ಹೊಸಪೇಟೆ (ವಿಜಯನಗರ): ತಾಲೂಕಿನಲ್ಲಿ ಕೋವಿಡ್ ಅಬ್ಬರ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಸಂಕಷ್ಟ ಸಮಯದಲ್ಲಿ ಏಕಲವ್ಯ ಯುವಕರ ಸಂಘವು ಉಚಿತ ಆ್ಯಂಬುಲೆನ್ಸ್ ಸೇವೆ ನೀಡಲು ಮುಂದಾಗಿದೆ.
ಏಕಲವ್ಯ ಯುವಕರ ಸಂಘದ ಕಾರ್ಯಕ್ಕೆ ನಗರದ ಉಪವಿಭಾಗಾಧಿಕಾರಿ, ತಹಶೀಲ್ದಾರ್, ನಗರಸಭೆ ಪೌರಾಯುಕ್ತರು ಸಾಥ್ ನೀಡಿದ್ದಾರೆ. ಹೊಸಪೇಟೆ ನಗರದಲ್ಲಿ ಆಕ್ಸಿಜನ್ ಸೌಲಭ್ಯವಿರುವ ಆ್ಯಂಬುಲೆನ್ಸ್ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರು 9900196963, 9980897767 ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದೆ.
ಹೊಸಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ಡಿ.ಭಾಸ್ಕರ್ ಮಾತನಾಡಿ, ಏಕಲವ್ಯ ಯುವಕರ ಸಂಘ ಸಂಕಷ್ಟದ ಕಾಲದಲ್ಲಿ ತಾಲೂಕು ಆಡಳಿತಕ್ಕೆ ಆ್ಯಂಬುಲೆನ್ಸ್ ಸೇವೆ ನೀಡುತ್ತಿದೆ. ಹಿರಿಯರ ಮಾರ್ಗದರ್ಶನದಲ್ಲಿ ಯುವಕರ ಕಾರ್ಯ ಮೆಚ್ಚುವಂಥದ್ದು. ಕೊರೊನಾ ಸೋಂಕು ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ರೋಗಿಗಳನ್ನು ಕಾಯಿಸುವುದು ತಪ್ಪು. ರೋಗಿಗಳಿಗೆ ಈ ಆ್ಯಂಬುಲೆನ್ಸ್ ನೆರವಾಗಲಿದೆ. ಆ್ಯಂಬುಲೆನ್ಸ್ ಸೇವೆ ನೀಡಲು ಮುಂದೆ ಬಂದ ಯುವಕರಿಗೆ ಅಗತ್ಯ ಆರೋಗ್ಯ ರಕ್ಷಣಾ ಪರಿಕರಗಳನ್ನು ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: 3 ದಿನದ ಹಿಂದೆ ಪತಿ ಕೊರೊನಾಗೆ ಬಲಿ: ನೊಂದು ಆತ್ಮಹತ್ಯೆಗೆ ಶರಣಾದ 3 ತಿಂಗಳ ಗರ್ಭಿಣಿ ಪತ್ನಿ