ಬೆಂಗಳೂರು: ಸಿಕ್ಕಿ ಬಿದ್ದ ಕಳ್ಳನನ್ನು ಕೆಳಗಿಳಿಸಲು ಅಗ್ನಿಶಾಮಕದಳ ಸಿಬ್ಬಂದಿ ಬರಬೇಕಾದ ಪ್ರಸಂಗ ನಗರದಲ್ಲಿ ನಡೆದಿದೆ.
ಆರೋಪಿ ಪಶ್ಚಿಮ ಬಂಗಾಳದ ಮೂಲದ ಸುಹಾಂತ ಮಂಡಿ ಕಳೆದ ಒಂದೂವರೆ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು ಜೀವನಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದ. ಪುಟ್ಟೇನಹಳ್ಳಿಯ 24ನೇ ಮುಖ್ಯರಸ್ತೆಯ ನಾರಾಯಣ ಶಾಲೆ ಬಳಿಯ ಮೂರು ಅಂತಸ್ತಿನ ಮನೆಯೊಂದರ ಮೇಲೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಕಿಟಕಿ ತೆರೆದು ಅನುಮಾನಾಸ್ಪದವಾಗಿ ಕದ್ದು ನೋಡಿದ್ದಾನೆ.
ಅನುಮಾನಾಸ್ಪದ ವ್ಯಕ್ತಿಯೊಬ್ಬ ಕಿಟಕಿಯಿಂದ ಇಣುಕಿ ನೋಡುತ್ತಿರುವುದು ಮನೆಯವರಿಗೆ ಗೊತ್ತಾಗಿ ಕೂಡಲೇ ಕಿಟಕಿಯಿಂದ ಅವನ ಕೈ ಎಳೆದು ಕಟ್ಟಿಹಾಕಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಕಟ್ಟಡದಿಂದ ಅವನನ್ನು ಕೆಳಗಿಳಿಸಲು ಹರಸಾಹಸ ಪಡಬೇಕಾಯಿತು. ಕಳ್ಳನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ತನ್ನನ್ನು ಯಾರೋ ಹಿಂಬಾಲಿಸಿಕೊಂಡು ಬಂದರು. ಅದಕ್ಕೆ ಕಿಡಿಕಿಯನ್ನ ಹತ್ತಿದ್ದೆ ಎಂದು ಹೇಳಿಕೆ ನೀಡಿದ್ದಾನೆ. ಮೇಲ್ನೋಟಕ್ಕೆ ಈತ ಮದ್ಯ ಸೇವಿಸಿದ್ದ ಎಂದು ತಿಳಿದುಬಂದಿದೆ.