ETV Bharat / city

ಲಾಕ್​ಡೌನ್​​ನಲ್ಲೇ ಹೆಚ್ಚು, ಅನ್​​ಲಾಕ್​ ನಂತರ ಕಡಿಮೆಯಾದ ಅಪಘಾತಗಳು! - corona lockdown

ಪ್ರಮುಖ ನಗರಗಳಲ್ಲಿ ದಟ್ಟಣೆಯಿಂದ ದುಪ್ಪಟ್ಟು ಸಂಭವಿಸುತ್ತಿದ್ದ ಅಪಘಾತಗಳು ಲಾಕ್​ಡೌನ್​ ನಂತರ ನಗರದಲ್ಲಿ ‌ಕೊಂಚ ಮಟ್ಟಿಗೆ ತಗ್ಗಿದೆ. ಆದರೆ, ಲಾಕ್​ಡೌನ್​​ನಲ್ಲೇ ಹೆಚ್ಚು ಪ್ರಾಣಾಪಾಯಗಳು ಸಂಭವಿಸಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

accident-cases-increase
ಅಪಘಾತ
author img

By

Published : Oct 7, 2020, 5:29 PM IST

ಬೆಂಗಳೂರು: ಕೊರೊನಾ ಅವಧಿಯಲ್ಲಿ ವಾಹನಗಳು ರಸ್ತೆಗೆ ಇಳಿಯದ ಕಾರಣ ಬೆಂಗಳೂರು ಬಿಕೋ ಎನ್ನುತ್ತಿತ್ತು. ಲಾಕ್​ಡೌನ್ ಸಡಿಲಿಕೆ ನಂತರ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿರುವ ನಗರ ಎಂದು ಪಟ್ಟ ಪಡೆದಿರುವ ರಾಜಧಾನಿಯಲ್ಲಿ ಮತ್ತದೇ ಕಾಟ ಶುರುವಾಗಿದೆ.

ದಟ್ಟಣೆಯಿಂದ ದುಪ್ಪಟ್ಟು ಸಂಭವಿಸುತ್ತಿದ್ದ ಅಪಘಾತಗಳು ಲಾಕ್​ಡೌನ್​ ನಂತರ ನಗರದಲ್ಲಿ ‌ಕೊಂಚ ಮಟ್ಟಿಗೆ ತಗ್ಗಿದೆ. ಆದರೆ, ಲಾಕ್​ಡೌನ್​​ನಲ್ಲೇ ಹೆಚ್ಚು ಪ್ರಾಣಾಪಾಯಗಳು ಸಂಭವಿಸಿವೆ ಎಂದರೆ ನಂಬಲೇಬೇಕು. ವಾಹನ ಸಂಚಾರಕ್ಕೆ ಬ್ರೇಕ್​ ಬಿದ್ದಿದ್ದರೂ ಅಪಘಾತ ಸಂಖ್ಯೆ ಹೆಚ್ಚಾಗಿದ್ದು ಹೇಗೆ?

ಪೊಲೀಸರು ಬಹುತೇಕ ಕಡೆ ಚೆಕ್​​ಪೋಸ್ಟ್ ಅಳವಡಿಸಿ ಅನಗತ್ಯ ಓಡಾಡುವ ಸವಾರರ ಬೈಕ್​​ಗಳನ್ನು ಜಪ್ತಿ ಮಾಡಿಕೊಳ್ಳತ್ತಿದ್ದರು. ಇನ್ನೆಲ್ಲಿ ಖಾಕಿ ನಮ್ಮ ವಾಹನಗಳನ್ನೂ ವಶಕ್ಕೆ ಪಡೆದುಕೊಳ್ಳುತ್ತದೋ ಎಂಬ ಭಯದಲ್ಲಿ ಅಡ್ಡ ರಸ್ತೆ, ಖಾಲಿ‌ ಇರುವ ರಸ್ತೆ ಬಳಿ ರ‍್ಯಾಷ್​​ (Rash) ಡ್ರೈವ್‌ ಮಾಡಿ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅನ್​​ಲಾಕ್​ ನಂತರ ಸಂಚಾರಿ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದು, ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸುತ್ತಿದ್ದಾರೆ. ಮಾಸ್ಕ್​​ ಹಾಕದಿದ್ದರೂ ದಂಡ ವಿಧಿಸಲಾಗುತ್ತಿದೆ. ಹೀಗಾಗಿ, ಸಂಚಾರ ನಿಯಮದ ಜೊತೆಗೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಿಂದ ದುಪ್ಪಟ್ಟು ಹಣ ತೆರಬೇಕಾಗುತ್ತದೆ ಎಂಬ ಭೀತಿಯಿಂದ ಸವಾರರು ರಸ್ತೆಗಿಳಿಯಲು ಹಿಂದೇಟು ಹಾಕಿದ್ದರು. ಈ ಮೂಲಕ ಬಹುತೇಕವಾಗಿ ಅಪಘಾತಗಳು ಕಡಿಮೆಯಾಗಿದೆ ಎಂದು ಪೊಲೀಸರೇ ಹೇಳುತ್ತಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳ ಅಂಕಿ-ಅಂಶ (ಮಾಸಿಕ)

