ETV Bharat / city

ರೌಡಿ ಶೀಟರ್ ಬಬ್ಲಿ ಕೊಲೆ ಪ್ರಕರಣ: ಅಶೋಕ್‌ನಗರ ಇನ್ಸ್​ಪೆಕ್ಟರ್ ಭರತ್​​ ಎತ್ತಂಗಡಿ - ಬಬ್ಲಿ ಕೊಲೆ ಪ್ರಕರಣ

ಮೂರು ತಿಂಗಳ ಹಿಂದೆ ಅರುಣ್ ಎಂಬಾತನ ಮೇಲೆ ಹಲ್ಲೆಯಾಗಿತ್ತು. ಶಾಂತಿನಗರದ ರುದ್ರಭೂಮಿಯ ಬಳಿ ಅರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇನ್ನು ಹಲ್ಲೆ ಪ್ರಕರಣದಲ್ಲಿ ಈಗ ಕೊಲೆಯಾಗಿರುವ ಬಬ್ಲಿ ಎ2 ಆರೋಪಿಯಾಗಿದ್ದ. ಆದ್ರೆ ಕೊಲೆಯತ್ನ ಪ್ರಕರಣದಲ್ಲಿ ಬಬ್ಲಿಯನ್ನು ಇನ್ಸ್​​ಪೆಕ್ಟರ್​ ಬಂಧಿಸದೇ ಬಿಟ್ಟು ಕಳುಹಿಸಿದ್ದರು ಎನ್ನಲಾಗಿದೆ.

ಅಶೋಕ್‌ನಗರ ಇನ್ಸ್​ಪೆಕ್ಟರ್ ಭರತ್​​ ಎತ್ತಂಗಡಿ
ಅಶೋಕ್‌ನಗರ ಇನ್ಸ್​ಪೆಕ್ಟರ್ ಭರತ್​​ ಎತ್ತಂಗಡಿ
author img

By

Published : Aug 1, 2021, 4:25 AM IST

ಬೆಂಗಳೂರು: ಕೋರಮಂಗಲದ‌ ಬ್ಯಾಂಕ್‌ವೊಂದರಲ್ಲಿ ರೌಡಿಶೀಟರ್ ಬಬ್ಲಿ ಅಲಿಯಾಸ್ ಜೋಸೆಫ್ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಕಾರಣ ಅಶೋಕನಗರ ಠಾಣಾ ಇನ್ಸ್​ಪೆಕ್ಟರ್ ಭರತ್​ರನ್ನು ಎತ್ತಂಗಡಿ ಮಾಡಲು ಕಮಿಷನರ್ ಕಮಲ್ ಪಂತ್‌ ಆದೇಶ ಹೊರಡಿಸಿದ್ದಾರೆ. ಅಶೋಕನಗರ ಠಾಣೆಯಿಂದ ಕಂಟ್ರೋಲ್ ರೂಂಗೆ ರಿಪೋರ್ಟ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

ಮೂರು ತಿಂಗಳ ಹಿಂದೆ ಅರುಣ್ ಎಂಬಾತನ ಮೇಲೆ ಹಲ್ಲೆಯಾಗಿತ್ತು. ಶಾಂತಿನಗರದ ರುದ್ರಭೂಮಿಯ ಬಳಿ ಅರುಣ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇನ್ನು ಹಲ್ಲೆ ಪ್ರಕರಣದಲ್ಲಿ ಈಗ ಕೊಲೆಯಾಗಿರುವ ಬಬ್ಲಿ ಎ2 ಆರೋಪಿಯಾಗಿದ್ದ. ಆದ್ರೆ ಕೊಲೆಯತ್ನ ಪ್ರಕರಣದಲ್ಲಿ ಬಬ್ಲಿಯನ್ನು ಇನ್ಸ್​​ಪೆಕ್ಟರ್​ ಬಂಧಿಸದೇ ಬಿಟ್ಟು ಕಳುಹಿಸಿದ್ದರು ಎನ್ನಲಾಗಿದೆ.

ಆದರೆ ಇದಾದ ಕೇವಲ ಮೂರು ತಿಂಗಳ ಅಂತರದಲ್ಲಿ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ಬಬ್ಲಿ ಕೊಲೆಯಾಗಿದ್ದ. ಆರೋಪಿಗಳು ಬ್ಯಾಂಕ್ ಒಳಗಡೆ ನುಗ್ಗಿ ಬಬ್ಲಿಯನ್ನು ಕೊಲೆ ಮಾಡಿದ್ದರು. ಒಂದು ವೇಳೆ ಇನ್ಸ್​ಪೆಕ್ಟರ್​ ಮೂರು ತಿಂಗಳ ಹಿಂದೆ ಬಬ್ಲಿಯ ಬಂಧಸಿದ್ರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ ಎಂದು ಕೋರಮಂಗಲ ಪೊಲೀಸರಿಂದ ಕಮೀಷನರ್‌ಗೆ ವರದಿ‌ ನೀಡಲಾಗಿತ್ತು.

ಈ ವರದಿಯನ್ನ ಆಧರಿಸಿ ಕಮಿಷನರ್ ಸಿಸಿಬಿಗೆ ತನಿಖೆ ಮಾಡುವಂತೆ ಆದೇಶ ನೀಡಿದ್ದರು. ಸಿಸಿಬಿ ತನಿಖೆ ವೇಳೆ ಇನ್ಸ್​ಪೆಕ್ಟರ್ ಭರತ್ ಕರ್ತವ್ಯಲೋಪ ಎಸಗಿರುವುದುು ಖಚಿತವಾಗಿದೆ. ಹೀಗಾಗಿ ಸಿಸಿಬಿ ಪೊಲೀಸರ ತನಿಖಾ ವರದಿ ಆಧರಿಸಿ ಕಮೀಷನರ್ ಎತ್ತಂಗಡಿ ಆದೇಶವನ್ನ ಹೊರಡಿಸಿದ್ದಾರೆ.

ಇನ್ನು ಇನ್ಸ್​ಪೆಕ್ಟರ್ ಭರತ್ ಜಾಗಕ್ಕೆ ಅಶೋಕ್ ನಗರ ಪೊಲೀಸ್ ಠಾಣೆಗೆ ಮಲ್ಲೇಶ್ ಬೊಳೆತ್ತಿನ್ ನಿಯೋಜನೆ ಮಾಡಲಾಗಿದೆ. ಈ ಹಿಂದೆ ಸಿಸಿಬಿಯಲ್ಲಿ ಬೊಳೆತ್ತಿನ್ ಕಾರ್ಯ ನಿರ್ವಹಿಸುತ್ತಿದ್ದರು.

ಇದನ್ನು ಓದಿ: ರೌಡಿಶೀಟರ್ ಬಬ್ಲಿ ಕೊಲೆ: ಸಿಸಿಟಿವಿ Video ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.