ETV Bharat / city

ಬೆಂಗಳೂರು ಲಾಕ್‌ಡೌನ್​.. ಜುಲೈ 21ರ ವರೆಗೆ ಕೆಎಟಿ ಬಂದ್​ - ಬೆಂಗಳೂರು ಸುದ್ದಿ

ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಲಾಕ್‌ಡೌನ್ ಘೋಷಿರುವ ಹಿನ್ನೆಲೆ, ಕಂದಾಯ ಭವನದಲ್ಲಿನ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಜುಲೈ 13ರಿಂದ ಜುಲೈ 21ರ ವರೆಗೆ ತನ್ನ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಿದೆ.

Bangalore Lockdown .. KAT Band until July 21st
ಬೆಂಗಳೂರು ಲಾಕ್‌ಡೌನ್​..ಜುಲೈ 21ರ ವರೆಗೆ ಕೆಎಟಿ ಬಂದ್​
author img

By

Published : Jul 12, 2020, 11:30 PM IST

ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಲಾಕ್‌ಡೌನ್ ಘೋಷಿರುವ ಹಿನ್ನೆಲೆ, ಕಂದಾಯ ಭವನದಲ್ಲಿನ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಜುಲೈ 13ರಿಂದ ಜುಲೈ 21ರ ವರೆಗೆ ತನ್ನ ಕಾರ್ಯಚಟುವಟಿಕೆ ಸ್ಥಗಿತಗೊಳಿಸಲಿದೆ.

Bangalore Lockdown .. KAT Band until July 21st
ಬೆಂಗಳೂರು ಲಾಕ್‌ಡೌನ್​..ಜುಲೈ 21ರ ವರೆಗೆ ಕೆಎಟಿ ಬಂದ್​

ಈ ಸಂಬಂಧ ಕೆಎಟಿ ರಿಜಿಸ್ಟ್ರಾರ್ ಆದೇಶ ಹೊರಡಿಸಿದ್ದು, ಸರ್ಕಾರ ಬೆಂಗಳೂರಿನಲ್ಲಿ ಒಂದು ವಾರ ಲಾಕ್‌ಡೌನ್ ಘೋಷಿಸಿದೆ. ಜೊತೆಗೆ ಕೆಎಟಿ ಕಚೇರಿಗೆ ನಿಯೋಜಿಸಲ್ಪಟ್ಟಿದ್ದ ಪೊಲೀಸ್​ ಸಿಬ್ಬಂದಿಯೊಬ್ಬರಿಗೆ ಕೊರೊನಾ ಲಕ್ಷಣ ಕಂಡುಬಂದಿರುವ ಕಾರಣ ನ್ಯಾಯಾಧಿಕರಣವನ್ನು ಮುಚ್ಚಲಾಗುತ್ತದೆ ಎಂದು ಹೇಳಿದೆ. ಜುಲೈ 13ಕ್ಕೆ ವಿಚಾರಣೆಗಾಗಿ ಲಿಸ್ಟ್ ಆಗಿರುವ ಪ್ರಕರಣಗಳನ್ನು ಜುಲೈ 22ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಕೆಎಟಿ ಪ್ರಧಾನ ಪೀಠ‌ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಹೆಡ್ ಕ್ವಾರ್ಟರ್ಸ್​​ನಲ್ಲೇ ಇರುವಂತೆ ಸೂಚಿಸಲಾಗಿದೆ. ಅನುಮತಿ ಇಲ್ಲದೆ, ಹೆಡ್ ಕ್ವಾರ್ಟರ್ಸ್ ಬಿಟ್ಟು ತೆರಳುವಂತಿಲ್ಲ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ನಿಯಮ ಉಲ್ಲಂಘಿಸಿದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.