ETV Bharat / city

ಸಿಪಿಡಬ್ಲ್ಯೂಡಿ ಜಿಎಸ್‌ಟಿ ಅಧಿಕಾರಿಗಳ ಬಂಧನ: ಹೈಕೋರ್ಟ್​​​ಗೆ ಹಾಜರುಪಡಿಸಿದ ಸಿಬಿಐ - ಲಂಚ ಸ್ವೀಕಾರ ಸಿಪಿಡಬ್ಲ್ಯೂಡಿ ಜಿಎಸ್‌ಟಿ ಅಧಿಕಾರಿಗಳ ಬಂಧನ

ಹೈದರಾಬಾದ್‌ನ ಸಿಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಸಾಯಿ ಕೊಮರೇಶ್ವರ ವಿರುದ್ಧ ಲಂಚ ಸ್ವೀಕಾರ ಪ್ರಕರಣ ದಾಖಲಾಗಿತ್ತು. ಆರೋಪಿ, ಸಿಪಿಡಬ್ಲ್ಯೂಡಿಯ ಬಾಕಿ ಬಿಲ್‌ಗಳನ್ನು ಬಿಡುಗಡೆ ಮಾಡಲು 60 ಸಾವಿರ(20 ಲಕ್ಷ ರೂ. ಬಿಲ್‌ನ ಶೇ.3ರಷ್ಟು ಲಂಚ) ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ದೂರುದಾರರಿಂದ 45 ಸಾವಿರ ರೂ ಪಡೆದಿದ್ದರು. ಎರಡನೇ ಕಂತಿನಲ್ಲಿ ಉಳಿದ 15 ಸಾವಿರ ರೂ. ಲಂಚದ ಮೊತ್ತವನ್ನು ದೂರುದಾರರಿಂದ ಪಡೆಯುವಾಗ ಸಿಬಿಐ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

ccb-arrested-hyderabad-senior-cpwd-gst-officers
ಸಿಪಿಡಬ್ಲ್ಯೂಡಿ ಜಿಎಸ್‌ಟಿ ಅಧಿಕಾರಿಗಳ ಬಂಧನ
author img

By

Published : Mar 30, 2021, 9:28 PM IST

ಬೆಂಗಳೂರು: ಹೈದರಾಬಾದ್‌ನ ಸಿಪಿಡಬ್ಲ್ಯೂಡಿ ಹಾಗೂ ಉತ್ತರ ಕನ್ನಡ(ಕಾರವಾರ)ದ ಹೊನ್ನಾವರ ಶ್ರೇಣಿಯ ಕೇಂದ್ರ ಅಬಕಾರಿ ಮತ್ತು ತೆರಿಗೆ (ಜಿಎಸ್‌ಟಿ) ವಿಭಾಗದ ಪ್ರತ್ಯೇಕ ಲಂಚ ಸ್ವೀಕಾರ ಪ್ರಕರಣದಲ್ಲಿ (ಸಿಬಿಐ) ಕೇಂದ್ರ ತನಿಖಾ ದಳದ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಿಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ (ಎಲೆಕ್ಟ್ರಿಕಲ್) ಪಿ.ಸಾಯಿ ಕೊಮರೇಶ್ವರ, ಹೊನ್ನಾವರ ಶ್ರೇಣಿಯ ಕೇಂದ್ರ ಅಬಕಾರಿ ಮತ್ತು ಕೇಂದ್ರ ತೆರಿಗೆ (ಜಿಎಸ್‌ಟಿ) ಸೂಪರ್‌ಡೆಂಟ್ ಜಿತೇಂದ್ರ ಕೆ.ದಾಗೂರ್ ಬಂಧಿತ ಆರೋಪಿಗಳು.

ಪ್ರಕರಣ ಸಂಬಂಧ ಹೈದರಾಬಾದ್‌ನ ಸಿಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಸಾಯಿ ಕೊಮರೇಶ್ವರ ವಿರುದ್ಧ ಲಂಚ ಸ್ವೀಕಾರ ಪ್ರಕರಣ ದಾಖಲಾಗಿತ್ತು. ಆರೋಪಿ, ಸಿಪಿಡಬ್ಲ್ಯೂಡಿಯ ಬಾಕಿ ಬಿಲ್‌ಗಳನ್ನು ಬಿಡುಗಡೆ ಮಾಡಲು 60 ಸಾವಿರ(20 ಲಕ್ಷ ರೂ. ಬಿಲ್‌ನ ಶೇ.3ರಷ್ಟು ಲಂಚ) ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ದೂರುದಾರರಿಂದ 45 ಸಾವಿರ ರೂ ಪಡೆದಿದ್ದರು. ಎರಡನೇ ಕಂತಿನಲ್ಲಿ ಉಳಿದ 15 ಸಾವಿರ ರೂ. ಲಂಚದ ಮೊತ್ತವನ್ನು ದೂರುದಾರರಿಂದ ಪಡೆಯುವಾಗ ಸಿಬಿಐ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಸಿಬಿಐ ದಿಢೀರ್​ ದಾಳಿ, ಅಪಾರ ಪ್ರಮಾಣದ ಸ್ವತ್ತು ವಶಕ್ಕೆ

ಆರೋಪಿಯ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿ, 1.34 ಲಕ್ಷ ರೂ., 27 ದಾಖಲೆಗಳು, 30.50 ಲಕ್ಷ ರೂ. ಮೌಲ್ಯದ ವಸ್ತುಗಳು ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಇತರೆ ದಾಖಲೆ ವಶಕ್ಕೆ ಪಡೆಯಲಾಗಿದೆ. ಬಳಿಕ, ಆರೋಪಿಯನ್ನು ಹೈದರಾಬಾದ್‌ನ ಸಿಬಿಐ ವಿಶೇಷ ಪ್ರಕರಣಗಳ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

ಪ್ರಕರಣದ ಆರೋಪಿ ಜಿತೇಂದ್ರ ಕೆ.ದಾಗೂರ್, ತೆರಿಗೆ ರಿಟರ್ನ್‌ನಲ್ಲಿ ಸೇವಾ ತೆರಿಗೆ ಮತ್ತು ದಂಡವನ್ನು ಮನ್ನಾ ಮಾಡಲು ದೂರುದಾರರಿಂದ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಣವನ್ನು ಎರಡು ಕಂತುಗಳಲ್ಲಿ ಪಡೆಯಲು ಒಪ್ಪಂದ ಮಾಡಿಕೊಂಡಿದ್ದನು. ಈ ಸಂಬಂಧ ನಿಖರ ಮಾಹಿತಿ ಪಡೆದ ಸಿಬಿಐ ಅಧಿಕಾರಿಗಳು, ಮೊದಲ ಕಂತಿನ 25 ಸಾವಿರ ರೂ. ಪಡೆಯುವಾಗ ದಾಳಿ ನಡೆಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಬಳಿಕ ಆರೋಪಿಯ ಹೊನ್ನಾವರದಲ್ಲಿನ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿ ಅಗತ್ಯ ಮಾಹಿತಿ ಕಲೆಹಾಕಿದ್ದಾರೆ. ನಂತರ, ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.