ETV Bharat / city

ಬಿಬಿಎಂಪಿ ಅರಣ್ಯ- ತೋಟಗಾರಿಕಾ ಅಧಿಕಾರಿಗಳ ಸಭೆ

author img

By

Published : Oct 13, 2020, 8:51 PM IST

ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಗಳನ್ನು ತೆರವುಗೊಳಿಸುವ ವಿಚಾರವಾಗಿ ಸಾರ್ವಜನಿಕರ ದೂರುಗಳು ಬಂದರೆ ತ್ವರಿತವಾಗಿ ಸಮಸ್ಯೆ ನಿವಾರಣೆಗಾಗಿ ಟ್ರೀ ಕಮಿಟಿ ಅನ್ವಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರವುಗೊಳಿಸಲಾಗುತ್ತಿದೆ.

BBMP meeting
ಬಿಬಿಎಂಪಿ ಸಭೆ

ಬೆಂಗಳೂರು: ಬಿಬಿಎಂಪಿ ಅರಣ್ಯ ಹಾಗೂ ತೋಟಗಾರಿಕಾ ವಿಭಾಗದ ಅಧಿಕಾರಿಗಳ ಜೊತೆ ಆಡಳಿತಗಾರರಾದ ಗೌತಮ್ ಕುಮಾರ್ ಪರಿಶೀಲನಾ ಸಭೆ ನಡೆಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪಾರ್ಕ್​ಗಳು, ರಸ್ತೆ ಮಾರ್ಗದಲ್ಲಿರುವ ಮೀಡಿಯನ್ಸ್ ಹಾಗೂ ವೃತ್ತಗಳ ನಿರ್ವಹಣೆಯನ್ನು, ನಗರದಲ್ಲಿರುವ ಪ್ರಮುಖ, ದೊಡ್ಡ ಉದ್ಯಾನಗಳಾದ ಜೆ.ಪಿ.ಪಾರ್ಕ್, ಸ್ವಾತಂತ್ರ್ಯ ಉದ್ಯಾನ, ಕೃಷ್ಣಾರಾವ್ ಉದ್ಯಾನ, ಜಯಮಹಲ್ ಉದ್ಯಾನ, ಬುಲೇವಾರ್ಡ್ ಉದ್ಯಾನಗಳಿಗೆ ಹೆಚ್ಚು ಆದ್ಯತೆ ನೀಡಿ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ನಗರದ ರಸ್ತೆ ಮಾರ್ಗದಲ್ಲಿರುವ ಕೆಲ ಮೀಡಿಯನ್ಸ್​ಗಳು ಸಿಎಸ್‌ಆರ್​ ಅಡಿ ಖಾಸಗಿ ಸಂಸ್ಥೆಗಳು ನಿರ್ವಹಣೆ ಮಾಡಲಾಗುತ್ತಿದ್ದು, ಕೆಲವು ಸಮರ್ಪಕವಾಗಿ ನಿರ್ವಹಣೆ ಆಗುತ್ತಿಲ್ಲ ಅವುಗಳನ್ನು ಪಾಲಿಕೆ ವ್ಯಾಪ್ತಿಗೆ ಹಿಂಪಡೆದು, ಬಿಬಿಎಂಪಿಯೇ ನಿರ್ವಹಣೆ ಮಾಡುವಂತೆ ಸೂಚಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,352 ಉದ್ಯಾನಗಳ ಪೈಕಿ 1,118 ಉದ್ಯಾನಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು, 234 ಉದ್ಯಾನಗಳು ಅಭಿವೃದ್ಧಿಪಡಿಸಬೇಕಿದೆ. ತೋಟಗಾರಿಕಾ ವಿಭಾಗದಿಂದ ಉದ್ಯಾನಗಳಲ್ಲಿ ಫೆನ್ಸಿಂಗ್ ಅಳವಡಿಕೆ, ವಾಯುವಿಹಾರ ಮಾರ್ಗ, ಆಸನಗಳ ವ್ಯವಸ್ಥೆ, ವಿದ್ಯುತ್ ದೀಪಗಳ ಅಳವಡಿಕೆ, ಗಿಡ ನೆಡುವುದು ಸೇರಿದಂತೆ ಉದ್ಯಾನಗಳ ನಿರ್ವಹಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಗಳನ್ನು ತೆರವುಗೊಳಿಸುವ ವಿಚಾರವಾಗಿ ಸಾರ್ವಜನಿಕ ದೂರುಗಳು ಬಂದರೆ ತ್ವರಿತವಾಗಿ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಮರ, ರೆಂಬೆ, ಕೊಂಬೆ ತೆರವು ಮಾಡುವ ವಿಚಾರವಾಗಿ ಸಹಾಯ 2 ತಂತ್ರಾಂಶ, ವಲಯ ಕಚೇರಿ ಹಾಗೂ ಪಾಲಿಕೆ ಕೇಂದ್ರ ಕಚೇರಿಗೆ ಬಂದು ದೂರುಗಳು ನೀಡಿದರೆ ‘ಟ್ರೀ ಕಮಿಟಿ’ ಅನ್ವಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರವುಗೊಳಿಸಲಾಗುತ್ತಿದೆ. ಪಾಲಿಕೆಯಿಂದ 4 ನರ್ಸರಿ (ಕೆಂಪಾಪುರ, ಕೂಡ್ಲು, ಅಟ್ಟೂರು, ಜ್ಞಾನಭಾರತಿ ಆವರಣ)ಗಳನ್ನು ನಡೆಸಲಾಗುತ್ತಿದ್ದು, 4 ನರ್ಸರಿಗಳಲ್ಲಿ 5 ಲಕ್ಷ ಸಸಿಗಳಿವೆ. ಈ ವರ್ಷ 1.30 ಲಕ್ಷ ಸಸಿ ನೆಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.