ETV Bharat / city

ನಾನವನಲ್ಲ..ನಾನವನಲ್ಲ ಎಂದಿದ್ದವ ಮಾಡಿದ್ದೇನು ಗೊತ್ತಾ? ಅತ್ಯಾಚಾರ ಆರೋಪಿಯ ಸೆಲ್ಫಿ ಕಹಾನಿ! - ಡ್ರಾಪ್ ಪಾಯಿಂಟ್‌ ಬಳಿ ಅತ್ಯಾಚಾರವೆಸೆಗಿದ ಡ್ರೈವರ್

ಯುವತಿ ಮೇಲೆ‌ ಅತ್ಯಾಚಾರವೆಸಗಿದ ಆರೋಪದಡಿ ಕ್ಯಾಬ್ ಚಾಲಕನನ್ನು ಬಂಧಿಸಿ ಆರೋಪಿಗೆ ಖಾಕಿ ಫುಲ್ ಡ್ರಿಲ್ ಮಾಡುತ್ತಿದೆ.

bengaluru
bengaluru
author img

By

Published : Sep 23, 2021, 11:20 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಚಲನ ಸೃಷ್ಟಿಸಿದ್ದ ರೇಪ್ ಆರೋಪಿ ಕ್ಯಾಬ್ ಡ್ರೈವರ್‌ಗೆ ಖಾಕಿ ಫುಲ್ ಡ್ರಿಲ್ ಮಾಡುತ್ತಿದೆ. ಆದರೆ, ಆರೋಪಿ ಮಾತ್ರ ನಾನೇನು ಮಾಡಿಲ್ಲ, ನಾನು ಅಂಥವನಲ್ಲ ಅಂತಾ ಹೇಳ್ತಿದ್ದಾನೆ. ಆದ್ರೀಗ ಯುವತಿ ಮೆಡಿಕಲ್ ರಿಪೋರ್ಟ್ ಮೇಲೆ ಕೇಸ್ ನಿಂತಿದ್ದು ಕುತೂಹಲ ಕೆರಳಿಸಿದೆ.

ಸ್ನೇಹಿತೆ ಮನೆಗೆ ಹೋಗಿ ತಡರಾತ್ರಿ ಮನೆಗೆ ಹೊರಟಿದ್ದ ಯುವತಿಯನ್ನು ಕ್ಯಾಬ್ ಚಾಲಕನೊಬ್ಬ ಪಿಶಾಚಿಯಂತೆ ಕಾಡಿದ್ದಾನೆ. ಒಂಟಿ ಹೆಣ್ಣನ್ನು ಸೇಫಾಗಿ ಮನೆಗೆ ತಲುಪಿಸಬೇಕಿದ್ದ ಚಾಲಕ ಕಿರಾತಕನಾಗಿ ವರ್ತಿಸಿದ್ದಾನೆ ಎಂದು ಕ್ಯಾಬ್ ಡ್ರೈವರ್ ವಿರುದ್ಧ ಯುವತಿ ಕೊಟ್ಟ ದೂರು ರಾಜಧಾನಿಯಲ್ಲಿ ಸಂಚಲನ ಸೃಷ್ಟಿಸಿದೆ.

ನಿನ್ನೆ ತಡರಾತ್ರಿ ಹೆಚ್‌ಎಸ್‌ಆರ್‌ ಲೇಔಟ್‌ನಿಂದ ಮುರುಗೇಶ್ ಪಾಳ್ಯಕ್ಕೆ ತೆರಳಲು ಯುವತಿ ಉಬರ್ ಕ್ಯಾಬ್ ಬುಕ್ ಮಾಡಿದ್ದಳು. ಬುಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ದೇವರಾಜಲು ಹೆಸರಿನ ಕ್ಯಾಬ್ ಡ್ರೈವರ್ ಪಿಕಪ್ ಪಾಯಿಂಟ್‌ಗೆ ಬಂದು ಯುವತಿಯನ್ನ ಕರೆದೊಯ್ದಿದ್ದಾನೆ.

