ETV Bharat / city

ಬುದ್ಧಿ ಕಲಿತ ಬೆಂಗಳೂರು.. ಮಾಸ್ಕ್ ಬಗ್ಗೆ ಹೆಚ್ಚಾದ ಜಾಗೃತಿ, ದಂಡದ ಪ್ರಮಾಣವೂ ಇಳಿಕೆ.. - BBMP marshals

ಸೆಪ್ಟೆಂಬರ್ 9ರವರೆಗೆ ಮಾಸ್ಕ್ ಧರಿಸದ 5,22,719 ಜನರಿಂದ ಹಾಗೂ ಸಾಮಾಜಿಕ ಅಂತರ‌ ಕಾಪಾಡದ 32,426 ಪ್ರಕರಣಗಳಿಂದ 13,30,89,325 ರೂ. ದಂಡ ವಸೂಲಿಯಾಗಿದೆ..

ದಂಡ ವಸೂಲಾತಿ
ದಂಡ ವಸೂಲಾತಿ
author img

By

Published : Sep 10, 2021, 4:03 PM IST

ಬೆಂಗಳೂರು : ಬಿಬಿಎಂಪಿಯ ಜನಜಾಗೃತಿ ಯಶಸ್ವಿಯಾಗಿದೆ. ಕೋವಿಡ್ 3ನೇ ಅಲೆ ನಗರಕ್ಕೆ ಎಂಟ್ರಿಯಾಗಬಾರದೆಂಬ ಅರಿವು ಜನರಲ್ಲಿದೆ. ಮಾಸ್ಕ್​​ ಇಲ್ಲದೇ ತಿರುಗಾಡುತ್ತಿದ್ದ ಎಷ್ಟೋ ಮಂದಿ ಇದೀಗ ಮಾಸ್ಕ್​ ಇಲ್ಲದೇ ಹೊರ ಬರುತ್ತಿಲ್ಲ. ಇದಕ್ಕೆ ಬಿಬಿಎಂಪಿ ವಿಧಿಸಿದ ದಂಡದ ಅಂಕಿ-ಅಂಶಗಳ ಪಟ್ಟಿ ಉದಾಹರಣೆ.

ದಂಡ ವಸೂಲಾತಿ
ದಂಡ ವಸೂಲಾತಿ ಅಂಕಿ-ಅಂಶ

ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾಕಷ್ಟು ಸಾವು-ನೋವುಗಳಾಗಿವೆ. ನಮ್ಮ ಕಣ್ಣಮುಂದೆಯೇ ನಮ್ಮ ಹತ್ತಿರದವರು ಮೃತಪಟ್ಟಿದ್ದನ್ನು ನೋಡಿದ್ದೇವೆ. ಇದು ಸಾರ್ವಜನಿಕರಲ್ಲಿ ಸೋಂಕಿನ ಭೀಕರತೆಯ ಅರಿವು ಮೂಡಿಸಿದೆ.

ಜೊತೆಗೆ ಮಾರ್ಷಲ್‌ಗಳ ಪ್ರತ್ಯೇಕ ತಂಡ ನಿಯೋಜಿಸಿ ಮಾಸ್ಕ್ ಧರಿಸದವರಿಗೆ ಬಿಬಿಎಂಪಿ ದಂಡ ವಿಧಿಸುತ್ತಿರುವುದೂ ಕೂಡ ಜನರು ಮಾಸ್ಕ್ ಮರೆತು ಹೊರಗೆ ಓಡಾಡದಂತೆ ಮಾಡಿದೆ. ರಾಜ್ಯದ ಇತರ ನಗರಗಳಿಗೆ ಹೋಲಿಸಿದರೆ ಮಾಸ್ಕ್ ಧರಿಸುವವರ ಪ್ರಮಾಣ ಬೆಂಗಳೂರಲ್ಲಿ ಹೆಚ್ಚಿದೆ.

ದಂಡ ವಸೂಲಾತಿ ಅಂಕಿ-ಅಂಶ
ದಂಡ ವಸೂಲಾತಿ ಅಂಕಿ-ಅಂಶ

ಮಾಸ್ಕ್ ಧಾರಣೆ ಜೊತೆಗೆ ಸಾಮಾಜಿಕ ಅಂತರ ಕಾಪಾಡುವುದನ್ನು ನೋಡಿಕೊಳ್ಳಲು ಪ್ರತ್ಯೇಕ ಮಾರ್ಷಲ್ಸ್ ತಂಡ ಇರುವುದೂ ಬೆಂಗಳೂರಿನಲ್ಲಿ ಮಾತ್ರ. ಇದರಿಂದಾಗಿಯೂ ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.

ಬಿಬಿಎಂಪಿ ವಿಧಿಸಿದ ದಂಡದ ಅಂಕಿ-ಅಂಶಗಳ ಪಟ್ಟಿ ನೋಡುವುದಾದರೆ 2021ರ ಮಾರ್ಚ್ ತಿಂಗಳಲ್ಲಿ ದಿನವೊಂದರಲ್ಲಿ 1198 ಮಂದಿ ಮಾಸ್ಕ್​ ಧರಿಸದೇ ಇದ್ದಿದ್ದಕ್ಕೆ ದಂಡ ಕಟ್ಟುತ್ತಿದ್ದರು. ಆದರೆ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಈ ಪ್ರಮಾಣ 700-800ಕ್ಕೆ ಬಂದು ತಲುಪಿದೆ.

ಸೆಪ್ಟೆಂಬರ್ 9ರವರೆಗೆ ಮಾಸ್ಕ್ ಧರಿಸದ 5,22,719 ಜನರಿಂದ ಹಾಗೂ ಸಾಮಾಜಿಕ ಅಂತರ‌ ಕಾಪಾಡದ 32,426 ಪ್ರಕರಣಗಳಿಂದ 13,30,89,325 ರೂ. ದಂಡ ವಸೂಲಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.