ಯಲಹಂಕ(ಬೆಂಗಳೂರು): ತಮ್ಮ ಜಮೀನಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿರುವುದನ್ನು ತಡೆಯಲು ಹೋದವರಿಗೆ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್ ಜಿಪ್ ತೆಗೆದು ಗುಪ್ತಾಂಗ ತೋರಿಸಿ, ಅಶ್ಲೀಲವಾಗಿ ಮಾತನಾಡಿ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದಿದೆ.
ಈ ಕುರಿತು ಯಲಹಂಕ ತಾಲೂಕು ಹೊನ್ನೇನಹಳ್ಳಿಯ ಗ್ರಾಮದ ಪರಿಶಿಷ್ಟ ಸಮುದಾಯದ ಮುನಿಯಪ್ಪ ಎಂಬುವರು ದೌರ್ಜನ್ಯ ಮತ್ತು ಜಾತಿ ನಿಂದನೆಗೆ ಒಳಗಾಗಿದ್ದು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.
ಮುನಿಯಪ್ಪನವರ ತಾತ ದೊಡ್ಡನಂಜಪ್ಪ ಅವರಿಗೆ ಸರ್ಕಾರದಿಂದ ಹೊನ್ನೆನಹಳ್ಳಿ ಗ್ರಾಮದ ಸರ್ವೆ ನಂಬರ್ 83ರಲ್ಲಿ 4 ಎಕರೆ 7 ಗುಂಟೆ ತಳವಾರ ತೋಟಿ ಇನಾಮ್ತಿ ಜಮೀನು ಮಂಜೂರಾಗಿತ್ತು. ಆದರೆ, ಇದೇ ಜಮೀನಿಗೆ ಸಂಬಂಧಿಸಿದಂತೆ ರಾಜಣ್ಣ ಎಂಬುವರು ಈ ಜಾಗ ತಮಗೆ ಸೇರಿದ್ದೆಂದು ಕೋರ್ಟ್ನಲ್ಲಿ ದಾವೆ ಹಾಕಿದ್ದರು. ಮಾನ್ಯ ನ್ಯಾಯಾಲಯ ರಾಜಣ್ಣನ ಅರ್ಜಿಯನ್ನು ವಜಾಗೊಳಿಸಿದೆ.
ಇದೇ ಜಮೀನಿನ ಪಕ್ಕದಲ್ಲಿ ಮನೆಯನ್ನು ಕಟ್ಟಿರುವ ರಾಜಣ್ಣ ತನ್ನ ಮನೆಗೆ ರಸ್ತೆ ನಿರ್ಮಿಸಲು ಮುನಿಯಪ್ಪ ಎಂಬುವರ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದಿನಾಂಕ 13.11.2021ರಲ್ಲಿ ರಾಜಣ್ಣ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾದಾಗ ಮುನಿಯಪ್ಪನವರ ಕುಟುಂಬ ತಡೆಯಲು ಹೋದಾಗ, ರಾಜಣ್ಣ ತನ್ನ ಪ್ಯಾಂಟ್ ಜಿಪ್ ತೆಗೆದು ಗುಪ್ತಾಂಗ ತೋರಿಸಿ ಅಸಭ್ಯವಾಗಿ ವರ್ತನೆ ಮಾಡಿದಲ್ಲದೆ, ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ದಿನಾಂಕ 25.12.2021ರಂದು 15 ಜನ ಗೂಂಡಾಗಳನ್ನು ಕರೆಯಿಸಿ, ಎರಡು ಜೆಸಿಬಿ ವಾಹನಗಳಿಂದ ಮುನಿಯಪ್ಪ ಅವರ ಕುಟುಂಬ ಪೂಜೆ ಮಾಡುತ್ತಿದ್ದ ಮುನೇಶ್ವರ ಗುಡಿಯ ಮೇಲೆ ಜಲ್ಲಿ ಕಲ್ಲು ಸುರಿದಿದ್ದಾರೆ. ಇದರ ಜೊತೆಗೆ ಅಪಹರಣ ಮಾಡಿ, ಕೊಲೆ ಮಾಡುವ ಬೆದರಿಕೆಯನ್ನು ರಾಜಣ್ಣನವರು ಹಾಕಿರುವುದಾಗಿ ಮುನಿಯಪ್ಪನ ಕುಟುಂಬ ಆರೋಪಿಸಿದೆ.
ಇದನ್ನೂ ಓದಿ: 3 ವರ್ಷದ ಹೆಣ್ಣು ಮಗುವಿನ ಮೇಲೆ 30 ವರ್ಷದ ಕಾಮುಕನಿಂದ ಅತ್ಯಾಚಾರ ಯತ್ನ!