ETV Bharat / city

ಮೊಬೈಲ್ ಕ್ಲಿನಿಕ್​ಗೆ ಸಿಎಂ ಚಾಲನೆ:  ಬೇರೆ ಜಿಲ್ಲೆಗಳಿಗೂ ವಿಸ್ತರಿಸಲು ಚಿಂತನೆ ಎಂದ ಬೊಮ್ಮಾಯಿ

ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳದಲ್ಲಿಯೇ ತಪಾಸಣೆ ಹಾಗೂ ಪರಿಹಾರ ನೀಡುವ ವ್ಯವಸ್ಥೆ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
author img

By

Published : Jun 6, 2022, 2:18 PM IST

Updated : Jun 6, 2022, 2:24 PM IST

ಬೆಂಗಳೂರು: ವಿಧಾನಸೌಧದಲ್ಲಿ ರೋಟರಿ ಬೆಂಗಳೂರು ಹೈಗ್ರೌಂಡ್ಸ್, ಇನ್ಫೋಸಿಸ್ ಫೌಂಡೇಶನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸಿಎಸ್‍ಆರ್ ಯೋಜನೆಯಡಿ ಒದಗಿಸಿರುವ ಲ್ಯಾಬ್ ಬಿಲ್ಟ್ ಆನ್ ವೀಲ್ಸ್ - ಮೊಬೈಲ್ ಕ್ಲಿನಿಕ್ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳದಲ್ಲಿಯೇ ತಪಾಸಣೆ ಹಾಗೂ ಪರಿಹಾರ ನೀಡುವ ವ್ಯವಸ್ಥೆ ಅಗತ್ಯವಿದೆ ಎಂದರು.

ಸಂಚಾರಿ ಕ್ಲಿನಿಕ್ ಕುರಿತು ಮಾತನಾಡಿದ ಸಿಎಂ, ಈ ಬಾರಿಯ ಆಯವ್ಯಯದಲ್ಲಿ ಗಾಲಿಗಳ ಮೇಲೆ ಆಸ್ಪತ್ರೆಗೆ ಸರ್ಕಾರ ಅನುದಾನ ಮೀಸಲಿರಿಸಿದೆ. ಬಸ್​ನಲ್ಲಿ ಪ್ರಯೋಗಾಲಯ ಹಾಗೂ ಆರೋಗ್ಯ ಸೇವಾ ಸೌಲಭ್ಯಗಳನ್ನು ನಾಲ್ಕು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗುವುದು. ಪ್ರಯೋಗ ಯಶಸ್ವಿಯಾದರೆ ಇನ್ನುಳಿದ ಜಿಲ್ಲೆಗಳಿಗೂ ವಿಸ್ತರಣೆ ಮಾಡಬೇಕು ಎಂಬ ಚಿಂತನೆ ಇದೆ. ಆ ಸಂದರ್ಭದಲ್ಲಿ ನಮ್ಮೊಂದಿಗೆ ಕೈಜೋಡಿಸಿ ಎಂದು ವಿವಿಧ ಸಂಸ್ಥೆಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.

ಮೊಬೈಲ್ ಕ್ಲಿನಿಕ್​ಗೆ ಚಾಲನೆ ನೀಡಿದ ಬಸವರಾಜ ಬೊಮ್ಮಾಯಿ

ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಿ ಕ್ಲಿನಿಕ್ ಉಪಯೋಗ ಮನಗಂಡು ಮೈಸೂರು, ಹುಬ್ಬಳ್ಳಿ- ಧಾರವಾಡ, ಮಂಗಳೂರು ಮಹಾನಗರ ಪಾಲಿಕೆಗಳಿಗೆ ಇವುಗಳನ್ನು ಆರೋಗ್ಯ ಇಲಾಖೆ ಹಸ್ತಾಂತರ ಮಾಡುತ್ತಿದೆ. ಇನ್ಫೋಸಿಸ್ ಪ್ರತಿಷ್ಠಾನ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಬಹಳ ದೊಡ್ಡ ಪಾತ್ರವನ್ನು ರಾಜ್ಯದಲ್ಲಿ ವಹಿಸಿದೆ. ಜಯದೇವ ಸಂಸ್ಥೆಯಲ್ಲಿ 500 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ಒದಗಿಸಿದ್ದಾರೆ. ಕಿದ್ವಾಯಿ, ನಿಮ್ಹಾನ್ಸ್ ಸಂಸ್ಥೆಗಳಿಗೆ ಧರ್ಮ ಛತ್ರ ನಿರ್ಮಿಸಿ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.

