ETV Bharat / city

ರೋಶಿನಿ ಯೋಜನೆ ಹೆಸರಲ್ಲಿ ಮತ್ತೊಂದು ಹಗರಣ; ಶೈಕ್ಷಣಿಕ ಸಾಧನಗಳ ಹೆಸರಲ್ಲಿ ವಂಚನೆ?

ಬೆಂಗಳೂರು ನಗರದ ಬಿಬಿಎಂಪಿ ಶಾಲೆಗಳನ್ನು ಮೈಕ್ರೋ ಸಾಫ್ಟ್ ಕಂಪೆನಿಯ ಸಿಎಸ್​ಆರ್ (Corporate Social Responsibility) ಫಂಡ್​ನಲ್ಲಿ ಹೈಟೆಕ್ ಮಾಡುತ್ತೇವೆ ಎಂದು ಹೇಳಿಕೊಂಡು ಬಂದಿದ್ದ ರೋಶಿನಿ ಯೋಜನೆಯಲ್ಲಿ ಇದೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.

ಮೇಯರ್ ಗಂಗಾಬಿಕೆ
author img

By

Published : Sep 18, 2019, 9:34 PM IST

ಬೆಂಗಳೂರು: ನಗರದ ಬಿಬಿಎಂಪಿ ಶಾಲೆಗಳನ್ನು ಮೈಕ್ರೋ ಸಾಫ್ಟ್ ಕಂಪೆನಿಯ ಸಿಎಸ್​ಆರ್ ಫಂಡ್​ನಲ್ಲಿ ಹೈಟೆಕ್ ಮಾಡುತ್ತೇವೆ ಎಂದು ಹೇಳಿಕೊಂಡು ಬಂದಿದ್ದ ರೋಶಿನಿ ಯೋಜನೆಯ ಸತ್ಯಾಸತ್ಯತೆಯ ಬಗ್ಗೆ ಈಟಿವಿ ಭಾರತ ಈ ಹಿಂದೆ ವರದಿ ಪ್ರಕಟಿಸಿತ್ತು. ಇದೀಗ ಈ ಯೋಜನೆಯ ಹೆಸರಲ್ಲಿ ನಡೆದ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.

ರೋಶಿನಿ ಯೋಜನೆ ಕುರಿತು ಮೇಯರ್​ ಪ್ರತಿಕ್ರಿಯೆ

17.86 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಶೈಕ್ಷಣಿಕ ಸಾಧನಗಳನ್ನು ಪಾಲಿಕೆ ಶಾಲಾ ಮಕ್ಕಳಿಗೆ ನೀಡಲಾಗಿದೆ ಎಂಬ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 16.29 ಕೋಟಿ ಮೌಲ್ಯದ 154 ಮೈಕ್ರೋ ಸಾಫ್ಟ್ ಕಿಟ್ ಹಸ್ತಾಂತರಿಸಿರುವುದಾಗಿ ರೋಶಿನಿ ಯೋಜನೆ ನಿರ್ವಾಹಕರಾಗಿದ್ದ ಅಲಿ ಸೇಠ್ ಹೇಳಿಕೊಂಡಿದ್ದಾರೆ.

Roshini project
ರೋಶಿನಿ ಯೋಜನೆಗೆ ಸಂಬಂಧಿಸಿದ ಬಿಲ್​

ಬಿಬಿಎಂಪಿ ಶಾಲೆಗಳ ರೋಶಿನಿ ಯೋಜನೆಯ ಕನಸು ಭಗ್ನ: ಅಸಲಿ ಬಣ್ಣ ಬಯಲು!

ಆದ್ರೆ ಈ ರೀತಿ ಯಾವುದೇ ಕಿಟ್ ಹಂಚಿಕೆಯಾಗಿಲ್ಲ. ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಶಿಕ್ಷಣ ವಿಶೇಷ ಆಯುಕ್ತ ರವೀಂದ್ರ ಉತ್ತರ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಗಂಗಾಬಿಕೆ , ರೋಶಿನಿ ಯೋಜನೆ ಬಗ್ಗೆ ಜನಪ್ರತಿನಿಧಿಗಳಿಗೂ ಅಸಮಾಧಾನ ಇದೆ. ಪಾಲಿಕೆ ಅಧಿಕಾರಿಗಳ ಹೇಳಿಕೆ ಬಗ್ಗೆಯೂ ತನಿಖೆ ಮಾಡಲಾಗುವುದು. ಬಿಲ್ ನೀಡಿದ್ದಾರೆ, ಅಧಿಕಾರಿಗಳು ಸಹಿ ಮಾಡಿರುವ ಬಗ್ಗೆ ಆಯುಕ್ತರು ಪರಿಶೀಲಿಸಬೇಕು. ಶಿಕ್ಷಣ ವಿಶೇಷ ಆಯುಕ್ತರಾದ ರವೀಂದ್ರ ಅವರ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