ಡ್ರಾಪ್ ಪಾಯಿಂಟ್‌ ಬಳಿ ಅತ್ಯಾಚಾರವೆಸೆಗಿದ ಡ್ರೈವರ್:

ಹೆಚ್‌ಎಸ್‌ಆರ್‌ ಲೇಔಟ್‌ನಿಂದ ಹೊರಟ ಕ್ಯಾಬ್ ಕೇವಲ 20 ನಿಮಿಷದಲ್ಲಿ ಮುರುಗೇಶ್ ಪಾಳ್ಯದಲ್ಲಿರುವ ಯುವತಿ ಮನೆ ಬಳಿಗೆ ಬಂದಿದೆ. ಆಗ ನಿದ್ದೆ ಮಂಪರಿನಲ್ಲಿದ ಯುವತಿಯನ್ನ ಎದ್ದೇಳಿಸಲು ಕ್ಯಾಬ್ ಡ್ರೈವರ್ ಹಿಂದಿನ ಡೋರ್ ತೆಗೆದಿದ್ದಾನೆ. ಈ ವೇಳೆ ಯುವತಿ ಮೇಲೆರಗಿ ಅತ್ಯಾಚಾರವೆಸೆಗಿ ಅಟ್ಟಹಾಸ ಮೆರೆದಿದ್ದಾನೆ ಎನ್ನಲಾಗಿದೆ. ಆಗ ಎಚ್ಚೆತ್ತ ಯುವತಿ ಕಿರುಚಾಡಿದ್ದಾಳೆ. ನಂತರ ಗಾಬರಿಯಿಂದ ಕಾರಿನಿಂದ ಇಳಿದು ತನ್ನ ಮನೆಯತ್ತ ದೌಡಾಯಿಸಿದ್ದಾಳೆ ಎನ್ನಲಾಗಿದೆ.

ಕಾಮುಕ ಡ್ರೈವರ್‌ನಿಂದ ತಪ್ಪಿಸಿಕೊಂಡು ಮನೆಗೆ ಬಂದ ಯುವತಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡಿದ್ದಾಳೆ. ಬಳಿಕ 112ಕ್ಕೆ ಕರೆ ಮಾಡಿ ನಡೆದ ಘಟನೆಯನ್ನೆಲ್ಲಾ ಪೊಲೀಸರಿಗೆ ವಿವರಿಸಿದ್ದಾಳೆ. ಕೂಡಲೇ ಯುವತಿ ಮನೆಗೆ ಬಂದ ಪೊಲೀಸರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ನಂತರ ಮಹಿಳಾ ಅಧಿಕಾರಿ ಕರೆಯಿಸಿ ಯುವತಿಯನ್ನ ಜೀವನ್ ಭೀಮಾನಗರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಯುವತಿಯಿಂದ ದೂರು ಬರೆಸಿಕೊಂಡು ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮನೆಗೆ ಕಳುಹಿಸಿದ್ದಾರೆ.

ಕ್ಯಾಬ್​ ಡ್ರೈವರ್​ ವಿರುದ್ಧ ದೂರು

ಯುವತಿಯಿಂದ ದೂರು ಪಡೆದ ಪೊಲೀಸರು ಆರೋಪಿ ಕ್ಯಾಬ್ ಡ್ರೈವರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ನಂತರ 3 ತಂಡಗಳನ್ನು ರಚಿಸಿ ಆರೋಪಿಗಾಗಿ ಬಲೆ ಬೀಸಿದ್ದರು. ಆದರೆ, ಆರೋಪಿಯ ಮೊಬೈಲ್ ಯುವತಿ ಬಳಿಯೇ ಇತ್ತು. ಯಾಕಂದರೆ, ಘಟನೆ ನಡೆದ ಬಳಿಕ ಗಾಬರಿಗೊಂಡಿದ್ದ ಯುವತಿ, ಸೀಟ್‌ ಮೇಲಿದ್ದ ತನ್ನ ವಸ್ತುಗಳ ಜೊತೆಗೆ ಕ್ಯಾಬ್ ಡ್ರೈವರ್ ಮೊಬೈಲ್ ಅನ್ನು ಸಹ ತನ್ನ ಬ್ಯಾಗ್‌ನಲ್ಲಿ ಹಾಕಿಕೊಂಡು ಬಂದಿದ್ದಳು.

