ETV Bharat / city

ಲಾಕ್​ಡೌನ್ ದಂಡ : ನಿಯಮ ಉಲ್ಲಂಘಿಸಿದವರಿಂದ ಸಂಗ್ರಹವಾಯ್ತು ಕೋಟಿ ಕೋಟಿ ಹಣ.. - Corona rule violation cases

ಕೋವಿಡ್​ ಭೀತಿ ಮರೆತು ಲಾಕ್​ಡೌನ್​ ಸಮಯದಲ್ಲಿ ಅನಗತ್ಯವಾಗಿ ತಿರುಗಾಡಿದ ಹಾಗೂ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದವರಿಂದ ನ್ಯಾಯಾಲಯದ ಆದೇಶ ಮೆರೆಗೆ ವಿವಿಧ ಪ್ರಕರಣಗಳಿಂದ ಬರೊಬ್ಬರಿ 3,99,02,927 ರೂ. ದಂಡ ವಸೂಲಿ ಮಾಡಲಾಗಿದೆ. ದ್ವಿಚಕ್ರ ವಾಹನಗಳು 34,903, 1888, ಆಟೋಗಳು ಹಾಗೂ 2263 ಕಾರುಗಳು ಸೇರಿದಂತೆ ಒಟ್ಟು 39034 ವಾಹನಗಳನ್ನು ಸೀಜ್ ಮಾಡಲಾಗಿದೆ‌..

ಲಾಕ್​ಡೌನ್ ದಂಡ
ಲಾಕ್​ಡೌನ್ ದಂಡ
author img

By

Published : Jun 1, 2021, 7:25 PM IST

Updated : Jun 1, 2021, 7:44 PM IST

ಬೆಂಗಳೂರು : ಲಾಕ್​ಡೌನ್ ಹಾಗೂ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿದವರಿಗೆ ಬಿಸಿ ಮುಟ್ಟಿಸುತ್ತಿರುವ ರಾಜಧಾನಿ ಪೊಲೀಸರು, ಈವರೆಗೂ ಸುಮಾರು 4 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.

ಅನಗತ್ಯವಾಗಿ ರಸ್ತೆಗಿಳಿದಿದ್ದ ಬೈಕ್ ಸೇರಿದಂತೆ ವಿವಿಧ ವಾಹನಗಳನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದ ಆದೇಶದಂತೆ ವಿವಿಧ ಪ್ರಕರಣಗಳಿಂದ ಬರೋಬ್ಬರಿ 3,99,02,927 ರೂ. ದಂಡ ವಸೂಲಿ ಮಾಡಲಾಗಿದೆ. ದ್ವಿಚಕ್ರ ವಾಹನಗಳು 34,903, 1888, ಆಟೋಗಳು ಹಾಗೂ 2263 ಕಾರುಗಳು ಸೇರಿದಂತೆ ಒಟ್ಟು 39034 ವಾಹನಗಳನ್ನು ಸೀಜ್ ಮಾಡಲಾಗಿದೆ‌.

ಮಾಸ್ಕ್ ಧರಿಸದೆ ಓಡಾಟ ನಡೆಸುತ್ತಿದ್ದ 1,37,817 ಲಕ್ಷ ಪ್ರಕರಣ ದಾಖಲಿಸಿಕೊಂಡು, 3.38 ಕೋಟಿ ದಂಡ ವಿಧಿಸಲಾಗಿದೆ. ಸಾಮಾಜಿಕ ಅಂತರ ಉಲ್ಲಂಘನೆಯಡಿ 26,659 ಪ್ರಕರಣ ದಾಖಲಿಸಿಕೊಂಡು, 60,20,033 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

591 ಎನ್‌ಡಿಎಂಎ ಪ್ರಕರಣಗಳು ದಾಖಲಾಗಿವೆ. 384 ಮಂದಿ ಬಂಧಿಸಲಾಗಿದೆ‌. ಆಕ್ಸಿಜನ್, ರೆಮ್​ಡಿಸಿವೀರ್ ವಂಚನೆ ಸಂಬಂಧಿಸಿದಂತೆ 64 ಪ್ರಕರಣ ದಾಖಲಿಸಿ 121 ಆರೋಪಿಗಳನ್ನು ಬಂಧಿಸಲಾಗಿದೆ.

ನ್ಯಾಯಾಲಯದ ಸೂಚನೆ ಮೇರೆಗೆ ಜಪ್ತಿಯಾದ ವಾಹನಗಳಿಂದ ದಂಡ ಕಟ್ಟಿಸಿಕೊಂಡು ವಾಹನ ಬಿಡುಗಡೆ ಮಾಡಲಾಗುತ್ತಿದೆ. ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿದ್ದರೆ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ. ಒಂದು ದ್ವಿಚಕ್ರ ವಾಹನಕ್ಕೆ ತಲಾ 500 ರೂ. ದಂಡ ವಿಧಿಸಲಾಗುತ್ತಿದೆ. ₹17 ಕೋಟಿಗಿಂತಲೂ ಹೆಚ್ಚು ದಂಡ ಸಂಗ್ರಹಿಸುವ ಗುರಿಯನ್ನ ಪೊಲೀಸರು ಹೊಂದಿದ್ದಾರೆ.

Last Updated : Jun 1, 2021, 7:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.