ETV Bharat / city

ಬಳ್ಳಾರಿಯಲ್ಲಿ ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿರುವ ಗರ್ಭಿಣಿ, ನವಜಾತ ಶಿಶುಗಳು! - undefined

ಬಳ್ಳಾರಿ ಜಿಲ್ಲೆಯಲ್ಲಿ ನವಜಾತ ಶಿಶುಗಳು ಹಾಗೂ ಗರ್ಭಿಣಿಯರು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರತಿನಿತ್ಯ ಸಾಕಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿರುವ ಗರ್ಭಿಣಿ, ನವಜಾತ ಶಿಶುಗಳು
author img

By

Published : May 11, 2019, 8:34 PM IST

ಬಳ್ಳಾರಿ: ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದು, ನವಜಾತ ಶಿಶುಗಳು ಹಾಗೂ ಗರ್ಭಿಣಿಯರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಹೌದು.., ಜಿಲ್ಲೆಯ ಪ್ರತಿಯೊಂದು ನವಜಾತ ಶಿಶುಗಳು ಹಾಗೂ ಗರ್ಭಿಣಿಯರು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ವಿಜಯ ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ (ವಿಮ್ಸ್) ಪ್ರತಿ ದಿನ ದಾಖಲಾಗುತ್ತಿದ್ದಾರೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲೂ ನಿರ್ಜಲೀಕರಣ ಸಮಸ್ಯೆಯಿಂದ 80ಕ್ಕೂ ಅಧಿಕ ಗರ್ಭಿಣಿಯರು, ನವಜಾತ ಶಿಶುಗಳು ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಏಪ್ರಿಲ್​ ತಿಂಗಳಲ್ಲಿ ಕೂಡ 70 ಮಂದಿ ಈ ಸಮಸ್ಯೆಯಿಂದ ಬಳಲುತ್ತಿರುವ ಕುರಿತು ವರದಿಯಾಗಿದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುವುದರಿಂದ ಗರ್ಭಿಣಿಯರು ಹೃದ್ರೋಗ ಸೇರಿದಂತೆ ಇತರೆ ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಾರೆ ಎಂದು ಶಸ್ತ್ರ ಚಿಕಿತ್ಸಕ ಡಾ. ಎನ್.ಬಸರೆಡ್ಡಿ ಈಟಿವಿ ಭಾರತ್​ಗೆ ತಿಳಿಸಿದರು.

ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿರುವ ನವಜಾತ ಶಿಶುಗಳು

ಸಲಹೆಗಳು:

ಗ್ರಾಮೀಣ ಭಾಗದ ಗರ್ಭಿಣಿಯರು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ. ಇದೊಂದು ಮಾರಣಾಂತಿಕ ಕಾಯಿಲೆಯಾಗಿದ್ದು, ದೇಹದಲ್ಲಿ ನೀರಿನ ಅಂಶ ತಗ್ಗದಂತೆ ನೋಡಿಕೊಳ್ಳಬೇಕು. ಹಣ್ಣು, ಹಂಪಲನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಹೆಚ್ಚಾಗಿ ನೆರಳಿನಲ್ಲಿರಬೇಕೆಂದು ಡಾ. ಬಸರೆಡ್ಡಿ ಸಲಹೆ ನೀಡಿದ್ದಾರೆ.

ಈ ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಲು ಜಿಲ್ಲಾ ಸರ್ಕಾರಿ ಆಸ್ಪತ್ರೆಯು ಸದಾ ತಯಾರಿದೆ‌‌. ಈಗಾಗಲೇ 80ಕ್ಕೂ ಅಧಿಕ ಗರ್ಭಿಣಿಯರು ಹಾಗೂ ನವಜಾತ ಶಿಶುಗಳಿಗೆ ಚಿಕಿತ್ಸೆ‌ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ನಗರದ ವಿಮ್ಸ್ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ.

