ಬೆಂಗಳೂರು: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರಣ್ಣಪಾಳ್ಯದ ಮನೆಯೊಂದರಲ್ಲಿ ನಡೆದಿದೆ.
26 ವರ್ಷದ ಸಂಗೀತಾ ನೇಣಿಗೆ ಶರಣಾದ ಮಹಿಳೆ. ಮಂಡ್ಯ ಮೂಲದ ಸಂಗೀತಾ ಕಳೆದ ಒಂದೂವರೆ ವರ್ಷದ ಹಿಂದೆ ನೆಲಮಂಗಲ ಮೂಲದ ವಿನಯ್ ನನ್ನು ಪ್ರೀತಿಸಿ (ನಾಲ್ಕು ವರ್ಷ ಪ್ರೀತಿಸಿ ವಿವಾಹ) ಮದುವೆಯಾಗಿದ್ದರು. ಆರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ನಡುವೆ ಕಾಲಕ್ರಮೇಣ ಮಕ್ಕಳಾಗದ ವಿಚಾರಕ್ಕಾಗಿ ಅಸಮಾಧಾನ ಉಂಟಾಗಿತ್ತು.
ವೀರಣ್ಣನಪಾಳ್ಯದಲ್ಲಿ ವಾಸವಾಗಿದ್ದ ದಂಪತಿ ಇಬ್ಬರೂ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮಗುವಾಗಿಲ್ಲ ಎಂಬ ವಿಚಾರವಾಗಿ ಗಂಡ ವಿನಯ್ ಕಿರುಕುಳ ನೀಡುತ್ತಿದ್ದ ಎಂದು ಡೆತ್ ನೋಟ್ ಬರೆದಿಟ್ಟು, ನಿನ್ನೆ ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿನಯ್ ನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ತವರು ಮನೆಯಿಂದ ಪತ್ನಿಯನ್ನು ಕಳಿಸದಿದ್ದಕ್ಕೆ ಅತ್ತೆಯ ಮೇಲೆ ಬ್ಲೇಡ್ನಿಂದ ಹಲ್ಲೆ ಮಾಡಿದ ಅಳಿಯ