ETV Bharat / city

ಚೊಚ್ಚಲ ಬಜೆಟ್ ಅನುಷ್ಠಾನಕ್ಕೆ ಸಿಎಂ ಕ್ರಮ: ಏಪ್ರಿಲ್ 1ರಿಂದಲೇ ಯೋಜನೆಗಳ ಜಾರಿಗೆ ಸೂಚನೆ - ಕರ್ನಾಟಕ ಬಜೆಟ್ ಅನುಷ್ಠಾನ 2022

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್​ನಲ್ಲಿರುವ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡಿದ್ದಾರೆ.

CM Basavaraj Bommai on budget 2022
ಸಿಎಂ ಬಸವರಾಜ ಬೊಮ್ಮಾಯಿ ಮೊದಲ ಬಜೆಟ್
author img

By

Published : Mar 17, 2022, 8:31 PM IST

ಬೆಂಗಳೂರು: ತಮ್ಮ ಚೊಚ್ಚಲ ಬಜೆಟ್​ನಲ್ಲಿ ಘೋಷಿಸಿರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

2022-23 ನೇ ಸಾಲಿನ ಆರ್ಥಿಕ ವರ್ಷ ಆರಂಭದ ಮೊದಲ ದಿನವಾಗಿರುವ ಏಪ್ರಿಲ್ 1 ರಿಂದಲೇ ಬಜೆಟ್​ನಲ್ಲಿ ಘೋಷಿತ ಯೋಜನೆಗಳ ಜಾರಿಗೆ ಸರ್ಕಾರಿ ಆದೇಶಗಳನ್ನು ಹೊರಡಿಸುವಂತೆ ಸರ್ಕಾರದ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಖುದ್ದು ಎಲ್ಲ ಹಿರಿಯ ಅಧಿಕಾರಿಗಳಿಗೆ ಸಿಎಂ ಪತ್ರ ಬರೆದಿದ್ದಾರೆ. ಆಯವ್ಯಯದಲ್ಲಿ ಘೋಷಿಸಿರುವ ಯೋಜನೆಯ ರೂಪುರೇಷೆಗಳ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ, ಆರ್ಥಿಕ ಇಲಾಖೆಯ ಆಯವ್ಯಯ ಸಲಹೆಯಂತೆ ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಆದೇಶಗಳನ್ನು ಹೊರಡಿಸುವಂತೆ ಸೂಚಿಸಿದ್ದಾರೆ.

ಅಲ್ಲದೆ, ಈ ಯೋಜನೆಗಳನ್ನು ಅತಿ ಶೀಘ್ರವಾಗಿ ಜಾರಿಗೊಳಿಸುವಂತೆ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳಿಗೆ ಸಿಎಂ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ಮೂರು ಹಾವುಗಳ ಜೊತೆ ಚೆಲ್ಲಾಟ: ಸಾವಿರಾರು ಉರಗಗಳ ರಕ್ಷಕ ಎಡವಟ್ಟಿನಿಂದ ಆಸ್ಪತ್ರೆ ಸೇರಿದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.