ETV Bharat / city

ನಾಳೆಯಿಂದ 18+ ವಯಸ್ಸಿನವರಿಗೆ ಮುನ್ನೆಚ್ಚರಿಕಾ ಡೋಸ್: ಸಚಿವ ಸುಧಾಕರ್

ನಾಳೆಯಿಂದ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಡೋಸ್ ಪಡೆಯಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

minister sudhakar
ಸಚಿವ ಡಾ.ಕೆ. ಸುಧಾಕರ್
author img

By

Published : Apr 9, 2022, 12:41 PM IST

ಬೆಂಗಳೂರು: ಕೋವಿಡ್ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ವೇಗ ನೀಡಲು18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಡೋಸ್ ನೀಡಲು ಸರ್ಕಾರ ಮುಂದಾಗುತ್ತಿದೆ. ಏಪ್ರಿಲ್ 10ರಿಂದ (ನಾಳೆ) ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 18 ವರ್ಷ ಮೇಲ್ಪಟ್ಟವರು ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣವಾಗಿದ್ದಲ್ಲಿ, ಈ ಡೋಸ್ ಪಡೆಯಬಹುದು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ರೋಗ ಪೂರ್ವ ನಿಯಂತ್ರಣ ಕ್ರಮಗಳಿಗೆ ಹೆಚ್ಚು ಒತ್ತು ನೀಡಿದೆ. ಇದೇ ರೀತಿ ಕೋವಿಡ್ ಲಸಿಕಾಕರಣಕ್ಕೂ ವೇಗ ನೀಡಿದ್ದು, ದೇಶದಲ್ಲಿ ಈವರೆಗೆ 185 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಲಸಿಕಾಕರಣವನ್ನು ಚುರುಕುಗೊಳಿಸಿರುವುದರಿಂದ ಈವರೆಗೆ 10.47 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದರ ಜೊತೆಗೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60+ ವಯಸ್ಸಿನ ನಾಗರಿಕರಿಗೆ ಮುನ್ನೆಚ್ಚರಿಕೆಯ ಡೋಸ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಲಸಿಕಾಕರಣ:

  • 12-14 ವಯೋಮಾನದವರಿಗೆ 13,27,985 ಮೊದಲ ಡೋಸ್ (65.6%).
  • 15-17 ವಯೋಮಾನದವರಿಗೆ 25,09,276 ಮೊದಲ ಡೋಸ್ (79%), 20,48,576 ಎರಡನೇ ಡೋಸ್ (64.5%) ನೀಡಲಾಗಿದೆ.
  • ಈವರೆಗೆ 15+ ವಯೋಮಾನದವರಿಗೆ 5,23,05,424 ಮೊದಲ ಡೋಸ್ (100.4%) ಹಾಗೂ 4,97,08,909 ಎರಡನೇ ಡೋಸ್ (95.4%) ನೀಡಲಾಗಿದೆ.
  • 18+ ವಯೋಮಾನದವರಿಗೆ 4,97,96,148 ಮೊದಲ ಡೋಸ್ (101.8%) ಹಾಗೂ 4,76,60,333 ಎರಡನೇ ಡೋಸ್ (97.4%) ನೀಡಲಾಗಿದೆ.
  • 14,24,433 (57.6%) ಮುನ್ನೆಚ್ಚರಿಕೆ ಲಸಿಕೆ ಡೋಸ್ ನೀಡಲಾಗಿದೆ.

ಇದನ್ನೂ ಓದಿ: ಕೆಎಂಎಫ್ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡವೇ ಮಾಯ..!

ಈ ಮೂಲಕ ರಾಜ್ಯವು ಲಸಿಕಾಕರಣದಲ್ಲಿ ಶ್ಲಾಘನೀಯ ಪ್ರಗತಿ ಸಾಧಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಮಾಡಿಕೊಟ್ಟ ಈ ಅವಕಾಶವನ್ನು ಎಲ್ಲರೂ ತಪ್ಪದೇ ಬಳಸಿಕೊಂಡು ಮುನ್ನೆಚ್ಚರಿಕೆ ಲಸಿಕೆ ಪಡೆಯಬೇಕು. ಎರಡು ಡೋಸ್‍ಗಳಂತೆ ಮುನ್ನೆಚ್ಚರಿಕಾ ಡೋಸ್ ಕೂಡ ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಜೊತೆಗೆ ಕೋವಿಡ್ ಸುರಕ್ಷತಾ ಕ್ರಮಗಳನ್ನೂ ಪಾಲಿಸಬೇಕು ಎಂದು ಸಚಿವರು ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.