ETV Bharat / city

ಪೊಲೀಸ್ ಆಯುಕ್ತರ ಹೆಸರು ಬಳಸಿ 42 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ವ್ಯಕ್ತಿಗೆ ₹20 ಸಾವಿರ ದಂಡ - ಸಂಚಾರಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡ

ಈ ಬಗ್ಗೆ ಮಾಹಿತಿ ಪಡೆದ ಜಂಟಿ ಪೊಲೀಸ್ ಆಯಕ್ತ ಡಾ. ಬಿ ಆರ್ ರವಿಕಾಂತೇಗೌಡ ಆರೋಪಿಯ ಪತ್ತೆಗಾಗಿ ಜಯನಗರ ಸಂಚಾರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್‌ ಪಿ ಎನ್ ಈಶ್ವರಿ ನೇತೃತ್ವದಲ್ಲಿ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಸೂಚಿಸಿದ್ದರು..

a man 42 times traffic rules break in bangalore in the name of traffic police commissioner srikantegowda in bangalore
ಸಂಚಾರಿ ಪೊಲೀಸ್ ಆಯುಕ್ತರ ಹೆಸರು ಬಳಸಿ ನಿಯಮ ಉಲ್ಲಂಘನೆ; 20 ಸಾವಿರ ದಂಡ ಹಾಕಿ ಬೈಕ್‌ ಸೀಜ್‌ ಮಾಡಿದ ಖಾಕಿ
author img

By

Published : Sep 11, 2021, 8:59 PM IST

ಬೆಂಗಳೂರು : ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ ಆರ್ ರವಿಕಾಂತೇಗೌಡ ಅವರ ಅಭಿಮಾನಿ ಎಂದು ಬೈಕ್ ಮೇಲೆ ಹೆಸರು ಹಾಗೂ ಪ್ರೆಸ್ ಅಂತಾ ಮುದ್ರಿಸಿಕೊಂಡು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ಜಯನಗರ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದು ಬೈಕ್ ಜಪ್ತಿ ಮಾಡಿದ್ದಾರೆ.

ತ್ಯಾಗರಾಜ ನಗರದ ನಿವಾಸಿ ಪಿ.ಗಿರೀಶ್ ಬಾಬು (58) ಎಂಬುವರ ಬೈಕ್ ಜಪ್ತಿ ಮಾಡಲಾಗಿದೆ. ಈತ ಈವರೆಗೂ 42 ಸಂಚಾರ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. 20,200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಗಿರೀಶ್ ಬಾಬು ತಾನು ಆರ್‌ಟಿಐ ಕಾರ್ಯಕರ್ತ ಎಂದು ಘೋಷಿಸಿಕೊಂಡಿದ್ದ. ಕೆಲ ಅಧಿಕಾರಿಗಳ ವಿರುದ್ಧ ದೂರು ನೀಡುವುದು ಹಾಗೂ ಸಾರ್ವಜನಿಕರಲ್ಲಿ ಪ್ರಭಾವ ಬೀರಲು ತನ್ನ ಬೈಕ್‍ನ ನಂಬರ್ ಪ್ಲೇಟ್ ಮೇಲೆ ರವಿಕಾಂತೇಗೌಡರ ಹೆಸರು ಮತ್ತು ಪ್ರೆಸ್ ಎಂದು ಮುದ್ರಿಸಿಕೊಂಡು ಓಡಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು.

ಈ ಬಗ್ಗೆ ಮಾಹಿತಿ ಪಡೆದ ಜಂಟಿ ಪೊಲೀಸ್ ಆಯಕ್ತ ಡಾ. ಬಿ ಆರ್ ರವಿಕಾಂತೇಗೌಡ ಆರೋಪಿಯ ಪತ್ತೆಗಾಗಿ ಜಯನಗರ ಸಂಚಾರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್‌ ಪಿ ಎನ್ ಈಶ್ವರಿ ನೇತೃತ್ವದಲ್ಲಿ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಸೂಚಿಸಿದ್ದರು.

ಈ ತಂಡ ಆರೋಪಿಯನ್ನು ಪತ್ತೆ ಮಾಡಿ, ವಾಹನ ವಶಕ್ಕೆ ಪಡೆದಿದೆ. ಯಾರಾದರೂ ಹೀಗೆ ಪೊಲೀಸ್ ಅಧಿಕಾರಿಗಳ ಅಥವಾ ಮಾಧ್ಯಮದ ಹೆಸರು ದುರ್ಬಳಕೆ ಮಾಡಿಕೊಂಡು ಓಡಾಡುತ್ತಿದ್ದಲ್ಲಿ ಸಂಬಂಧಪಟ್ಟ ಠಾಣೆಗೆ ತಿಳಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.

ಆರೋಪಿ ಪತ್ತೆಯಾಗಿದ್ದರಿಂದ ಈವರೆಗೂ 42 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. 20,200 ರೂ. ದಂಡ ವಿಧಿಸಿ ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.