ದೇವನಹಳ್ಳಿ(ಬೆಂಗಳೂರು) : ತಾಂತ್ರಿಕ ಕಾರಣದಿಂದ ಏರ್ ಇಂಡಿಯಾ ವಿಮಾನ 3 ಗಂಟೆಗಳ ಕಾಲ ರನ್‌ವೇನಲ್ಲಿಯೇ ನಿಂತಿತ್ತು. ಪ್ರಯಾಣಿಕರನ್ನ ಬಸ್ನಲ್ಲಿ ವಾಪಸ್ ಕರೆ ತರಲಾಗಿದೆ.
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಏರ್ ಇಂಡಿಯಾ AI 505 ವಿಮಾನ ಬೆಳಗ್ಗೆ 10.35ಕ್ಕೆ ಹೊರಡಲು ಸಿದ್ಧವಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಚಲಿಸದೆ ನಿಂತ ಜಾಗದಲ್ಲೇ 3 ಗಂಟೆಗಳ ಕಾಲ ರನ್‌ವೇನಲ್ಲೇ ನಿಂತಿತ್ತು. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಬಳಿಕ ರನ್ ವೇಗೆ ತೆರಳಿದ ಏರ್ ಇಂಡಿಯಾ ಕಂಪನಿಯ ಬಸ್ ಪ್ರಯಾಣಿಕರನ್ನ ಕರೆ ತಂದಿದೆ.
ಮತ್ತೊಂದು ಮಾಹಿತಿ ಪ್ರಕಾರ ಡಿಜಿಸಿಎ (ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಅನುಮತಿ ಸಿಗದೆ ವಿಮಾನ ಟೇಕ್ ಆಫ್ ಆಗಿರಲಿಲ್ಲ. 3 ಗಂಟೆಗಳ ಬಳಿಕ ಡಿಜಿಸಿಎ ಅನುಮತಿ ಸಿಕ್ಕಿದೆ. ಅಷ್ಟರಲ್ಲಿ ರನ್‌ವೇಗೆ ತೆರಳಿದ ಏರ್ ಇಂಡಿಯಾ ಕಂಪನಿಯ ಬಸ್ ಪ್ರಯಾಣಿಕರನ್ನ ಕರೆ ತಂದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ದೇಶದಲ್ಲಿ 80 ಕೋಟಿ ಜನರಿಗೆ ವ್ಯಾಕ್ಸಿನೇಷನ್..!