ETV Bharat / city

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ; ರಾಜಕಾಲುವೆ ಒತ್ತುವರಿ ತೆರವಿಗೆ ಪಣ - ಪ್ರವಾಹ ಪೀಡಿತ ಯಲಹಂಕಾ ಪ್ರದೇಶಗಳಿಗೆ ಸಿಎಂ ಭೇಟಿ

ಈ ವರ್ಷ 50 ಕಿ.ಮೀ ರಾಜಕಾಲುವೆ ತೆರವು ಮಾಡಲು ತೀರ್ಮಾನ ಕೈಗೊಂಡಿದ್ದು, ಮೊನ್ನೆ ನಡೆದ ಸಭೆಯಲ್ಲಿ ಮತ್ತೆ 50 ಕಿ.ಮೀ ಹೆಚ್ಚಿನ ರಾಜಕಾಲುವೆ ತೆರವು ಮಾಡುವ ತೀರ್ಮಾನಕ್ಕೆ ಬಂದಿದ್ದೇವೆ. ಮತ್ತೊಂದು ಸಭೆ ಮಾಡಿ ರಾಜಕಾಲುವೆಗಳನ್ನು ಸಿದ್ಧಪಡಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

CM Basavaraj Bommai Reaction On Rain Effect
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Nov 23, 2021, 2:02 PM IST

Updated : Nov 23, 2021, 2:59 PM IST

ಯಲಹಂಕ(ಬೆಂಗಳೂರು): ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಿಎಂ, ಯಲಹಂಕದಲ್ಲಿ ಕೆಲವು ದಿನಗಳಿಂದ ಭಾರಿ ಮಳೆಯಾಗಿದ್ದು, ಕೆರೆ ಕೋಡಿ ಒಡೆದು ತಗ್ಗು ಪ್ರದೇಶಗಳಿಗೆ ಮತ್ತು ಕೇಂದ್ರೀಯ ವಿಹಾರ ಅಪಾರ್ಟ್​​ಮೆಂಟ್​​ಗೆ ನೀರು ನುಗ್ಗಿದೆ. 4 ರಿಂದ 5 ಅಡಿ ನೀರು ನಿಂತು ಜನರು ಪರದಾಡುವಂತಾಗಿದೆ. ಇದಕ್ಕೆಲ್ಲ ರಾಜಕಾಲುವೆ ಒತ್ತುವರಿ ಕಾರಣವಾಗಿದ್ದು, ಒತ್ತುವರಿ ಮಾಡಿರುವ ಕಾಲುವೇ ಶೀಘ್ರ ತೆರವುಗೊಳಿಸಲಾಗುವುದು ಎಂದು ಸಿಎಂ ಹೇಳಿದರು.

ಯಲಹಂಕ ಕೆರೆಗೆ ಎರಡು ಕೋಡಿಗಳಿದ್ದು, ಎರಡು ರಾಜಕಾಲುವೆಗಳ ಅಗಲ ಕಡಿಮೆ ಇದೆ. ಯಲಹಂಕ ಕೆರೆ ದೊಡ್ಡದಾಗಿದ್ದು, ಕೋಡಿ ಬಿದ್ದಾಗ ಹೊರ ಹರಿವಿನ ಪ್ರಮಾಣ ಹೆಚ್ಚಾಗಿರುತ್ತದೆ. ಇಷ್ಟೊಂದು ಪ್ರಮಾಣದ ನೀರು ಹರಿಯಲು ರಾಜ ಕಾಲುವೆ ಸಾಕಾಗುತ್ತಿಲ್ಲ. ಇದುವೇ ಈಗ ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಕೆಲವು ಕಡೆಗಳಲ್ಲಿ ರಾಜಕಾಲುವೆ ಅತಿಕ್ರಮಣ:

ಕೆಲವು ಕಡೆ ರಾಜ ಕಾಲುವೆ ಅತಿಕ್ರಮಣ ಮತ್ತು ಮುಚ್ಚಿರುವುದು ಗಮನಕ್ಕೆ ಬಂದಿದೆ. ಮಳೆ ನಿಂತ ನಂತರ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಮುಖ್ಯ ಆಯುಕ್ತರು ಮತ್ತು ಮುಖ್ಯ ಇಂಜಿನಿಯರ್​ಗೆ ಸೂಚನೆ ನೀಡಿದ್ದು, 8 ಅಡಿಗಳ ರಾಜ ಕಾಲುವೆಯನ್ನು 30 ಅಡಿಗಳವರೆಗೂ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಇದೇ ವೇಳೆ ಭರವಸೆ ನೀಡಿದರು.

ಈ ವರ್ಷ 50 ಕಿ.ಮೀ ರಾಜಕಾಲುವೆ ತೆರವು ಮಾಡಲು ತಿರ್ಮಾನ ಕೈಗೊಂಡಿದ್ದು, ಮೊನ್ನೆ ನಡೆದ ಸಭೆಯಲ್ಲಿ ಮತ್ತೆ 50 ಕಿ.ಮೀ ಹೆಚ್ಚಿನ ರಾಜಕಾಲುವೆ ತೆರವು ಮಾಡುವ ತೀರ್ಮಾನಕ್ಕೆ ಬಂದಿದ್ದೇವೆ. ಮತ್ತೊಂದು ಸಭೆ ಮಾಡಿ ಎಲ್ಲೆಲ್ಲಿ ರಾಜ ಕಾಲುವೆ ಮುಚ್ಚಿ ಹೋಗಿದೆ, ಅತಿಕ್ರಮಣವಾಗಿದೆ, ಸಣ್ಣದಾಗಿದೆ ಇವುಗಳನ್ನೆಲ್ಲ ತೆರವು ಮಾಡಿ ಶಾಶ್ವತವಾದ ರಾಜಕಾಲುವೆಗಳನ್ನು ಸಿದ್ಧಪಡಿಸಲಾಗುವುದು. ಅಲ್ಲದೇ ದಕ್ಕೆ ಬೇಕಾದ ಹಣಕಾಸು ಒದಗಿಸಲಾಗುವುದು ಎಂದರು. ಪರಿಶೀಲನೆ ಸ್ಥಳೀಯ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಇತರರು ಇದ್ದರು.

ಸೂಕ್ತ ಪರಿಹಾರದ ಭರವಸೆ:

ಯಲಹಂಕದಲ್ಲಿ ಮಳೆಯಿಂದ 400 ಮನೆಗಳಿಗೆ ಹಾನಿಯಾಗಿದೆ. 10 ಕಿ.ಮೀ ಮುಖ್ಯರಸ್ತೆ ಹಾನಿಯಾಗಿದೆ ಮತ್ತು 20 ಕಿ.ಮೀ ಇತರೆ ರಸ್ತೆಗಳಿಗೆ ಹಾನಿಯಾಗಿದೆ. ನೀರು ನುಗ್ಗಿರುವ ಮನೆಗಳಿಗೆ ತಕ್ಷಣವೇ 10 ಸಾವಿರ ನೀಡಲಾಗುವುದು. ಪೂರ್ಣ ಪ್ರಮಾಣದಲ್ಲಿ ಬಿದ್ದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಮೊದಲ ಕಂತಿನಲ್ಲಿ 1 ಲಕ್ಷ ರೂ. ಹಣವನ್ನು ಕೂಡಲೇ ಕೊಡುವಂತೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Last Updated : Nov 23, 2021, 2:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.