Intro:ಬಿರುಬಿಸಿಲಿಗೆ ಗಣಿನಾಡಿನ ನವಜಾತ ಶಿಶುಗಳೂ ತತ್ತರ.....
ಗರ್ಭೀಣಿಯರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿರುವ ನಿರ್ಜಲೀಕರಣ ಸಮಸ್ಯೆ!
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬೇಸಿಗೆ, ಅತೀ ಬೇಸಿಗೆಕಾಲ ಇರುತ್ತದೆಂಬ ಮಾತು ಜಗಜ್ಜಾಹೀರು ಆಗಿದೆ.
ಆ ಅತಿಯಾದ ಬೇಸಿಗೆಯೇ ಈ ದಿನ ನವಜಾತ ಶಿಶುಗಳ ಹಾಗೂ ಗರ್ಭೀಣಿಯರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲು ಹೊರಟಿದೆ.
ಹೌದು, ಅಕ್ಷರಶ: ಸತ್ಯವಿದು. ಬಳ್ಳಾರಿ ಜಿಲ್ಲೆಯ ಪ್ರತಿಯೊಂದು ನವಜಾತ ಶಿಶು ಹಾಗೂ ಗರ್ಭೀಣಿಯರು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಿರುಬಿಸಿಲಿನ ಬೇಗೆಯನ್ನು ತಾಳಲಾರದೇ ದೇಹದಲ್ಲಿನ ನೀರಿನ ತೇವಾಂಶ ಕಡಿಮೆಯಾಗಿ ಸಾಕಷ್ಟು ದೈಹಿಕ ಕಾಯಿಲೆಗೆ ಒಳಗಾಗಿರುವ ಉದಾಹರಣೆಗಳು ಸಾಕಷ್ಟಿವೆ.
ಅದರಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ವಿಜಯ ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ (ವಿಮ್ಸ್) ಆಸ್ಪತ್ರೆಗೆ ದಿನಾಲೂ ಸಾಕಷ್ಟು ನವಜಾತ ಶಿಶುಗಳು, ಗರ್ಭೀಣಿಯರೂ ಕೂಡ ದಾಖಲಾಗುತ್ತಿದ್ದಾರೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆಗೋದರಿಂದ ಗರ್ಭೀಣಿಯರ ಹೃದ್ರೋಗ ಸೇರಿದಂತೆ ಇತರೆ ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಾರೆ.‌ ಇದೊಂದು ಮಾರಾಣಾಂತಿಕ ಕಾಯಿಲೆಯಾಗಿದ್ದು, ದೇಹಲ್ಲಿನ ನೀರಿನ ತೇವಾಂಶ ತಗ್ಗದಂತೆ ನೋಡಿಕೊಳ್ಳೋದು ನಮ್ಮೆಲ್ಲರ ಜವಾಬ್ದಾರಿ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.
ನೂರಾರು ಮಂದಿ ಆಸ್ಪತ್ರೆ ಪಾಲು: ಬಿರುಬಿಸಿಲಿನ ಝಳದಿಂದಾಗಿ ದೇಹದಲ್ಲಿ ಈ ನಿರ್ಜಲೀಕರಣ ಸಮಸ್ಯೆ
ಯಿಂದ ಪ್ರತಿದಿನ ಐದಾರು ಮಂದಿ ನವಜಾತ ಶಿಶು ಹಾಗೂ ಗರ್ಭೀಣಿಯರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.

Body:ಕಳೆದವರ್ಷ ಮಾರ್ಚ್ ತಿಂಗಳಲ್ಲೂ ನಿರ್ಜಲೀಕರಣ ಸಮಸ್ಯೆ ಯಿಂದ ಸರಿಸುಮಾರು ಎಂಭತ್ತಕ್ಕೂ ಅಧಿಕ ಗರ್ಭೀಣಿಯರು, ನವಜಾತ ಶಿಶುಗಳು ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ತಿಂಗಳು ಕೂಡ ಎಪ್ಪತ್ತು ಮಂದಿ ನಿರ್ಜಲೀಕರಣ ಸಮಸ್ಯೆಯಿಂದ ಬಳ ಲುತ್ತಿರುವ ಕುರಿತು ವರದಿಯಾಗಿದೆ ಎಂದರು.
ಸಲಹೆ: ವಿಶೇಷವಾಗಿ ಗ್ರಾಮೀಣ ಭಾಗದ ಗರ್ಭೀಣಿಯರು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ. ಆಗಾಗಿ, ಗ್ರಾಮೀಣ ಭಾಗದ ಗರ್ಭೀಣಿಯರು ಮೇಲಿಂದ ಮೇಲೆ ನೀರನ್ನು ಸೇವನೆ ಮಾಡಬೇಕು. ಹಾಗೂ ನೆರಳಲ್ಲೇ ಹೆಚ್ಚಾಗಿ ವಾಸ ಮಾಡಬೇಕು. ಹಣ್ಣು, ಹಂಪಲನ್ನು ಹೆಚ್ಚಾಗಿ ಸೇವನೆ ಮಾಡಬೇಕು ಎಂದು ಡಾ.ಬಸರೆಡ್ಡಿ ಸಲಹೆ ನೀಡಿದ್ದಾರೆ.
ಅಗತ್ಯ ಸೌಲಭ್ಯ: ಈ ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ನೀಡಲು ಜಿಲ್ಲಾ ಸರ್ಕಾರಿ ಆಸ್ಪತ್ರೆಯು ಸದಾ ತಯಾರಿದೆ‌‌. ಈಗಾಗಲೇ ಎಂಭತ್ತಕ್ಕೂ ಅಧಿಕ ಮಂದಿ ಗರ್ಭೀಣಿಯರು ಹಾಗೂ ನವ
ಜಾತ ಶಿಶುಗಳಿಗೆ ವೈದ್ಯಕೀಯ ಚಿಕಿತ್ಸೆ‌ ನೀಡಲಾಗುತ್ತದೆ ಎಂದರು.
ವಿಮ್ಸ್ ಆಸ್ಪತ್ರೆಯಲ್ಲೂ ದಾಖಲು: ನವಜಾತ ಶಿಶು
ಹಾಗೂ ಗರ್ಭೀಣಿಯರು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದು, 70 ಕ್ಕೂ ಅಧಿಕ ಮಂದಿ ಈ ಸಮಸ್ಯೆಗೆ
ಸೂಕ್ತ ಚಿಕಿತ್ಸೆ ಪಡೆಯುವ ಸಲುವಾಗಿಯೇ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_10_SMALL_BABIES_FACING_DEHYDRATION_7203310

KN_BLY_02b_10_SMALL_BABIES_FACING_DEHYDRATION_BYTE_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.