ಸಂಚಾರಿ ಕ್ಲಿನಿಕ್ ವಿಶೇಷತೆ ಏನು?: ಐಸಿಎಂಆರ್​ ನಿಗದಿಪಡಿಸಿರುವ ಮಾನದಂಡಕ್ಕೆ ಅನುಗುಣವಾಗಿ ಬಿಎಸ್​ಎಲ್​ -2 ಸುರಕ್ಷಾ ಮಟ್ಟದಲ್ಲಿ ಕ್ಲಿನಿಕ್ ನಿರ್ಮಾಣ ಮಾಡಲಾಗಿದೆ. ಒಂದೇ ಸೂರಿನಡೆ ಕ್ಲಿನಿಕ್, ಟೆಲಿ ಮೆಡಿಸಿನ್, ಫಾರ್ಮಸಿ, ವ್ಯಾಕ್ಸಿನ್ ಮತ್ತು ಇತರ ಔಷಧಗಳನ್ನು ಕೊಂಡೊಯ್ಯಲು ಸಹಕಾರಿಯಾಗುವಂತೆ 2 ಡಿಗ್ರಿಯಿಂದ -18 ಡಿಗ್ರಿ ಸೆಲ್ಸಿಯಸ್‌ನ ರೆಫ್ರಿಜರೇಟರ್, ತುರ್ತು ಚಿಕಿತ್ಸೆಗಾಗಿ ಆಕ್ಸಿಜನ್‌ ನೀಡಿ ಕನಿಷ್ಠ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಮಾಡುವ ಪ್ರತ್ಯೇಕ ಬೆಡ್‌ವುಳ್ಳ ಕೋಣೆ, ವಿದ್ಯುತ್‌ ಸಂಪರ್ಕ ಇಲ್ಲದಿರುವ ಕಡೆ ಉಪಯೋಗಿಸುವಂತೆ ಕೆಪಿ ಜನರೇಟರ್ ಮತ್ತು UPS ವ್ಯವಸ್ಥೆ ಹೊಂದಿದೆ.

ಈ ಮೊಬೈಲ್ ಕ್ಲಿನಿಕ್ ಸಾಂಕ್ರಾಮಿಕ ರೋಗಗಳಾದ ಕೋವಿಡ್ -19, ಟಿಬಿ, ಮಲೇರಿಯಾ, ಡೆಂಘೀ ಮತ್ತು ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ. ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ನಿರಂತರವಾಗಿ ಗ್ರಾಮೀಣ ಭಾಗದ ಜನರಿಗೆ ಸೂಕ್ತ ಸಮಯದಲ್ಲಿ ನೀಡಿ, ಆಸ್ಪತ್ರೆಗಳ ಒತ್ತಡ ಕಡಿಮೆ ಮಾಡಲಿದೆ. ಈ ಮಾದರಿಯ ಕನಿಷ್ಠ 20 ಮೊಬೈಲ್ ಕ್ಲಿನಿಕ್​ಗಳನ್ನು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (CSR) ಅಡಿ ಭರಿಸುವ ಯೋಜನೆ ರೂಪಿಸಲಾಗಿದೆ.

ಸದ್ಯ ಇನ್ಫೋಸಿಸ್ ಫೌಂಡೇಶನ್‌ನವರ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (CSR) ಯೋಜನೆಯಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 1 ಮೊಬೈಲ್ ಕ್ಲಿನಿಕ್​ಗೆ ಇಂದು ಚಾಲನೆ ನೀಡಲಾಗಿದೆ. ಈ ಮೊಬೈಲ್ ಕ್ಲಿನಿಕ್ ದಿ.ಪುನೀತ್ ರಾಜ್​ಕುಮಾರ್​ ಮತ್ತು ದಿ. ವಿಜಯ್​ಕುಮಾರ್​ ಬಿ (ಸಂಚಾರಿ ವಿಜಯ್ ) ಇವರ ಸ್ಮರಣಾರ್ಥ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ : ಸಿಎಂ ಬೊಮ್ಮಾಯಿ ವಿಶ್ವಾಸ

Last Updated : Jun 6, 2022, 2:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.