ಆರೋಪಿ ಪತ್ತೆ ಹಚ್ಚಿದ್ದು ಹೇಗೆ?

ಹಾಗಾಗಿ ಆರೋಪಿ ಪತ್ತೆ ಹಚ್ಚೋದು ಪೊಲೀಸರಿಗೆ ಕಷ್ಟವಾಗಿತ್ತು. ಆದರೆ, ಕೂಡಲೇ ಖಾಕಿ ಟೀಂ ಕ್ಯಾಬ್ ನಂಬರ್ ಪಡೆದು, ಉಬರ್ ಕಂಪನಿಯ ಸಹಾಯ ಪಡೆದು ಆರೋಪಿ ಮನೆಯ ವಿಳಾಸ ಪತ್ತೆ ಹಚ್ಚಿದೆ. ಬೆಂಗಳೂರು ಹೊರವಲಯದ ಹಳ್ಳಿಯಲ್ಲಿ ಕ್ಯಾಬ್ ಡ್ರೈವರ್ ದೇವರಾಜ್ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿ ಹೆಡೆಮುರಿ ಕಟ್ಟಿದ್ದಾರೆ. ಕಾರಿನ ಜೊತೆಗೆ ಆರೋಪಿಯನ್ನ ವಶಕ್ಕೆ ಪಡೆದು ಠಾಣೆಗೆ ಕರೆತಂದು ಫುಲ್ ಡ್ರಿಲ್ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಅತ್ಯಾಚಾರ ಆರೋಪಿ ಅರೆಸ್ಟ್​.. ವಿಚಾರಣೆ ವೇಳೆ ಕ್ಯಾಬ್​ ಡ್ರೈವರ್​ ಹೇಳಿದ್ದೇನು?

ವಿಚಾರಣೆ ವೇಳೆ ಆರೋಪಿ ತನ್ನದೇನು ತಪ್ಪಿಲ್ಲ, ನಾನೇನು ಮಾಡಿಲ್ಲ ಅಂತಾ ವಾದಿಸುತ್ತಿದ್ದ. ಆದರೆ ಪೊಲೀಸರು ತೀವ್ರ ವಿಚಾರಣೆಗೆ ಸತ್ಯ ಒಪ್ಪಿಕೊಂಡಿದ್ದಾನೆ. ತಾನು ಮಾಡಿದ ನೀಚ ಕೆಲಸದ ಬಗ್ಗೆ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಆತ್ಯಾಚಾರ ಬಳಿಕ ಕ್ಷಮೆ ಕೇಳಿದ್ದನಂತೆ ಕ್ಯಾಬ್ ಡ್ರೈವರ್:

