ETV Bharat / city

ರಕ್ತ ಚಂದನ ಅಕ್ರಮ ಸಾಗಣೆ: ಮೂವರು ಆರೋಪಿಗಳ ಬಂಧನ

ರಕ್ತ ಚಂದನ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದು, 35 ಲಕ್ಷ ರೂ ಮೌಲ್ಯದ 750 ಕೆ.ಜಿ ರಕ್ತ ಚಂದನ ವಶಕ್ಕೆ ಪಡೆಯಲಾಗಿದೆ.

Arrest of Three accused who were smuggling red sandal
ರಕ್ತ ಚಂದನ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ
author img

By

Published : Aug 2, 2022, 12:26 PM IST

ಆನೇಕಲ್(ಬೆಂಗಳೂರು): ರಕ್ತ ಚಂದನ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಆನೇಕಲ್ ತಾಲೂಕಿನ ಸರ್ಜಾಪುರದ ಬಷೀರ್ ಅಹಮದ್, ಅಡಿಗಾರ ಕಲ್ಲಹಳ್ಳಿಯ ನಿಜಾಮ್ ಹಾಗೂ ತೌಷಿದ್ ಬಂಧಿತ ಆರೋಪಿಗಳು.

ಆರೋಪಿಗಳು ಕರ್ನಾಟಕದ ಗಡಿ ತಮಿಳುನಾಡಿನ ಬಾಗಲೂರಿನಿಂದ ಬೆಂಗಳೂರಿಗೆ ವಾಹನದಲ್ಲಿ ಅಕ್ರಮವಾಗಿ ರಕ್ತ ಚಂದನವನ್ನ ಸಾಗಣೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಹೆಬ್ಬಗೋಡಿ ಪೊಲೀಸರ ತಂಡ ಬೊಮ್ಮಸಂದ್ರದ ಬಳಿ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ಬಂಧಿತರಿಂದ 35 ಲಕ್ಷ ರೂ.ಮೌಲ್ಯದ 750 ಕೆ.ಜಿ ರಕ್ತ ಚಂದನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಬ್ಬಗೋಡಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾರಿನಲ್ಲಿ ಬೆನ್ನಟ್ಟಿ ರಸ್ತೆ ಮಧ್ಯೆ ವಕೀಲರ ಭೀಕರ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.