ಬಳ್ಳಾರಿ: ಗಣಿನಾಡಿನ ಮರಿಸ್ವಾಮಿ ಮಠದಲ್ಲಿ ನವರಾತ್ರಿ ಮಹೋತ್ಸವ ನಡೆಯಿತು. ಸಾವಿರಾರು ಭಕ್ತರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.
ಇಂದಿನಿಂದ ಹತ್ತು ದಿನಗಳ ಕಾಲ ಈ ಪೂಜಾ ಕಾರ್ಯಕ್ರಮ ಜರುಗಲಿದೆ. ಮರಿ ಶಿವಯೋಗಿ ಕರ್ತೃ ಗದ್ದುಗೆಗೆ ಬೆಳಿಗ್ಗೆ 6.30ರಿಂದ 8.45ರವರೆಗೆ ಮಹಾರುದ್ರಾಭಿಷೇಕ, 1008 ಬಿಲ್ವಾರ್ಚನೆ, ಮಹಾಮಂಗಲ, ಗಣಾರಾಧನೆ ಸಾಮೂಹಿಕವಾಗಿ ಭಕ್ತರೊಂದಿಗೆ ಪೂಜೆ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರಿಗೆ ಅನ್ನದಾಸೋಹ ಮಾಡಲಾಯಿತು.
ಕವಿ ಚಕ್ರವರ್ತಿ ಡಾ. ಪುಟ್ಟರಾಜ ಗವಾಯಿ ಪುರಾಣ ಕಲಬುರಗಿ ಶರಣ ಬಸವೇಶ್ವರ ಪುರಾಣ ಪ್ರವಚನ ನಡೆಯಿತು. ಅಕ್ಟೋಬರ್ 3ರಂದು 108 ಜನ ಮುತ್ತೈದೆಯರಿಗೆ ಮಠದಲ್ಲಿ ಉಡಿ ತುಂಬುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ವೇಳೆ ಮರಿಸ್ವಾಮಿ ಮಠಕ್ಕೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಆಗಮಿಸಿದ್ದರು. ಮರಿಸ್ವಾಮಿ ಮಠದ ವಂಶಸ್ಥರು ಮತ್ತು ವಾಗೀಶ್, ಪಾಲಿಕೆಯ ಸದಸ್ಯ ಮರಿದೇವಯ್ಯ, ಎಂ.ಕಾರ್ತಿಕ್, ಆರತಿ ಹಾಜರಿದ್ದರು.