ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸದ್ಯ ಪುಂಡ ಯುವಕರು ಖಾಲಿ ರಸ್ತೆಗಳಲ್ಲಿ ವ್ಹೀಲಿಂಗ್, ಜಾಲಿ ರೈಡ್ ಮಾಡುತ್ತಿದ್ದು ಪ್ರಾಣಕ್ಕೆ ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ. ಅಂತಹ ಕಿಡಿಗೇಡಿಗಳ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡುವಂತೆ ಬೆಂಗಳೂರು ಸಿಟಿ ಪೊಲೀಸರಿಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್ ಮೂಲಕ ಸೂಚನೆ ನೀಡಿದ್ದಾರೆ.
-
ಪದೇ ಪದೇ ಇಂತಹ ಕೃತ್ಯಗಳಲ್ಲಿ ತೊಡಗುವವರನ್ನು ಕಾರಾಗೃಹ ಶಿಕ್ಷೆಗೆ ಒಳಪಡಿಸುವುದಲ್ಲದೇ, ದಂಡದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಇದಲ್ಲದೇ ವಾಹನಗಳ ಸೈಲೆನ್ಸರ್ ಇತ್ಯಾದಿಗಳನ್ನು ಮಾರ್ಪಾಟು ಮಾಡುವ ಮೆಕ್ಯಾನಿಕ್ ಹಾಗೂ ಗ್ಯಾರೇಜ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 2/2
— Kamal Pant, IPS (@CPBlr) October 28, 2020 " class="align-text-top noRightClick twitterSection" data="
">ಪದೇ ಪದೇ ಇಂತಹ ಕೃತ್ಯಗಳಲ್ಲಿ ತೊಡಗುವವರನ್ನು ಕಾರಾಗೃಹ ಶಿಕ್ಷೆಗೆ ಒಳಪಡಿಸುವುದಲ್ಲದೇ, ದಂಡದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಇದಲ್ಲದೇ ವಾಹನಗಳ ಸೈಲೆನ್ಸರ್ ಇತ್ಯಾದಿಗಳನ್ನು ಮಾರ್ಪಾಟು ಮಾಡುವ ಮೆಕ್ಯಾನಿಕ್ ಹಾಗೂ ಗ್ಯಾರೇಜ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 2/2
— Kamal Pant, IPS (@CPBlr) October 28, 2020ಪದೇ ಪದೇ ಇಂತಹ ಕೃತ್ಯಗಳಲ್ಲಿ ತೊಡಗುವವರನ್ನು ಕಾರಾಗೃಹ ಶಿಕ್ಷೆಗೆ ಒಳಪಡಿಸುವುದಲ್ಲದೇ, ದಂಡದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಇದಲ್ಲದೇ ವಾಹನಗಳ ಸೈಲೆನ್ಸರ್ ಇತ್ಯಾದಿಗಳನ್ನು ಮಾರ್ಪಾಟು ಮಾಡುವ ಮೆಕ್ಯಾನಿಕ್ ಹಾಗೂ ಗ್ಯಾರೇಜ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 2/2
— Kamal Pant, IPS (@CPBlr) October 28, 2020
ದ್ವಿಚಕ್ರ ವಾಹನಗಳಲ್ಲಿ ಡ್ರ್ಯಾಗ್ ರೇಸ್/ ವ್ಹೀಲಿಂಗ್ ನಂತಹ ಅಪಾಯಕಾರಿ ಸ್ಟಂಟ್ ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಸಿಆರ್ಪಿಸಿ ಕಾಯ್ದೆಯಡಿ ಅಧಿಕ ಮೊತ್ತದ ದಂಡದೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ಎಷ್ಟೇ ಪ್ರಭಾವಿಗಲಾಗಿದ್ದರೂ ಮೋಜು, ಮಸ್ತಿಗಾಗಿ ವ್ಹೀಲಿಂಗ್ ಮಾಡಿದರೆ ಅಂತವರ ವಿರುದ್ಧ ಸಿಆರ್ಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ಹಾಗೆಯೇ ವ್ಹೀಲಿಂಗ್ ಮಾಡಲು ಸೈಲೆನ್ಸರ್ ಮಾರ್ಪಾಡು ಮಾಡುವ ಗ್ಯಾರೇಜ್ ಮಾಲೀಕರ ಮೇಲೆ ಕ್ರಿಮಿನಲ್ ದೂರು ದಾಖಲಿಸಿ ಎಂದು ನಗರ ಪೊಲೀಸರಿಗೆ ಕಮಲ್ ಪಂತ್ ಸೂಚನೆ ನೀಡಿದ್ದಾರೆ.