ವಿಜಯನಗರ: ಜಿಲ್ಲೆಯ ಹೂವಿನಹಡಗಲಿಯ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪರಮೇಶ್ವರಪ್ಪ ಮನೆ, ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿರಂತರ ಐದು ಗಂಟೆಯಿಂದಲೂ ಎಸಿಬಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ದಾಳಿ ವೇಳೆ ಚಿನ್ನಾಭರಣ, ಬೆಳ್ಳಿ ನಾಣ್ಯ ಹಾಗೂ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ.
ಅಕ್ರಮ ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಪರಮೇಶ್ವರಪ್ಪ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಕಚೇರಿ, ಚಿತ್ರದುರ್ಗ ಸ್ವಂತ ನಿವಾಸದ ಮೇಲೆ ಎಸಿಬಿ ಮೂರು ತಂಡದಿಂದ 18ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿದ್ದಾರೆ. ಪರಮೇಶ್ವರಪ್ಪ ಪತ್ನಿ ಬಳಿ ಇರುವ ಎರಡು ಮಾಂಗಲ್ಯ ಸರ, ನೆಕ್ಲೇಸ್, ಉಂಗುರ, ಬಂಗಾರದ ಬಳೆಗಳು, ಬೆಳ್ಳಿಯ ಆಭರಣಗಳ ಬಗ್ಗೆ ಎಸಿಬಿ ಮಾಹಿತಿ ಪಡೆಯುತ್ತಿದೆ. ಜೊತೆಗೆ ಕೂಡ್ಲಿಗಿ ಪಟ್ಟಣ ಕಚೇರಿ ಮೇಲೆ ಸಹ ದಾಳಿ ಮುಂದುವರೆದಿದೆ.
ಇದನ್ನೂ ಓದಿ: ಭ್ರಷ್ಟರ ಮೇಲೆ ACB ದಾಳಿ: ಕಂತೆ ಕಂತೆ ಹಣ, ಚಿನ್ನಾಭರಣ ಪತ್ತೆ