ಬೆಂಗಳೂರು: ರಾಜ್ಯದಲ್ಲಿಂದು 1,35,974 ಜನರಿಗೆ ಕೊರೊನಾ ಟೆಸ್ಟ್ ಮಾಡಲಾದೆ. ಇವರ ಪೈಕಿ 1,291 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,85,238 ಕ್ಕೆ ಏರಿಕೆ ಕಂಡಿದೆ.
ಇದೇ ಮೊದಲ ಬಾರಿಗೆ ಗಣನೀಯವಾಗಿ ಹೊಸ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದೆ. ಈ ಮೂಲಕ ಪಾಸಿಟಿವಿಟಿ ದರ 0.94% ರಷ್ಟಿದೆ. ಇನ್ನು 3,015 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 28,21,491 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 27,527 ರಷ್ಟಿವೆ.
ಇಂದು 40 ಸೋಂಕಿತರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಸಾವಿನ ಸಂಖ್ಯೆ 36,197 ಕ್ಕೇರಿದೆ. ಸಾವಿನ ಶೇಕಡವಾರು ಪ್ರಮಾಣ 3.09 ಇದೆ. ಇಂದು ಯುಕೆಯಿಂದ 355 ಜನರು ರಾಜ್ಯಕ್ಕೆ ಬಂದಿದ್ದಾರೆ.
ವಾರದಿಂದ ಕೋವಿಡ್ ಇಳಿಕೆ
ದಿನನಿತ್ಯ ಲಕ್ಷದಷ್ಟು ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ವಾರದಿಂದ ಹೊಸ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಜುಲೈ ತಿಂಗಳಲ್ಲಿ ಇದೇ ಮೊದಲ ಬಾರಿಗೆ 1,291ಕ್ಕೆ ಇಳಿಕೆ ಕಂಡಿದೆ. ಕೋವಿಡ್ ಎರಡನೇ ಅಲೆ ತೀವ್ರತೆ ನಿಧಾನವಾಗಿ ಕಡಿಮೆ ಆಗುತ್ತಿರುವುದನ್ನು ಕಾಣಬಹುದಾಗಿದೆ.
ದಿನಾಂಕ | ಸೋಂಕಿತರ ಸಂಖ್ಯೆ |
12-7-2021 | 1386 |
13-7-2021 | 1913 |
14-7-2021 | 1990 |
15-7-2021 | 1977 |
16-7-2021 | 1806 |
17-7-2021 | 1869 |
18-7-2021 | 1708 |
19-7-2021 | 1291 |