ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣಿಸಲು ಬಂದ ಶಾಸಕ ಎನ್. ಎ.ಹ್ಯಾರಿಸ್ ಸಂಬಂಧಿಯೋರ್ವರ ಬ್ಯಾಗ್‌ನಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿದೆ.
ಮಂಗಳವಾರ ಬೆಳಗ್ಗೆ 9.30ಕ್ಕೆ ಫರೂಕ್ ಎಂಬುವರು ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣಿಸಲು ಬಂದಿದ್ದರು. ವಿಮಾನ ಹತ್ತುವ ಮುನ್ನ ಭದ್ರತಾ ಸಿಬ್ಬಂದಿ ಲಗೇಜ್ ತಪಾಸಣೆ ನಡೆಸಿದಾಗ, ಬ್ಯಾಗ್‌ನಲ್ಲಿ 2 ಜೀವಂತ ಗುಂಡುಗಳು ದೊರೆತಿವೆ.
ಕೂಡಲೇ ಭದ್ರತಾ ಪಡೆ ಹಾಗೂ ಸಿಐಎಸ್‌ಎಫ್ ಅಧಿಕಾರಿಗಳು ಫಾರೂಕ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಫಾರೂಕ್ ಪರವಾನಗಿ ತೋರಿಸಿದ್ದಾರೆ. ಈ ವೇಳೆ ಪೊಲೀಸರು ಎರಡು ಬುಲೆಟ್ಗಳನ್ನು ವಶಕ್ಕೆ ಪಡೆದುಕೊಂಡು ನಂತರ ಖಡಕ್ ಎಚ್ಚರಿಕೆ ನೀಡಿ, ಬಳಿಕ ವಿಮಾನ ಏರಲು ಅವಕಾಶ ಮಾಡಿಕೊಟ್ಟರು.