ಬೆಂಗಳೂರು: ಕೊರೊನಾ ಸೋಂಕಿಗೆ ಬೆಂಗಳೂರಿನಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 52ಕ್ಕೆ ಏರಿಕೆ ಆಗಿದೆ. ಇದಲ್ಲದೆ ಇಂದು 187 ಹೊಸ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,408ಕ್ಕೆ ಏರಿಕೆ ಆಗಿದೆ.
ಇಂದು ಒಂದೇ ದಿನ ರಾಜ್ಯದಲ್ಲಿ 110 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 1,328 ಮಂದಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 2,026 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ಇದರಲ್ಲಿ 12 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಪತ್ತೆಯಾಗಿರುವ ಪ್ರಕರಣದಲ್ಲಿ 117 ಅಂತಾರಾಜ್ಯ ಪ್ರಯಾಣಿಕರು ಇದ್ದು, 3 ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಸೋಂಕು ಕಂಡು ಬಂದಿದೆ.
ರಾಜ್ಯದಲ್ಲಿ ಈವರೆಗೆ 3,04,816 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಈವರೆಗೂ 3,408 ಪಾಸಿಟಿವ್ ಕೇಸ್ಗಳು ವರದಿಯಾಗಿವೆ.
ಇಂದು ಉಡುಪಿಯಲ್ಲಿ ಬರೋಬ್ಬರಿ 73 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 260ಕ್ಕೆ ಏರಿಕೆ ಆಗಿದೆ. ಇಂದು ವರದಿಯಾಗಿರುವ ಪಾಸಿಟಿವ್ ಕೇಸ್ಗಳಲ್ಲಿ ಬರೋಬ್ಬರಿ 45 ಸೋಂಕಿತರಿಗೆ ಸೋಂಕು ಹೇಗೆ ತಗುಲಿದೆ ಎಂಬುದೇ ಗೊತ್ತಿಲ್ಲ. ಸೋಂಕು ತಗುಲಿರುವ ಮೂಲ ಪತ್ತೆ ಮಾಡುವ ಕಾರ್ಯವನ್ನ ಆರೋಗ್ಯ ಇಲಾಖೆ ಮುಂದುವರೆಸಿದೆ.
ಸಕ್ರಿಯ ಕೊರೊನಾ ಪ್ರಕರಣಗಳ ಟಾಪ್ 8 ಜಿಲ್ಲೆಗಳಲ್ಲಿ ಮೊದಲ ಸ್ಥಾನದಲ್ಲಿ ಯಾದಗಿರಿ ಇದ್ದರೆ, ಮಂಡ್ಯ ಎರಡನೇ ಸ್ಥಾನ ಹಾಗೂ ಉಡುಪಿ ಮೂರನೇ ಸ್ಥಾನದಲ್ಲಿದೆ..
ಸಕ್ರಿಯ ಪ್ರಕರಣಗಳು...
- ಯಾದಗಿರಿ- 257
- ಮಂಡ್ಯ- 224
- ಉಡುಪಿ- 196
- ರಾಯಚೂರು- 179
- ಕಲಬುರಗಿ- 170
- ಹಾಸನ- 143
- ಬೆಂಗಳೂರು- 136
- ಬೀದರ್ - 119