ETV Bharat / city

ಬಿಸಿಲೂರು ಬಳ್ಳಾರಿ ರೈಲು ನಿಲ್ದಾಣಕ್ಕೆ ಬಂತು ಸೋಲಾರ್ ಸಿಸ್ಟಮ್... ತಿಂಗಳಿಗೆ ಲಕ್ಷ, ಲಕ್ಷ ಉಳಿತಾಯ!

author img

By

Published : Apr 29, 2019, 4:36 PM IST

ಬಿಸಿಲೂರು ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಲಾಗಿದೆ. ಇನ್ಮುಂದೆ ರೈಲು ನಿಲ್ದಾಣದ ವಿದ್ಯುತ್ ದೀಪ, ಸೀಲಿಂಗ್ ಫ್ಯಾನ್ ಹಾಗೂ ಎಸಿ ಎಲ್ಲವೂ ಈ ಸೋಲಾರ್ ವಿದ್ಯುತ್ತಿನಿಂದಲೇ ಚಲಿಸಲಿವೆ. ವಿದ್ಯುತ್ ಪೂರೈಕೆಗಾಗಿ ಪಾವತಿಸಬೇಕಿದ್ದ 3-4 ಲಕ್ಷ ರೂ. ಹಣವು ಉಳಿತಾಯವಾಗಲಿದೆ.‌

ಬಳ್ಳಾರಿ ರೈಲು ನಿಲ್ದಾಣಕ್ಕೆ ಬಂತು ಸೋಲಾರ್ ಸಿಸ್ಟಮ್​

ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದ ರೈಲು ನಿಲ್ದಾಣದಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಲಾಗಿದ್ದು, ಇನ್ಮುಂದೆ ರೈಲು ನಿಲ್ದಾಣದ ವಿದ್ಯುತ್ ದೀಪ, ಸೀಲಿಂಗ್ ಫ್ಯಾನ್ ಹಾಗೂ ಎಸಿ ಈ ಸೋಲಾರ್ ವಿದ್ಯುತ್ತಿನಿಂದಲೇ ನಡೆಯಲಿವೆ.

ಹೌದು, ಬಳ್ಳಾರಿ ರೈಲು ನಿಲ್ದಾಣಕ್ಕೆ ಜೆಸ್ಕಾಂ ಕಂಪನಿಯಿಂದ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿತ್ತು.‌ ಅದರಿಂದ ತಿಂಗಳಿಗೆ ಸುಮಾರು 3-4 ಲಕ್ಷ ರೂ. ಗಳವರೆಗೆ ವಿದ್ಯುತ್ ಬಿಲ್ ಪಾವತಿಸಲಾಗುತ್ತಿತ್ತು. ಅದರಿಂದ ಈ ರೈಲು ನಿಲ್ದಾಣಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿತ್ತು. ಈಗ ಸೋಲಾರ್ ವ್ಯವಸ್ಥೆಯನ್ನ ಅಳವಡಿಸಿದ್ದರಿಂದ ವಿದ್ಯುತ್ ಪೂರೈಕೆಗಾಗಿ ಪಾವತಿಸಬೇಕಿದ್ದ ಹಣವು ಉಳಿತಾಯವಾಗಲಿದೆ.‌ ಆ ಹಣವನ್ನ ಬೇರೊಂದು ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಲು ಸಹಕಾರಿಯಾಗಲಿದೆ. ಅಂದಾಜು 170 ಕೆಬಿ ವ್ಯಾಟ್ ಸಾಮರ್ಥ್ಯವುಳ್ಳ ಈ ಸೋಲಾರ್ ಸಿಸ್ಟಮ್ ಅನ್ನು ರೈಲು ನಿಲ್ದಾಣದ ಶೆಲ್ಟರ್​ಗಳ ಮೇಲೆ ಅಳವಡಿಸಲಾಗಿದೆ. ಬಿಸಿಲ ನಾಡೆಂದೇ ಖ್ಯಾತಿಯಾಗಿರುವ ಈ ಬಳ್ಳಾರಿ ಜಿಲ್ಲೆಯಲ್ಲಿ ಸೋಲಾರ್ ಸಿಸ್ಟಮ್​ನಿಂದ ಅಗತ್ಯಕ್ಕಿಂತಲೂ ಹೆಚ್ಚು ವಿದ್ಯುತ್ ಶೇಖರಣೆಯಾಗುತ್ತೆ. ಶೂನ್ಯ ಬಂಡವಾಳ ಹೂಡಿಕೆಯಲ್ಲೇ ವಿದ್ಯುತ್​ನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ಬಳ್ಳಾರಿ ರೈಲು ನಿಲ್ದಾಣಕ್ಕೆ ಬಂತು ಸೋಲಾರ್ ಸಿಸ್ಟಮ್​