ಕ್ಯಾಬ್ ಯುವತಿ ಮನೆ ಹತ್ತಿರ ಬರ್ತಿದ್ದಂತೆ ಡ್ರೈವರ್ ನೀಚ ಕೃತ್ಯ ಎಸಗಿದ್ದ. ಈ ವೇಳೆ ಕಾರಿನಿಂದ ತಪ್ಪಿಸಿಕೊಂಡು ಹೊರಬಂದ ಯುವತಿ ಬಳಿ ಕ್ಯಾಬ್ ಚಾಲಕ ಕ್ಷಮೆ ಕೇಳಿದ್ದನಂತೆ. ಅತ್ಯಾಚಾರ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದ ಕ್ಯಾಬ್ ಡ್ರೈವರ್, ಐದು ನಿಮಿಷಗಳ ಬಳಿಕ ಮತ್ತದ್ದೇ ಜಾಗಕ್ಕೆ ಬಂದಿದ್ದಾನೆ. ಯಾಕಂದರೆ ಉಬರ್ ಟ್ರಿಪ್ ಕಂಪ್ಲೀಟ್ ಆಗಿರಲಿಲ್ಲ. ಹಾಗಾಗಿ ಆತ ಮೊಬೈಲ್‌ಗಾಗಿ ಕಾರಿನಲ್ಲಿ ತಡಕಾಡಿದ್ದಾನೆ. ಕೊನೆಗೆ ಘಟನೆ ನಡೆದ ಸ್ಥಳದಲ್ಲೇ ಇರಬಹುದು ಎಂದು ಬಂದಿದ್ದಾನೆ. ಆದರೆ ಯುವತಿ ಗಾಬರಿಯಲ್ಲಿ ಹಿಂದಿನ ಸೀಟಿನಲ್ಲಿದ್ದ ಈತನ ಮೊಬೈಲ್​ ಅನ್ನು ಸಹ ತೆಗೆದುಕೊಂಡು ಹೋಗಿದ್ದಳು.

ಕ್ಯಾಬ್ ಡ್ರೈವರ್‌ ಮೊಬೈಲ್‌ನಲ್ಲಿತ್ತು ಯುವತಿಯೊಂದಿಗಿನ ಸೆಲ್ಫಿ:

ಅಂದಹಾಗೆ ಕ್ಯಾಬ್ ಡ್ರಾಪ್ ಪಾಯಿಂಟ್‌ಗೆ ಬರ್ತಿದ್ದಂತೆ ಯುವತಿಯನ್ನ ಎದ್ದೇಳಿಸಲು ಹಿಂಬದಿ ಡೋರ್ ತೆಗೆದಿದ್ದಾನೆ. ಈ ವೇಳೆ ಕ್ಯಾಬ್ ಡ್ರೈವರ್ ಯುವತಿಯೊಂದಿಗೆ ಕೆಲ ಸೆಲ್ಫಿಗಳನ್ನ ತೆಗೆದುಕೊಂಡಿರುವುದು ಮೊಬೈಲ್ ಪರಿಶೀಲನೆ ವೇಳೆ ಪತ್ತೆಯಾಗಿದೆ. ದೂರಿನ ಬಳಿಕ ಯುವತಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಜೊತೆಗೆ ಆರೋಪಿ ಬಟ್ಟೆಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು. ಇಂದು ಮೆಡಿಕಲ್ ರಿಪೋರ್ಟ್ ಬರಲಿದ್ದು, ಸತ್ಯ ಬಯಲಾಗಲಿದೆ.

ಆರೋಪಿ ಆಂಧ್ರ ಮೂಲದವನು

ಆರೋಪಿ ದೇವರಾಜಲು ಆಂಧ್ರಪ್ರದೇಶ ಮೂಲದವನಾಗಿದ್ದು, ಎರಡು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಕ್ಯಾಬ್ ಚಲಾಯಿಸ್ತಿದ್ದನಂತೆ. ಸದ್ಯ ಕ್ಯಾಬ್ ಡ್ರೈವರ್ ದೇವರಾಜ್ ವಿರುದ್ಧ ರೇಪ್ ಕೇಸ್ ದಾಖಲಿಸಿರುವ ಪೊಲೀಸರು, ಇಂದು ಕೋರ್ಟ್‌ಗೆ ಹಾಜರುಪಡಿಸಿಲಿದ್ದಾರೆ. ವಿಚಾರಣೆಗಾಗಿ ಮತ್ತೆ ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ. ಅಷ್ಟೇ ಅಲ್ಲದೆ ಆರೋಪಿ ಈ ಹಿಂದೆಯೂ ಇದೇ ರೀತಿ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಹೀಗಾಗಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.