ETV Bharat / city

ರಾಜ್ಯ ಬಜೆಟ್​-2022: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗುಡ್​ ನ್ಯೂಸ್​

Karnataka Budget-2022.. ರಾಜ್ಯ ಬಜೆಟ್ ಮಂಡಿಸಿದ ಸಿಎಂ ಬೊಮ್ಮಾಯಿ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ.

state budget
ರಾಜ್ಯ ಬಜೆಟ್
author img

By

Published : Mar 4, 2022, 1:43 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತಮ್ಮ ಚೊಚ್ಚಲ ಬಜೆಟ್​ ಅನ್ನು ಮಂಡಿಸಿದರು. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಗುಡ್​ ನ್ಯೂಸ್​ ಕೊಟ್ಟಿರುವ ಮುಖ್ಯಮಂತ್ರಿಗಳು ಗೌರವಧನವನ್ನು ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ.

ಆಶಾ ಕಾರ್ಯಕರ್ತೆಯರು ಸೇರಿ ಹಲವರ ಗೌರವಧನ ಹೆಚ್ಚಳ ಮಾಡಿ ಘೋಷಿಸಿದ್ದಾರೆ. ಆಶಾ ಕಾರ್ಯಕರ್ತರು, ಗ್ರಾಮ ಸಹಾಯಕರಿಗೆ 1,000 ರೂ.ಗಳು, ಬಿಸಿಯೂಟ ತಯಾರಕರಿಗೂ ತಲಾ 1,000 ಗೌರವ ಧನ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ: ವಿಧಾನಸೌಧದ ಮೇಲೆ ಹಾರಿದ ಜೆಟ್: ಆಗಸದಲ್ಲಿ ಮೊದಲ ಬಾರಿಗೆ ಬಜೆಟ್ ಪ್ರಚಾರ!

ಇದರ ಜೊತೆಗೆ, ಅಂಗನವಾಡಿ ಕಾರ್ಯಕರ್ತರಿಗೂ ಗೌರವಧನ ಹೆಚ್ಚಳ ಮಾಡಲಾಗಿದೆ. ಅವರ ಸೇವೆಗಳ ಅನುಭವದ ಆಧಾರದ ಮೇಲೆ 1,000 ರೂಪಾಯಿಯಿಂದ 1,500 ರೂ.ಗಳನ್ನು ಹೆಚ್ಚಳ ಮಾಡಲಾಗುವುದು. ಜೊತೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ 30,000 ಮತ್ತು 50,000 ಇಡಿಗಂಟು ಕೊಡುವುದಾಗಿ ಹೇಳಿದ್ದಾರೆ.

ಪ್ರವಾಸಿ ಗೈಡ್‌ಗಳಿಗೆ ಮಾಸಿಕ 2,000 ಪ್ರೋತ್ಸಾಹ ಗೌರವಧನ ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.