ಪ್ರತಿದಿನ 5-6 ಸಾವಿರ ಪ್ರಯಾಣಿಕರು ಪ್ರಯಾಣ:

ಪ್ರತಿದಿನ ಅಂದಾಜು 5-6 ಸಾವಿರ ಮಂದಿ ಪ್ರಯಾಣಿಕರು ಈ ರೈಲು ನಿಲ್ದಾಣ ಮಾರ್ಗವಾಗಿ ಸಂಚರಿಸುತ್ತಿರುವ ವಿವಿಧ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಪ್ರತಿದಿನ ತಡರಾತ್ರಿವರೆಗೂ ಅನೇಕ ರೈಲುಗಳು ಸಂಚರಿಸುತ್ತವೆ. ಈ ಸೋಲಾರ್ ಪದ್ಧತಿ ಅಳವಡಿಕೆಯಿಂದ ಸಾವಿರಾರು ಪ್ರಯಾಣಿಕರ ಜೊತೆಗೆ ರೈಲ್ವೆ ಇಲಾಖೆ ಸಿಬ್ಬಂದಿಗೂ ಅನುಕೂಲ ಆಗಿದೆ. ಅಲ್ಲದೇ, ದಿನದ 24 ನಾಲ್ಕು ಗಂಟೆಯೂ ವಿದ್ಯುತ್ ದೀಪ, ಫ್ಯಾನ್ ಹಾಗೂ ಎಸಿಯನ್ನ ಬಳಸಿದರೂ ವಿದ್ಯುತ್ ಬಿಲ್ ಪಾವತಿಸುವ ಆತಂಕ ದೂರ ಮಾಡಿದಂತಾಗಿದೆ.

Intro:ಬಳ್ಳಾರಿ ರೈಲು ನಿಲ್ದಾಣಕ್ಕೆ ಬಂತು ಸೋಲಾರ್ ಸಿಸ್ಟಮ್...
ಪ್ರತಿತಿಂಗಳು ಪಾವತಿಸಬೇಕಿದ್ದ ಮೂರ್ನಾಲ್ಕು ಲಕ್ಷ ರೂ.‌ ವಿದ್ಯುತ್ ಬಿಲ್ ಉಳಿತಾಯ!
ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದ ರೈಲ್ವೇ ನಿಲ್ದಾಣದಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಲಾಗಿದ್ದು, ಇನ್ಮುಂದೆ ರೈಲು ನಿಲ್ದಾಣದ ವಿದ್ಯುತ್ ದೀಪ, ಸೀಲಿಂಗ್ ಫ್ಯಾನ್ ಹಾಗೂ ಎಸಿ
ಈ ಸೋಲಾರ್ ವಿದ್ಯುತ್ತಿನಿಂದಲೇ ಶುರುವಾಗಲಿವೆ.
ಹೌದು, ಬಳ್ಳಾರಿ ರೈಲು ನಿಲ್ದಾಣಕ್ಕೆ ಜೆಸ್ಕಾಂ ಕಂಪನಿಯಿಂದ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿತ್ತು.‌ ಅದರಿಂದ ಸರಿ ಸುಮಾರು ಪ್ರತಿತಿಂಗಳು 3-4 ಲಕ್ಷ ರೂ.ಗಳವರೆಗೆ ವಿದ್ಯುತ್ ಬಿಲ್ ಪಾವತಿಸಲಾಗುತ್ತಿತ್ತು. ಅದರಿಂದ ಈ ರೈಲ್ವು ನಿಲ್ದಾಣಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿತ್ತು. ಈಗ ಸೋಲಾರ್ ವ್ಯವಸ್ಥೆಯನ್ನ ಅಳವಡಿಸಿದ್ದರಿಂದ ವಿದ್ಯುತ್ ಪೂರೈಕೆಗಾಗಿ ಪಾವತಿಸಬೇಕಿದ್ದ ಮೂರ್ನಾಲ್ಕು ಲಕ್ಷ ರೂ.ಗಳ ಹಣವು ಉಳಿತಾಯ ಆಗಲಿದೆ.‌ ಆ ಹಣವನ್ನ ಬೇರೊಂದು ಅಭಿವೃದ್ಧಿ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ.
ಅಂದಾಜು 170 ಕೆಬಿ ವ್ಯಾಟ್ ಸಾಮರ್ಥ್ಯ ಉಳ್ಳ ಈ ಸೋಲಾರ್ ಸಿಸ್ಟಮ್ ಅನ್ನು ರೈಲು ನಿಲ್ದಾಣದ ಶೆಲ್ಟರ್ ಗಳ ಮೇಲೆ ಅಳವಡಿಸಲಾಗಿದೆ. ಬಿಸಿಲ ನಾಡೆಂದೇ ಖ್ಯಾತಿಯಾಗಿ ರುವ ಈ ಬಳ್ಳಾರಿ ಜಿಲ್ಲೆಯಲ್ಲಿ ಸೋಲಾರ್ ಸಿಸ್ಟಮ್ ನಿಂದ ಅಗತ್ಯಕ್ಕಿಂತಲೂ ವಿದ್ಯುತ್ ಶೇಖರಣೆಯಾಗುತ್ತೆ. ಹಾಗೂ‌
ಶೂನ್ಯ ಬಂಡವಾಳ ಹೂಡಿಕೆಯಲ್ಲೇ ವಿದ್ಯುತ್ ಅನ್ನು ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ.

