ಬಳ್ಳಾರಿ: ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ ಹಣ್ಣು ಮಾರುತ್ತಿದ್ದ ವ್ಯಾಪಾರಸ್ಥರಿಗೆ ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಬುದ್ಧಿ ಹೇಳಿ ನಗರದ ಮುನ್ಸಿಪಾಲ್ ಮೈದಾನಕ್ಕೆ ಟ್ರ್ಯಾಟರ್ ಮೂಲಕ ರೈತರು ಬೆಳೆದ ಕರಬುಜಾ ಹಣ್ಣುಗಳನ್ನ ಸ್ಥಳಾಂತರ ಮಾಡಿದ್ರು.
ಬಳ್ಳಾರಿ ನಗರದ ವಡ್ಡರಬಂಡೆ ಸರ್ಕಲ್ನಲ್ಲಿ ಹತ್ತಾರು ರೈತರು ಕರಬುಜಾ ಹಣ್ಣು ವ್ಯಾಪಾರ ಮಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ವ್ಯಾಪಾರಸ್ಥರಿಗೆ ತಿಳಿಹೇಳಿ ಮುನ್ಸಿಪಲ್ ಮೈದಾನಕ್ಕೆ ಸ್ಥಳಾಂತರ ಮಾಡಿದರು. ನಗರದ ಹೊರವಲಯದ ನಾಗೇನಹಳ್ಳಿಯಿಂದ ಹತ್ತಾರು ಹಣ್ಣು ಮಾರಾಟ ಮಾಡುವ ವ್ಯಾಪಾರಸ್ಥರು ಹಣ್ಣುಗಳನ್ನು ತೆಗೆದುಕೊಂಡು ಬಂದು ನಗರದಲ್ಲಿ ವ್ಯಾಪಾರ ಮಾಡುತ್ತಿದ್ದರು.
ಕೊರೊನಾ ವೈರಸ್ ಮುಂಜಾಗ್ರತೆ ದೃಷ್ಟಿಯಿಂದ ಜಿಲ್ಲಾಡಳಿತ ತಾತ್ಕಾಲಿಕವಾಗಿ ಹಣ್ಣುಗಳನ್ನು ಮುನ್ಸಿಪಲ್ ಮೈದಾನದಲ್ಲಿ ಮಾರಾಟ ಮಾಡಬೇಕಾಗಿತ್ತು. ಆದರೆ ಇವರು ವಡ್ಡರಬಂಡೆಯ ಸರ್ಕಲ್ನಲ್ಲಿ ಮಾರಾಟ ಮಾಡುತ್ತಿದ್ದರು.