.

ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಹಾಲು, ನೀರು ದರ ಏರಿಕೆಗೆ ಅವಸರದ ನಿರ್ಧಾರ ಮಾಡಲ್ಲ: ಹಾಲು, ನೀರು, ವಿದ್ಯುತ್ ದರ ಏರಿಕೆ ಕುರಿತು ಇನ್ನೂ ಯಾವುದೇ ತೀರ್ಮಾನಗಳು ಆಗಿಲ್ಲ. ಹಾಲು, ನೀರು, ವಿದ್ಯುತ್ ದರ ಏರಿಕೆ ಕುರಿತು ಪ್ರಸ್ತಾಪಗಳು ಎಲ್ಲ ಆಡಳಿತದಲ್ಲಿ ಇದ್ದೇ ಇರುತ್ತವೆ. ನಾವು ಎಲ್ಲ ಆಯಾಮಗಳಲ್ಲಿ ಅವಲೋಕಿಸಿ ನಂತರವೇ ನಿರ್ಧರಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಅವಸರದ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಜಲ ವ್ಯಾಜ್ಯಗಳ ಕುರಿತು ಸಭೆ: ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಸಮಸ್ಯೆಗಳು ಮತ್ತು ನ್ಯಾಯಾಲಯದಲ್ಲಿ ವ್ಯಾಜ್ಯಗಳ ಕುರಿತು ವಿಡಿಯೋ ಸಂವಾದದ ಮೂಲಕ ಇಂದು ಸಭೆ ನಡೆಸಲಾಗುತ್ತದೆ. ದೆಹಲಿಯಿಂದ ನಮ್ಮ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ನಮ್ಮ ಅಡ್ವೋಕೆಟ್​ ಜನರಲ್, ನೀರಾವರಿ ಇಲಾಖೆ ತಾಂತ್ರಿಕ ತಜ್ಞರು ಕೂಡ ಭಾಗವಹಿಸಲಿದ್ದಾರೆ. ನೀರಾವರಿ ವಿಚಾರದಲ್ಲಿ ನಮ್ಮದು ಮಧ್ಯ ಸ್ತರದ ರಾಜ್ಯವಾಗಿದೆ.

ಹೀಗಾಗಿ ನಮ್ಮ ಮೇಲಿರುವ ರಾಜ್ಯಗಳು, ನಮ್ಮ ಕೆಳಗಿರುವ ರಾಜ್ಯಗಳು ಆಗಾಗ ತಕರಾರುಗಳನ್ನು ತೆಗೆಯುತ್ತಲೇ ಇರುತ್ತವೆ. ಈಗಾಗಲೇ ಎರಡು ನ್ಯಾಯಾಧೀಕರಣದ ಆದೇಶ ಬಂದಿದೆ. ಕೃಷ್ಣಾ ನದಿದ್ದು ಮೊದಲನೇ ಆದೇಶ ಬಚಾವತ್ ಆದೇಶ, ಎರಡನೇ ಆದೇಶ ಕೂಡ ಬಂದಿದೆ. ನೋಟಿಫಿಕೇಶನ್ ಆಗಬೇಕು ಆದರೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಬಾಕಿ ಉಳಿದಿದೆ ಎಂದರು.

ಜೊತೆಗೆ ಮಹದಾಯಿ ನ್ಯಾಯಾಧೀಕರಣದ ಆದೇಶ ಬಂದರೂ ಕೂಡ ಅದನ್ನು ಮತ್ತೆ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದು ವಿಚಾರಣೆ ನಡೆಯುತ್ತಿದೆ. ಮೂರು ರಾಜ್ಯಗಳು ಹಂಚಿಕೆಯಾಗಿರುವ ನೀರಿನ ಬಗ್ಗೆ ತಮ್ಮ ತಕರಾರನ್ನು ಸುಪ್ರೀಂಕೋರ್ಟ್​ಗೆ ತೆಗೆದುಕೊಂಡು ಹೋಗಿದ್ದಾರೆ. ಅದೇ ರೀತಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನ್ಯಾಯಾಧೀಕರಣದ ಆದೇಶ ಆಗಿ ನೋಟಿಫಿಕೇಶನ್ ಆದರೂ ಹಲವಾರು ವಿಷಯಗಳು ಇನ್ನೂ ಉಳಿದುಕೊಂಡಿವೆ.

ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್​ಗೆ ಹೋಗಿದೆ. ಇವೆಲ್ಲದರ ಬಗ್ಗೆ, ವ್ಯಾಜ್ಯಗಳನ್ನು ಯಾವ ರೀತಿ ಪರಿಹರಿಸಿಕೊಳ್ಳಬೇಕು ಎಂದು ನಾವು ಹಲವಾರು ಸಭೆಗಳನ್ನು ಈಗಾಗಲೇ ದೆಹಲಿಯಲ್ಲಿ ಮಾಡಿದ್ದೇವೆ. ನಾನು ಮುಖ್ಯಮಂತ್ರಿಯಾದ ಕೂಡಲೇ ಸಭೆ ನಡೆಸಿದೆ, ನಂತರ ಎರಡು ಮೂರು ಸಭೆಗಳನ್ನು ದೆಹಲಿ ಮಟ್ಟದಲ್ಲಿಯೂ ಮಾಡಿದ್ದೇನೆ.

ಈಗ ಕೊರೊನಾ ಕಾರಣಕ್ಕಾಗಿ ವಿಡಿಯೋ ಸಂವಾದದ ಮೊದಲ ಮೂಲಕ ಸಭೆ ನಡೆಸುತ್ತಿದ್ದೇನೆ. ಇದನ್ನ ಆದಷ್ಟು ಬೇಗ ಪರಿಹರಿಸಿಕೊಳ್ಳುವ ಸಲುವಾಗಿ ಗಂಭೀರವಾಗಿ ಮುನ್ನಡೆಯಲು ಈ ಸಭೆ ಕರೆದಿದ್ದೇನೆ. ಸಮಸ್ಯೆ, ಕೋರ್ಟ್ ಕೇಸ್ ಪ್ರಗತಿ ಸೇರಿ ಎಲ್ಲ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ಎಲ್ಲ ವಿಚಾರಗಳ ಬಗ್ಗೆ ಇಂದು ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳುತ್ತೇವೆ ಎಂದರು.

ಗೌಡರು ಕೋವಿಡ್​​ನಿಂದ ಚೇತರಿಸಿಕೊಳ್ಳಲಿ:

ದೇವೇಗೌಡರು ಹಿರಿಯ ನಾಯಕರು, ಮಾಜಿ ಪ್ರಧಾನಿಗಳು ಸಾಮಾನ್ಯವಾಗಿ ಅವರು ಈ ವಯಸ್ಸಿನಲ್ಲಿಯೂ ಆರೋಗ್ಯ ಚೆನ್ನಾಗಿ ಇರಿಸಿಕೊಂಡಿದ್ದಾರೆ. ಆದರೆ, ಕೊರೊನಾ ಯಾರನ್ನು ಬಿಟ್ಟಿಲ್ಲ. ಈಗ ಅವರಿಗೆ ಸೋಂಕು ತಗುಲಿದೆ, ಆದರೂ ಅವರಿಗೆ ಸೋಂಕಿನ ತೀವ್ರತೆ ಇರಲಿಕ್ಕಿಲ್ಲ. ಮಣಿಪಾಲ ಆಸ್ಪತ್ರೆಗೆ ಅವರು ದಾಖಲಾಗಿದ್ದು, ಆಸ್ಪತ್ರೆ ವೈದ್ಯರ ಜೊತೆ ಮಾತನಾಡುತ್ತೇನೆ. ಅವರ ಕುಟುಂಬ ಸದಸ್ಯರ ಜೊತೆಯೂ ಮಾತನಾಡುತ್ತೇನೆ ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 22, 2022, 1:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.