ಅಪಘಾತಮಾರ್ಚ್​​​ಏಪ್ರಿಲ್​​​​ಮೇಜೂನ್​​ಜುಲೈಆಗಸ್ಟ್​​​​
ತೀವ್ರ23849161 1028151
ಸಾಮಾನ್ಯ66914249429410498
ಸಾವು281481711715141
ಗಾಯಾಳು ---217741641341248
ಒಟ್ಟು1,1884561,5671,208577438

ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳ ಅಂಕಿ-ಅಂಶ (ಮಾಸಿಕ)

ಅಪಘಾತಮಾರ್ಚ್​​​ಏಪ್ರಿಲ್​​​​ಮೇಜೂನ್​​ (ಮಾಹಿತಿ ಇಲ್ಲ)ಜುಲೈಆಗಸ್ಟ್​​​​
ತೀವ್ರ 21056162 ---6242
ಸಾಮಾನ್ಯ 571138428 ---328228
ಸಾವು241 67172 ---7252
ಗಾಯಾಳು1,070254738 ---538300
ಒಟ್ಟು2,092 5151,500 ---1,000622

ಜಿಲ್ಲಾ ರಸ್ತೆಗಳಲ್ಲಿ ಸಂಭವಿಸಿದ ಅಪಘಾತಗಳ ಅಂಕಿ-ಅಂಶ (ಮಾಸಿಕ)

ತೀವ್ರ 26694249249148103
ಸಾಮಾನ್ಯ1,074387772772542301
ಸಾವು241211253201102 59
ಗಾಯಾಳು1,070 8851,1371,137 --- ---
ಒಟ್ಟು2,651‬1,5772,411‬ 2,359792463‬

ಸಿಲಿಕಾನ್ ಸಿಟಿ ಮಾತ್ರ ನೋಡುವುದಾದರೆ ಜನವರಿಯಿಂದ ಜೂನ್​​ವರೆಗೆ 291 ರಸ್ತೆ ಅಪಘಾತಗಳು, 1,415 ಗಾಯಗೊಂಡವರು, 309 ಮಂದಿ ಸಾವಿಗೀಡಾಗಿದ್ದಾರೆ. ಲಾಕ್​ಡೌನ್ ಸಡಿಲಿಕೆ ನಂತರ ನಗರದಲ್ಲಿ ಜೂನ್​​​ನಲ್ಲಿ 47 ಮೃತಪಟ್ಟಿದ್ದರೆ, 170 ಮಂದಿ ಗಾಯಗೊಂಡಿದ್ದಾರೆ. ಅದೇ ರೀತಿ, ಜುಲೈನಲ್ಲಿ 48 ಸಾವು, 152 ಗಾಯಾಳು, ಆಗಸ್ಟ್​​ನಲ್ಲಿ 50 ಸಾವು, 198 ಗಾಯಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಕೋರಮಂಗಲ, ಹೆಬ್ಬಾಳ, ಯಲಹಂಕ, ಮೈಸೂರು ರಸ್ತೆ, ಕೆ.ಆರ್.‌ಪುರ, ಬಳ್ಳಾರಿ ರಸ್ತೆ, ಸಿಲ್ಕ್​​​ ಬೋರ್ಡ್​​​ನಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಹಾಗೆಯೇ ರಾಜ್ಯದ ಹಲವು ನಗರಗಳಲ್ಲಿ ಅಪಘಾತವಾಗುವ ರಸ್ತೆಗಳನ್ನು ಬ್ಲಾಕ್ ಸ್ಪಾಟ್​​​ ಗುರುತಿಸಿ ಆ ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಹೊಸ ತಂತ್ರಜ್ಞಾನ ಬಳಸಿ ಅಪಘಾತಗಳ ಕಡಿವಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.