ETV Bharat / city

ನೆಲಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ: 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

ನೆಲಮಂಗಲ ಗ್ರಾಮಾಂತರ, ದಾಬಸ್ ಪೇಟೆ, ನೆಲಮಂಗಲ ಟೌನ್ ಹಾಗೂ ಮಾದನಾಯಕನಹಳ್ಳಿ ಠಾಣೆ ಸರಹದ್ದಿನಲ್ಲಿ ದಾಖಲಾಗಿದ್ದ ಸರಗಳ್ಳತನ, ಸುಲಿಗೆ, ನಂಬಿಕೆ ದ್ರೋಹ ಹಾಗೂ ಗಾಂಜಾ ಸಾಗಣೆ ಸೇರಿದಂತೆ ಪೊಲೀಸರು 10 ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಮಾಡಿ ಒಟ್ಟು 14 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

nelamangala police
ಪೊಲೀಸರ ಭರ್ಜರಿ ಕಾರ್ಯಾಚರಣೆ
author img

By

Published : Jul 17, 2021, 7:11 AM IST

ನೆಲಮಂಗಲ: ನೆಲಮಂಗಲ ಉಪವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಒಟ್ಟು 26,74,000 ಮೌಲ್ಯದ ಚಿನ್ನಾಭರಣ ಹಾಗೂ 12 ಕೆ.ಜಿ ಗಾಂಜಾ ಸೇರಿದಂತೆ ಹತ್ತು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಮಾಡಿ ಒಟ್ಟು 14 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಠಾಣೆ ಎಸ್​ಪಿ ಡಾ. ಕೋನ ವಂಸಿ ಕೃಷ್ಣ ಮಾಹಿತಿ

ನೆಲಮಂಗಲ ಟನ್​ ಪೊಲೀಸ್ ಠಾಣೆಯ ಆವರಣದಲ್ಲಿ ಮಾಧ್ಯಮಗೋಷ್ಟಿ ಆಯೋಜಿಸಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಠಾಣೆ ಎಸ್​ಪಿ ಡಾ. ಕೋನ ವಂಸಿ ಕೃಷ್ಣ, ನೆಲಮಂಗಲ ಉಪವಿಭಾಗದ ಪೊಲೀಸ್ ಠಾಣೆಗಳಾದ ನೆಲಮಂಗಲ ಗ್ರಾಮಾಂತರ, ದಾಬಸ್ ಪೇಟೆ, ನೆಲಮಂಗಲ ಟೌನ್ ಹಾಗೂ ಮಾದನಾಯಕನಹಳ್ಳಿ ಠಾಣೆ ಸರಹದ್ದಿನಲ್ಲಿ ದಾಖಲಾಗಿದ್ದ ಸರಗಳ್ಳತನ, ಸುಲಿಗೆ, ನಂಬಿಕೆದ್ರೋಹ ಹಾಗೂ ಗಾಂಜಾ ಸಾಗಣೆಗೆ ಸಂಬಂಧಿಸಿದಂತೆ ಒಟ್ಟು 14 ಜನ ಆರೋಪಿಗಳನ್ನು ಹೆಡೆಮುರಿ ಕಟ್ಟಿರುವ ಬಗ್ಗೆ ಮಾಹಿತಿ ನೀಡಿದರು.

ಬಂಧಿತರಿಂದ 19,13,000 ಮೌಲ್ಯದ 490 ಗ್ರಾಂ ಚಿನ್ನದ ಆಭರಣಗಳು ಹಾಗೂ 3 ಲಕ್ಷ ರೂ. ಬೆಲೆ ಬಾಳುವ 12 ಕೆ.ಜಿ ಗಾಂಜಾ ಮತ್ತು 4,61,000 ರೂ. ನಗದನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ ನೆಲಮಂಗಲ ಉಪವಿಭಾಗದ ಪೊಲೀಸರ ಕಾರ್ಯವನ್ನು ಎಸ್​ಪಿ ಶ್ಲಾಘಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.