ಬೆಂಗಳೂರು : ವಿಜಯ್ ದಿವಸ್ ಹಿನ್ನೆಲೆ ಬಿಬಿಎಂಪಿ ಹಾಗೂ ದಿ ಅಗ್ಲಿ ಇಂಡಿಯನ್ ಸಹಯೋಗದಲ್ಲಿ ನಡೆದ ಸ್ವಚ್ಛ ಬೀದಿ ಅಭಿಯಾನದ 10 ಕಿ.ಮೀ ಓಟದಲ್ಲಿ ಯಾವುದೇ ಕಸದ ರಾಶಿ ಕಂಡು ಬರದೆ ಎಲ್ಲಾ ಬೀದಿಗಳು ಸ್ವಚ್ಛವಾಗಿರುವುದಕ್ಕೆ ಶಿವಾಜಿನಗರ ಘನತ್ಯಾಜ್ಯ ವಿಭಾಗದ ತಂಡಕ್ಕೆ ಸ್ವಚ್ಛ ಬೀದಿ ಎಂದು ಪ್ರಮಾಣೀಕರಿಸಿದ ಪ್ರಮಾಣಪತ್ರ ಹಾಗೂ ಟ್ರೋಪಿಯನ್ನು ನೀಡಲಾಯಿತು.
ವಿಧಾನಸೌಧದ ಪೂರ್ವದ್ವಾರದಿಂದ ಪ್ರಾರಂಭವಾಗಿ ರಾಜಭವನ-ರಾಷ್ಟ್ರೀಯ ಮಿಲಿಟರಿ ಸ್ಮಾರಕ-ಇನ್‌ಫೆಂಟ್ರಿ ರಸ್ತೆ-ಕಬ್ಬನ್ ರಸ್ತೆ–ಮಣಿಪಾಲ್ ಸೆಂಟರ್–ಡಿಕನ್ಸನ್ ರಸ್ತೆ - ಸೇನಾ ಸಾರ್ವಜನಿಕ ಶಾಲೆ – ಚಿನ್ನಸ್ವಾಮಿ ಕ್ರೀಡಾಂಗಣದ ಮೂಲಕ ವಿಧಾನಸೌಧದ ಪೂರ್ವದ್ವಾರದವರೆಗೆ 10 ಕಿ.ಮೀ.ನಷ್ಟು ಪ್ರದೇಶದಲ್ಲಿ ಕಸವನ್ನು ಹುಡುಕುವ ಕೆಲಸ ಮಾಡಲಾಯಿತು. ಆದ್ರೆ, ಈ ವೇಳೆ ಎಲ್ಲಾ ಬೀದಿಗಳು ಸ್ವಚ್ಛವಾಗಿದ್ದವು.
10 ಕಿ.ಮೀ ಓಟದಲ್ಲಿ 50ಕ್ಕೂ ಹೆಚ್ಚು ಬಿಬಿಎಂಪಿ ಮಾರ್ಷಲ್‌ಗಳು ಮತ್ತು ನಾಗರಿಕರ ತಂಡಗಳು ಭಾಗಿಯಾಗಿದ್ದವು. ಮುಂದಿನ ತಿಂಗಳಲ್ಲಿ ನಗರದ 10 ಪ್ರದೇಶಗಳಲ್ಲಿ 10ಕಿ.ಮೀ ರನ್ ಮೂಲಕ 100 ಕಿ.ಮೀ.ನಷ್ಟು ಬೀದಿಗಳನ್ನು ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಭಿಯಾನದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮೊಹ್ಮದ್ ಜಾವೆದ್, ಕಿರಿಯ ಆರೋಗ್ಯಾಧಿಕಾರಿ, ಮಾರ್ಷಲ್‌ಗಳ ತಂಡ ಹಾಗೂ ನಾಗರಿಕರು ಪಾಲ್ಗೊಂಡಿದ್ದರು.