Intro:ರೋಶಿನಿ ಯೋಜನೆ ಹೆಸರಲ್ಲಿ ಮತ್ತೊಂದು ಹಗರಣದ ಆರೋಪ- ಕಿಟ್ ನೀಡದೆಯೇ ಬಿಲ್ ರೆಡಿ!

ಬೆಂಗಳೂರು- ನಗರದ ಬಿಬಿಎಂಪಿ ಶಾಲೆಗಳನ್ನು ಮೈಕ್ರೋ ಸಾಫ್ಟ್ ಕಂಪೆನಿಯ ಸಿಎಸ್ ಆರ್ ಫಂಡ್ ನಲ್ಲಿ ಹೈಟೆಕ್ ಮಾಡುತ್ತೇವೆ ಎಂದು ಹೇಳಿಕೊಂಡು ಬಂದಿದ್ದ ರೋಶಿನಿ ಯೋಜನೆ, ಸಂಪೂರ್ಣ ಬೋಗಸ್ ಯೋಜನೆ ಎಂಬ ವರದಿಯನ್ನು ಈಟಿವಿ ಭಾರತ್ ಹಿಂದೆ ಪ್ರಕಟಿಸಿತ್ತು.
ಇದೀಗ ಈ ಯೋಜನೆಯ ಹೆಸರಲ್ಲಿ ನಡೆದ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು, 17.86 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಶೈಕ್ಷಣಿಕ ಸಾಧನಗಳನ್ನು ಪಾಲಿಕೆ ಶಾಲಾ ಮಕ್ಕಳಿಗೆ ನೀಡಲಾಗಿದೆ ಎಂಬ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 16.29 ಕೋಟಿ ಮೌಲ್ಯದ 154 ಮೈಕ್ರೋ ಸಾಫ್ಟ್ ಕಿಟ್ ಹಸ್ತಾಂತರಿಸಿರುವುದಾಗಿ ಮೈಕ್ರೋಸಾಫ್ಟ್ ಕಂಪೆನಿಯಿಂದ ರೋಶಿನಿ ಯೋಜನೆ ನಿರ್ವಾಹಕರಾಗಿದ್ದ ಅಲಿ ಸೇಠ್ ಹೇಳಿಕೊಂಡಿದ್ದಾರೆ.
ಆದ್ರೆ ಈ ರೀತಿ ಯಾವುದೇ ಕಿಟ್ ಹಂಚಿಕೆಯಾಗಿಲ್ಲ. ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಶಿಕ್ಷಣ ವಿಶೇಷ ಆಯುಕ್ತ ರವೀಂದ್ರ ಹಾರಿಕೆಯ ಉತ್ತರ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್,ರೋಶಿನಿ ಯೋಜನೆ ಬಗ್ಗೆ ಜನಪ್ರತಿನಿಧಿಗಳಿಗೂ ಅಸಮಾಧಾನ ಇದೆ. ಪಾಲಿಕೆ ಅಧಿಕಾರಿಗಳ ಹೇಳಿಕೆ ಬಗ್ಗೆಯೂ ತನಿಖೆ ಮಾಡಲಾಗುವುದು. ಬಿಲ್ ನೀಡಿದ್ದಾರೆ, ಅಧಿಕಾರಿಗಳು ಸಹಿ ಮಾಡಿರುವ ಬಗ್ಗೆ ಆಯುಕ್ತರು ಪರಿಶೀಲಿಸಬೇಕು.
ಶಿಕ್ಷಣ ವಿಶೇಷ ಆಯುಕ್ತರಾದ ರವೀಂದ್ರ ಅವರ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

ಸೌಮ್ಯಶ್ರೀ
Kn_bng_05_Roshini_bbmp_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.