ಬಳ್ಳಾರಿ: ನಗರದ ಹೋಲ್ಸೇಲ್ ಅಂಗಡಿಗಳು ಗುಟ್ಕಾ, ಸಿಗರೇಟ್‌ನ ಸಣ್ಣಪುಟ್ಟ ಚಿಲ್ಲರೆ ಅಂಗಡಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿವೆ. ಆದರೂ ಇವುಗಳನ್ನ ಖರೀದಿ ಮಾಡುವ ಸಣ್ಣಪುಟ್ಟ ಅಂಗಡಿಗಳ ವ್ಯಾಪಾರಿಗಳು ಗ್ರಾಹಕರಿಗೆ ದುಪ್ಪಟ್ಟಾದ ಬೆಲೆಗೆ ಮಾರಾಟ ಮಾಡ್ತಿದ್ದಾರೆ. ಆದರೂ ಸಿಗರೇಟ್ ಹಾಗೂ ಗುಟ್ಕಾ ಸೇವಿಸುವ ಚಟಗಾರರ ಸಂಖ್ಯೆ ಕಡಿಮೆಯಾಗಿಲ್ಲ.
ಸಿಗರೇಟ್ ಬೆಲೆ ಹೀಗಿದೆ : ಲಾಕ್ಡೌನ್ ಸಮಯದಲ್ಲಿ 10 ರೂ. ಸಿಗರೇಟ್‌ನ ₹35,₹40,₹50ಗೆ ಮಾರಾಟ ಮಾಡುತ್ತಿದ್ದಾರೆ. 17 ರೂ. ಲೈಟ್ ಸಿಗರೇಟ್ಗೆ ಈಗ ₹30. ಒಂದು ಪ್ಯಾಕ್ ಕಿಂಗ್ ಸಿಗರೇಟ್ ಲಾಕ್ಡೌನ್ಗಿಂತ ಮುಂಚೆ ₹160 ಇತ್ತು. ಈಗ ಅದು 260 ರೂಪಾಯಿಗೆ ಹೋಲ್ಸೇಲ್ ಅಂಗಡಿಯಲ್ಲಿ ಮಾರಾಟವಾಗುತ್ತಿದೆ. ಚಿಲ್ಲರೆ ವ್ಯಾಪಾರಸ್ಥರು ಅದನ್ನು ಹೆಚ್ಚಿನ ಬೆಲೆಗೆ ಜನರಿಗೆ ಮಾರಾಟ ಮಾಡುತ್ತಿದ್ದಾರೆ ಅಂತಾ ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರು ಹೇಳ್ತಿದ್ದಾರೆ.
ಪ್ಲೇಯಸ್ಸ್, ವೇವ್ ಮತ್ತು ಟೋಟಲ್ ಸಿಗರೇಟ್ ಮೊದಲು 5 ರೂಪಾಯಿ ಇತ್ತು. ಈಗ 10,11,12 ರೂಪಾಯಿಗೆ ಮಾರಾಟವಾಗುತ್ತಿದೆ. ಬ್ಲ್ಯಾಕ್, ಕ್ಲಾಸಿಕ್, ಮೆಂತಾಲ್, ಲೈಟ್ ಮೊಂಡೋ ಸಿಗರೇಟ್ಗಳಿಂದ ಚಿಲ್ಲರೆ ವ್ಯಾಪಾರಸ್ಥರು ಈ ಲಾಕ್ಡೌನ್ ಸಮಯದಲ್ಲಿ ಒಳ್ಳೆಯ ಲಾಭಗಳಿಸುತ್ತಿದ್ದಾರೆ.
ಗುಟ್ಕಾ ಮಾರಾಟ ಬೆಲೆ : ₹10 ಆರ್‌ಎಂಡಿ 50 ರೂಪಾಯಿಗೆ, ₹5 ವಿಮಲ್ 25 ರೂ., ₹10 ಮಧು 50 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ. ಆದರೆ, ಪೊಲೀಸ್ ಇಲಾಖೆ ಮಾತ್ರ ಈ ಬಗ್ಗೆ ಇನ್ನೂ ಕ್ರಮಕೈಗೊಂಡಿಲ್ಲ ಎಂಬ ಆರೋಪವೂ ಇದೆ.