ETV Bharat / city

ವಿಶ್ವದ ಆರು ಸುರಕ್ಷಿತ ನಗರಗಳಲ್ಲಿ ಬೆಂಗಳೂರಿಗೆ ಸ್ಥಾನ - ಮೀಡಿಯಾ ಕಂಪನಿ ಬ್ಲೂಮ್‌ಬರ್ಗ್‌ ಸಮೀಕ್ಷೆ

ಹೆಚ್ಚಿನ ಸಂಬಳದ ಉದ್ಯೋಗಗಳು ಮತ್ತು ಕೈಗೆಟುಕುವ ಐಷಾರಾಮಿ ಜೀವನ ಶೈಲಿಯಿಂದ ಜಾಗತಿಕ ಸಮುದಾಯಕ್ಕೆ ಬೆಂಗಳೂರು ನೆಚ್ಚಿನ ನಗರವಾಗಿದೆ. ಭದ್ರತೆಯ ಕಾರಣದಿಂದ ಬೆಂಗಳೂರು ಇಷ್ಟ ಎನ್ನುವ ಅಭಿಪ್ರಾಯವನ್ನು ಬಹುತೇಕ ಜನರು ವ್ಯಕ್ತಪಡಿಸಿದ್ದಾರೆ.

ವಿಶ್ವದ ಆರು ಸುರಕ್ಷಿತ ನಗರಗಳಲ್ಲಿ ಬೆಂಗಳೂರಿಗೆ ಸ್ಥಾನ
Bangalore ranks among the six safest cities in the world
author img

By

Published : Aug 18, 2022, 1:15 PM IST

ಬೆಂಗಳೂರು: ವಿಶ್ವದ ಆರು ಅತ್ಯುತ್ತಮ ನಗರಗಳಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಕೂಡ ಒಂದಾಗಿದೆ ಎಂಬ ಅಭಿಪ್ರಾಯ ಮೀಡಿಯಾ ಕಂಪನಿ ಬ್ಲೂಮ್‌ಬರ್ಗ್‌ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಇದರ ಜತೆಗೆ ಕೌಲಾಲಂಪುರ, ಲಿಸ್ಬನ್‌, ದುಬೈ, ಮೆಕ್ಸಿಕೋ ಸಿಟಿ ಮತ್ತು ರಿಯೊ ಡಿ ಜನೈರೊ ನಗರಗಳು ಕೂಡ ವಿಕಸನಶೀಲವಾಗುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಸಂಬಳದ ಉದ್ಯೋಗಗಳು ಮತ್ತು ಕೈಗೆಟುಕುವ ಐಷಾರಾಮಿ ಜೀವನ ಶೈಲಿಯಿಂದ ಜಾಗತಿಕ ಸಮುದಾಯಕ್ಕೆ ಬೆಂಗಳೂರು ನೆಚ್ಚಿನ ನಗರಿಯಾಗಿದೆ. ಭದ್ರತೆಯ ಕಾರಣದಿಂದ ಬೆಂಗಳೂರು ಇಷ್ಟ ಎನ್ನುವ ಅಭಿಪ್ರಾಯವನ್ನು ಬಹುತೇಕ ಜನರು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ಭಾರತದ ನವೋದ್ಯಮಗಳ (ಸ್ಟಾರ್ಟಪ್‌) ರಾಜಧಾನಿ ಎಂಬ ಹಿರಿಮೆ ಇದೆ. ಒಂದು ಅಂದಾಜಿನ ಪ್ರಕಾರ ಲಂಡನ್‌ ಅಥವಾ ಸ್ಯಾನ್‌ ಫ್ರಾನ್ಸಿಸ್ಕೊಗೆ ಹೋಲಿಸಿದರೆ ಬಂಡವಾಳವು ಬೆಂಗಳೂರಿನತ್ತ ವೇಗವಾಗಿ ಹರಿದುಬರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.