ETV Bharat / city

ಆರೋಪಿ ಕಾಲಿಗೆ ಗುಂಡೇಟು : ಫೋಟೋ ನೋಡಿ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡ ಆ್ಯಸಿಡ್ ಸಂತ್ರಸ್ತೆ - ಆತ್ಮಸ್ಥೈರ್ಯ ಹೆಚ್ಚಿಸಿಕೊಂಡ ಆ್ಯಸಿಡ್ ಸಂತ್ರಸ್ತೆ

ಆ್ಯಸಿಡ್ ದಾಳಿ ದೃಶ್ಯ ನೆನೆದುಕೊಂಡು ನೋವಿನಲ್ಲಿದ್ದ ಸಂತ್ರಸ್ತೆಗೆ ಪೊಲೀಸರು ಪೋಷಕರ ಮುಖಾಂತರ ಆರೋಪಿಗೆ ಕಾಲಿಗೆ ಗುಂಡು ಹೊಡೆದು ಆಸ್ಪತ್ರೆಗೆ ಸೇರಿಸಿದ ಫೋಟೋ ತೋರಿಸಿದ್ದಾರೆ. ಫೋಟೋ ನೋಡಿದ ತಕ್ಷಣ ಯುವತಿ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿದ್ದಾಳೆ‌ ಎಂದು ತಿಳಿದು ಬಂದಿದೆ..

Bengaluru acid attack case
ಆರೋಪಿ ನಾಗೇಶ್
author img

By

Published : May 24, 2022, 1:17 PM IST

ಬೆಂಗಳೂರು : ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಕಳೆದ 25 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ‌.‌ ಎರಡು ದಿನಗಳ ಹಿಂದೆ ಕೊನೆಯ ಹಂತದ ಸರ್ಜರಿ ಮಾಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.‌ ಈ ನಡುವೆ ಸಂತ್ರಸ್ತೆಗೆ ಆರೋಪಿ ನಾಗೇಶ್​​​ ಕಾಲಿಗೆ ಗುಂಡು ಹೊಡೆದ ಫೋಟೋ ನೋಡಿ ಖುಷಿಯಾಗಿದ್ದಾಳೆ‌.

ಕಳೆದ ಏಪ್ರಿಲ್​​ನಲ್ಲಿ‌‌ ಆರೋಪಿ ನಾಗೇಶ್ ಪ್ರೀತಿಗೆ ನಿರಾಕರಿಸಿದಕ್ಕೆ ಯುವತಿ ಮೇಲೆ‌ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದ. ತಮಿಳುನಾಡಿನ ಆಶ್ರಮವೊಂದರಲ್ಲಿ ಅವಿತುಕೊಂಡಿದ್ದ ಆರೋಪಿಯನ್ನು ಬಂಧಿಸಿ ನಗರಕ್ಕೆ‌ ಕರೆತಂದಿದ್ದರು. ಈ ವೇಳೆ ಮೂತ್ರವಿಸರ್ಜನೆ ನೆಪದಲ್ಲಿ ಪೊಲೀಸರ‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಈತನ ಮೇಲೆ ಪೊಲೀಸರು ಗುಂಡು ಹೊಡೆದಿದ್ದರು‌.

ವಿಚಾರಣೆ ಮುಗಿದ ಬಳಿಕ ಆರೋಪಿಯನ್ನ ಜೈಲಿಗಟ್ಟಲಾಗಿತ್ತು‌‌.‌ ಈ ಮಧ್ಯೆ ಆ್ಯಸಿಡ್ ದಾಳಿ ದೃಶ್ಯ ನೆನೆದುಕೊಂಡು ನೋವಿನಲ್ಲಿದ್ದ ಸಂತ್ರಸ್ತೆಗೆ ಪೊಲೀಸರು ಪೋಷಕರ ಮುಖಾಂತರ ಆರೋಪಿಗೆ ಕಾಲಿಗೆ ಗುಂಡು ಹೊಡೆದು ಆಸ್ಪತ್ರೆಗೆ ಸೇರಿಸಿದ ಫೋಟೋ ತೋರಿಸಿದ್ದಾರೆ. ಫೋಟೋ ನೋಡಿದ ತಕ್ಷಣ ಯುವತಿ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿದ್ದಾಳೆ‌ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಆ್ಯಸಿಡ್ ದಾಳಿ ಕೇಸ್: ಮೂತ್ರ ವಿಸರ್ಜನೆ ನೆಪದಲ್ಲಿ ತಪ್ಪಿಸಿಕೊಳ್ಳುತ್ತಿದ್ದ ನಾಗನಿಗೆ ಪೊಲೀಸರಿಂದ ಗುಂಡೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.