Body:ಪ್ರತಿದಿನ ಐದಾರು ಸಾವಿರ ಪ್ರಯಾಣಿಕರು ಪ್ರಯಾಣ: ಪ್ರತಿದಿನ ಅಂದಾಜು ಐದಾರು ಸಾವಿರ ಮಂದಿ ಪ್ರಯಾಣಿಕರು ಈ ರೈಲು ನಿಲ್ದಾಣ ಮಾರ್ಗವಾಗಿ ಸಂಚರಿಸುತ್ತಿರುವ ವಿವಿಧ ರೈಲುಗಳಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಪ್ರತಿದಿನ ತಡರಾತ್ರಿವರೆಗೂ ಅನೇಕ ರೈಲುಗಳು ಸಂಚರಿಸುತ್ತವೆ. ರಾಜ್ಯ ಹಾಗೂ ಅಂತಾರಾಜ್ಯಗಳ ಯುವಕ, ಯುವತಿಯರು, ಮಹಿಳೆಯರು, ಪುರುಷರು, ವೃದ್ಧರು, ಅನಾಥರು, ನಿರ್ಗತಿಕರು ಪ್ರಯಾಣ ಬೆಳೆಸಲಿದ್ದಾರೆ.
ಈ ಸೋಲಾರ್ ಪದ್ಧತಿ ಅಳವಡಿಸೋದರಿಂದ ಸಾವಿರಾರು ಪ್ರಯಾಣಿಕರಿಗೂ, ರೈಲ್ವೇ ನಿಲ್ದಾಣದ ಸಿಬ್ಬಂದಿಗೂ ಭಾರೀ ಅನುಕೂಲ ಆಗಿದೆ. ಅಲ್ಲದೇ, ದಿನದ ಇಪ್ಪತ್ತು ನಾಲ್ಕು ಗಂಟೆಯೂ ಕೂಡ ವಿದ್ಯುತ್ ದೀಪ, ಫ್ಯಾನ್ ಹಾಗೂ ಏಸಿ
ಯನ್ನ ಆನ್ ಮಾಡಿದರೂ, ವಿದ್ಯುತ್ ಬಿಲ್ ಪಾವತಿಸುವ ದುಗುಡತೆ ದೂರ ಮಾಡಿದಂತಾಗಿದೆ.
ಗುಂತಕಲ್ಲು-ಬಳ್ಳಾರಿ ಮಾರ್ಗವಾಗಿ ಚಲಿಸುವ ರೈಲುಗಳು ಯಾವ್ಯಾವು: ಕೊಲ್ಹಾಪುರ- ತಿರುಪತಿ, ಹುಬ್ಬಳ್ಳಿ- ವಿಜಯ ವಾಡ, ಹುಬ್ಬಳ್ಳಿ- ತಿರುಪತಿ, ಬಳ್ಳಾರಿ- ಹಿಂದೂಪುರ, ತಿರುಪತಿ ಎಕ್ಸ್‌ಪ್ರೆಸ್‌, ವಾಸ್ಕೋಡಿಗಾಮ- ಹೌರಾ, ಹುಬ್ಬಳ್ಳಿ- ವಿಜಯ ವಾಡ, ಮೈಸೂರು- ವಾರಣಾಸಿ, ಯಶವಂತಪುರ- ಟಾಟಾ ನಗರ, ಚಿಕ್ಕಜಾ ಜೂರು-ಗುಂತಕಲ್ಲು, ಜೋಧಪುರ- ಯಶವಂತಪುರ, ಅಜ್ಮೀರ್- ಯಶವಂತಪುರ, ಹಂಪಿ ಎಕ್ಸ್‌ಪ್ರೆಸ್, ಹುಬ್ಬಳ್ಳಿ- ಬೆಂಗಳೂರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_01_29_RAILWAY_STATION_SOLAR_SYSTEM_7203310

KN_BLY_01a_29_RAILWAY_STATION_SOLAR_SYSTEM_7203310

KN_BLY_01b_29_RAILWAY_STATION_SOLAR_SYSTEM_7203310

KN_BLY_01c_29_RAILWAY_STATION_SOLAR_SYSTEM_7203310

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.