ಬೆಂಗಳೂರು : ನಗರದ ಕ್ಯಾಸಿನೋಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಇಂದಿರಾನಗರ, ಸಂಪಿಗೆಹಳ್ಳಿ, ಹಲಸೂರಿನಲ್ಲಿರು ನಾಲ್ಕು ಕ್ಯಾಸಿನೋಗಳ ಮೇಲೆ ಸಿಸಿಬಿ ಪೊಲೀಸರು ರೇಡ್ ಮಾಡಿದ್ದಾರೆ.
ಸಿಸಿಬಿ ಡಿಸಿಪಿ ಬಸವರಾಜ್ ಅಂಗಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿಯಲ್ಲಿ ಕಂತೆ ಕಂತೆ ಹಣ ಹಾಗೂ 104ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ವಾರಾಂತ್ಯದ ಹಿನ್ನೆಲೆಯಲ್ಲಿ ಕ್ಯಾಸಿನೋಗೆ ಪಕ್ಕದ ರಾಜ್ಯದಿಂದ ಪಂಟರ್ಗಳು ಆಗಮಿಸಿ, ಜೂಜಿಗೆ ಇಳಿದು ಸಿಕ್ಕಿಬಿದ್ದಿದ್ದಾರೆ.